ಸದ್ಯಕ್ಕಿಲ್ಲ ‘ಸಲಾರ್’- ಜ್ಯೂ.ಎನ್‌ಟಿಆರ್ ಜೊತೆ ಶೂಟಿಂಗ್‌ಗೆ ರೆಡಿಯಾದ ಪ್ರಶಾಂತ್‌ನೀಲ್

Public TV
1 Min Read

ಚಿತ್ರರಂಗದ ಮಾಸ್ಟರ್ ಮೈಂಡ್ ಡೈರೆಕ್ಟರ್ ಪ್ರಶಾಂತ್ ನೀಲ್ ಸದ್ಯ ‘ಸಲಾರ್’ (Salaar) ಚಿತ್ರವನ್ನು ಪಕ್ಕಕ್ಕಿಟ್ಟು ಜ್ಯೂ.ಎನ್‌ಟಿಆರ್ ಮುಂದಿನ ಚಿತ್ರಕ್ಕೆ (NTR 31) ನಿರ್ದೇಶನ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಇದನ್ನೂ ಓದಿ:ಬೆತ್ತಲೆ ಫೋಟೋ ಹರಿಬಿಟ್ಟು, ನಾನು ನಿಮ್ಮ ಮನಸ್ಸಿನಲ್ಲಿದ್ದೇನೆ ಎಂದ ಪೂನಂ ಪಾಂಡೆ

ಕೆಜಿಎಫ್, ಕೆಜಿಎಫ್ 2 (KGF 2), ಸಲಾರ್ ನಂತರ ಪ್ರಶಾಂತ್ ನೀಲ್ (Prashanth Neel) ಯಾವ ಸಿನಿಮಾಗೆ ಕೈಜೋಡಿಸುತ್ತಾರೆ. ಜ್ಯೂ.ಎನ್‌ಟಿಆರ್ ಜೊತೆ ಅದ್ಯಾವಾಗ ಸಿನಿಮಾ ಮಾಡುತ್ತಾರೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಲಾರ್ ಪಾರ್ಟ್ 2 ಮಾಡೋಕೆ ಪ್ರಭಾಸ್ ‘ಕಲ್ಕಿ 2898 ಎಡಿ’ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ತಾರಕ್ ಜೊತೆ ಸಿನಿಮಾ ಮಾಡಲು ಕೆಜಿಎಫ್ ನಿರ್ದೇಶಕ ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ:ದುಬೈನಲ್ಲಿ ಅದ್ಧೂರಿಯಾಗಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ದರ್ಶನ್ ದಂಪತಿ

ಜ್ಯೂ.ಎನ್‌ಟಿಆರ್ (Jr.Ntr) ಸದ್ಯ ‘ದೇವರ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ‘ದೇವರ’ (Devara Film) ಚಿತ್ರದ ಮುಗಿಯೋದಕ್ಕೂ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡ್ತಾರೆ. ಇದೇ ಆಗಸ್ಟ್‌ನಿಂದ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ.

ಉಗ್ರಂ, ಕೆಜಿಎಫ್ ಪಾರ್ಟ್ 1 ಮತ್ತು 2 ಮೂಲಕ ನ್ಯಾಷನಲ್ ಲೆವೆಲ್‌ನಲ್ಲಿ ಗುರುತಿಸಿಕೊಂಡಿರುವ ಪ್ರಶಾಂತ್ ನೀಲ್ ಇದೀಗ ತಾರಕ್ ಜೊತೆ ಕೈಜೋಡಿಸಿರುವ ಕಾರಣ ಸಹಜವಾಗಿ ಇಬ್ಬರ ಕಾಂಬಿನೇಷನ್ ಸಿನಿಮಾದ ಮೇಲೆ ಫ್ಯಾನ್ಸ್‌ಗೆ ನಿರೀಕ್ಷೆ ಮೂಡಿಸಿದೆ.

Share This Article