ಧರ್ಮಸ್ಥಳ, ಚಾಮುಂಡೇಶ್ವರಿ ಆಯ್ತು ಈಗ ಮದ್ದೂರು: ಅಶೋಕ್ ಕಿಡಿ

Public TV
2 Min Read

– ಇದೇ ರೀತಿ ಮುಂದುವರಿದ್ರೆ ಸಿದ್ದರಾಮಯ್ಯ ಮುಂದಿನ ವರ್ಷ ಗಣಪತಿ ಹಬ್ಬವನ್ನೇ ಬ್ಯಾನ್ ಮಾಡ್ತಾರೆ
– ಮದ್ದೂರು ಘಟನೆಗೆ ಸಿಎಂ, ಡಿಸಿಎಂ ಕ್ಷಮೆ ಕೇಳಬೇಕು

ಬೆಂಗಳೂರು: ಧರ್ಮಸ್ಥಳ ಆಯ್ತು, ಚಾಮುಂಡೇಶ್ವರಿ ಆಯ್ತು, ಈಗ ಮದ್ದೂರು. ಈ ಘಟನೆಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ರಾಜ್ಯ ಸರ್ಕಾರದ (Congress) ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಕಿಡಿಕಾರಿದ್ದಾರೆ.

ಮದ್ದೂರಿನಲ್ಲಿ (Maddur) ಗಣೇಶ ವಿಸರ್ಜನೆ ಮೆರವಣಿಗೆ (Ganesha Procession) ವೇಳೆ ಕಲ್ಲು ತೂರಾಟ (Stone Pelting) ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮದ್ದೂರು ಕಲ್ಲೆಸೆತ ಮತ್ತು ಲಾಠಿಚಾರ್ಜ್ ಹೇಯಕೃತ್ಯ. ಕಲ್ಲೆಸೆತಕ್ಕೆ ಸರ್ಕಾರದ ಕುಮ್ಮಕ್ಕಿದೆ. ಈ ಘಟನೆಗೆ ನೇರ ಕಾರಣ ಪೊಲೀಸ್ ಅವರು ಅಲ್ಲ, ಸರ್ಕಾರದ ಕುಮ್ಮಕ್ಕಿಲ್ಲದೇ ಈ ಘಟನೆಗಳು ನಡೆಯುತ್ತಿರಲಿಲ್ಲ. ನಾವು ಪಾಕಿಸ್ತಾನದಲ್ಲಿವೋ ಕರ್ನಾಟಕದಲ್ಲಿದ್ದೀವೋ ಎಂಬ ಭ್ರಮೆ ಮೂಡುತ್ತಿದೆ. ತಿಮರೋಡಿ ಗ್ಯಾಂಗ್ ಸಿದ್ದರಾಮಯ್ಯನ ಸುತ್ತ ಸುತ್ತಿಕೊಂಡಿದ್ದಾರೆ. ಗಣಪತಿ ವಿಸರ್ಜನೆ ಮಾಡುವುದು ಸಾರ್ವಜನಿಕ ರಸ್ತೆ. ಇವರ ಅಪ್ಪನ ಆಸ್ತಿನಾ? ನಾವು ಟ್ಯಾಕ್ಸ್ ಕೊಟ್ಟಿರುವುದು. ಇವರ ಯೋಗ್ಯತೆಗೆ ಅಲ್ಲಿ ಒಂದು ಮೀಸಲು ಪಡೆ ಇಟ್ಟಿದ್ದರೆ ಲಾಠಿ ಚಾರ್ಜ್ ಅವಶ್ಯಕತೆ ಇತ್ತಾ? ಹಿಂದೂಗಳ ಮೇಲೆ ಲಾಠಿ ಚಾರ್ಜ್, ದುಷ್ಕರ್ಮಿಗಳಿಗೆ ಯಾಕೆ ಬಡಿದಿಲ್ಲ? ಕಲ್ಲು ಎಸೆದವರಿಗೆ ಯಾಕೆ ಬಡಿದಿಲ್ಲ? ಈ ತರಹ ಗೂಂಡಾಗಳು ಮಸೀದಿಯಲ್ಲಿ ಇರುತ್ತಾರೆ ಅಂತಾ ನಿಮಗೆ ಜ್ಞಾನ ಬೇಡವೇ. ಮದ್ದೂರು ಘಟನೆಗೆ ಸಿಎಂ, ಡಿಸಿಎಂ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಒತ್ತಡಕ್ಕೆ ಮಣಿದರೆ ನಾನೇ ಮದ್ದೂರಿಗೆ ಬರಬೇಕಾಗುತ್ತೆ – ಮಂಡ್ಯ ಎಸ್ಪಿಗೆ ಹೆಚ್‌ಡಿಕೆ ಖಡಕ್ ವಾರ್ನಿಂಗ್

ವಿಧಾನಸೌಧದಲ್ಲೆ ಪಾಕಿಸ್ತಾನ ಪರ ಕೂಗಿದ ಮೇಲೆ ನಮ್ಮನ್ನು ಏನೂ ಮಾಡಲ್ಲ ಅಂತಾ ಟಿಪ್ಪು ಗ್ಯಾಂಗ್‌ಗೆ ಅನ್ನಿಸಲು ಶುರುವಾಯಿತು. ಈಗ ಎಲ್ಲಾ ಕಡೆ ಗಲಭೆಗಳನ್ನು ಮಾಡುತ್ತಿದ್ದಾರೆ. ಮಂಡ್ಯದಲ್ಲಿ, ಮೈಸೂರಿನಲ್ಲಿ ಇವರು ಸ್ಕೆಚ್ ಮಾಡಿಕೊಂಡುಬಿಟ್ಟಿದ್ದಾರೆ. ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ. ಜನರ ಮುಂದೆ ಸಿದ್ದರಾಮಯ್ಯ ಕ್ಷಮೆ ಕೇಳಬೇಕು. ಹಿಂದೂಗಳನ್ನೇ ಟಾರ್ಗೆಟ್, ಲಾಠಿ ಚಾರ್ಜ್ ಯಾಕೆ? ಕೇಳಿದರೆ ಹಿಂದೂಗಳು ಗಲಾಟೆ ಮಾಡುತ್ತಾರೆ ಅಂತೆ. ಹಿಂದೂಗಳು ಒಗ್ಗಟ್ಟಾಗಿಲ್ಲ ಅಂದರೆ ಇನ್ನುಮುಂದೆ ಇದೇ ಗತಿ. ವೋಟಿಗೋಸ್ಕರ ಸಿದ್ದರಾಮಯ್ಯ ಏನು ಬೇಕಾದರೂ ಮಾಡುತ್ತಾರೆ. ಅಧಿಕಾರ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ. ಧರ್ಮಸ್ಥಳ, ಚಾಮುಂಡೇಶ್ವರಿ, ಮದ್ದೂರು ಆಯಿತು. ಇನ್ನು ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ನಿಮ್ಮ ಮನೆಯಲ್ಲಿ ಬಂದು ಹೊಡೆಯುತ್ತಾರೆ, ಎಚ್ಚರಿಕೆಯಿಂದಿರಿ. ಇಲ್ಲದಿದ್ದರೆ ಪಾಕಿಸ್ತಾನ, ಟಿಪ್ಪು ಏರಿಯಾಗಳನ್ನು ಉತ್ಪತ್ತಿ ಮಾಡುತ್ತಾರೆ ಎಂದು ಕೆಂಡಕಾರಿದರು. ಇದನ್ನೂ ಓದಿ: ಮದ್ದೂರಿನಲ್ಲಿ ಗಲಾಟೆ ಮಾಡಿದವರ ಬಂಧನ ಆಗಿದೆ: ಪರಮೇಶ್ವರ್

ಕಾಂಗ್ರೆಸ್‌ನವರು ಪೂರ್ತಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ, ಅವರಿಗೆ ವೋಟ್ ಅಷ್ಟೇ ಮುಖ್ಯ. ಹಿಂದೂಗಳಲ್ಲಿ ಒಗ್ಗಟ್ಟು ಇಲ್ಲ. ಅದಕ್ಕೋಸ್ಕರ ಜಾತಿ, ಜಾತಿಗಳ ಮಧ್ಯೆ ಬೆಂಕಿ ಇಡುತ್ತಾರೆ. ಬೆಂಕಿ ಇಡುವುದೇ ಕಾಂಗ್ರೆಸ್ ಕೆಲಸ. ಹಿಂದೂಗಳು ಸಹಿಷ್ಣುಗಳು. ಕಾಂಗ್ರೆಸ್ ಸರ್ಕಾರ ಇರುವುದರಿಂದ ಹಿಂದೂ ಮೆರವಣಿಗೆ ವೇಳೆ ಗಲಾಟೆ ಆಗುತ್ತದೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ. ಮಹಿಳಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಲಾಗಿದೆ. ಮುಂದಿನ ವರ್ಷ ಸಿದ್ದರಾಮಯ್ಯ ಕಾನೂನು ತಂದು ಗಣಪತಿ ಹಬ್ಬವನ್ನೇ ನಿಷೇಧ ಮಾಡುತ್ತಾರೆ. ಅಂತಹ ಸಿದ್ದರಾಮಯ್ಯ ಇವರು, ಅವರನ್ನು ನಂಬಬೇಡಿ ಎಂದು ಹರಿಹಾಯ್ದರು. ಇದನ್ನೂ ಓದಿ: ಮದ್ದೂರಿನಲ್ಲಿ ಗಣೇಶನಿಗೆ ಕಲ್ಲು – ಪ್ರತಿಭಟಿಸಿದ ಹಿಂದೂ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್‌

Share This Article