ಹುಬ್ಬಳ್ಳಿಗೆ ಬಂದು ಹೋದ ಬಳಿಕ ಟ್ರೆಂಡಿಂಗ್‍ನಲ್ಲಿ ಸನ್ನಿ ಲಿಯೋನ್!

By
1 Min Read

ಹುಬ್ಬಳ್ಳಿ: ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್ (Sunny Leone) ಹುಬ್ಬಳ್ಳಿಗೆ ಬರುತ್ತಾರೆ. ನಡ್ರೀ ಹುಬ್ಬಳ್ಳಿಗೆ ಹೋಗೋಣ. ಚಲೋ ಹುಬ್ಬಳ್ಳಿ ಅಂತ ಪಡ್ಡೆ ಹುಡುಗರು ಆನ್‍ಲೈನ್ ಟ್ರೆಂಡ್ ಮಾಡುತ್ತಿದ್ದಾರೆ.

ಇದಕ್ಕೆ ಕಾರಣ ಹುಬ್ಬಳ್ಳಿ ಬರುವೆ ಅಂತ ಸ್ವತಃ ಸನ್ನಿ ಲಿಯೋನ್ ಬಿಡುಗಡೆ ಮಾಡಿರುವ ವೀಡಿಯೋ. ಸದ್ಯ ಈ ವೀಡಿಯೋ ವಾಟ್ಸಪ್, ಫೇಸ್‍ಬುಕ್, ಇನ್‍ಸ್ಟಾ, ಟ್ವಿಟರ್ ನಲ್ಲಿ ಹರಿದಾಡುತ್ತಿದೆ. ಹೀಗಾಗಿ ಹುಬ್ಬಳ್ಳಿಗೆ (Hubballi) ಬರಲು ಪಡ್ಡೆ ಹುಡುಗರು ಕಾತುರಾಗಿದ್ದು, ಚಲೋ ಹುಬ್ಬಳ್ಳಿ ಅಂತ ಹ್ಯಾಶ್‍ಟ್ಯಾಗ್ ಮಾಡಿ ಸನ್ನಿ ವೀಡಿಯೋ ವೈರಲ್ ಮಾಡುತ್ತಿದ್ದಾರೆ. ಆದರೆ ಈ ರೀತಿ ವೀಡಿಯೋ ಟ್ರೆಂಡ್ ಮಾಡುತ್ತಿರುವ ಯುವಕರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಇದನ್ನೂ ಓದಿ: ಮೋದಿ ಬರ್ತಾರೆ ಅಂತ ಸೌಜನ್ಯಕ್ಕೂ ನನ್ನನ್ನ ಕರೆಯಲಿಲ್ಲ – ಸ್ವಪಕ್ಷೀಯರ ವಿರುದ್ಧವೇ ಎಸ್‌ಟಿಎಸ್ ಅಸಮಾಧಾನ

ಈಗಾಗಲೇ ಹುಬ್ಬಳ್ಳಿಗೆ ಸನ್ನಿ ಲಿಯೋನ್ ಬಂದು ಹೋಗಿದ್ದಾರೆ. ಸದ್ದಿಲ್ಲದೆ ವಾಣಿಜ್ಯ ನಗರಕ್ಕೆ ಬಂದು, ಸೊಂಟ ಬಳುಕಿಸಿ ಮಾಯವಾಗಿರುವ ಪಡ್ಡೆ ಹುಡುಗರ ಹಾಟ್ ಫೆವರೆಟ್ ಸನ್ನಿ. ಇದೇ ಆಗಸ್ಟ್5 ರಂದು ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ ಭಾಗಿಯಾಗಿದ್ದರು. ಅಲ್ಲದೆ ಡಿಜೆ ಸದ್ದಿಗೆ ಸಕತ್ ಹೆಜ್ಜೆ ಹಾಕಿ, ಯುವಕರ-ಯುವತಿಯರನ್ನು ಹುಚ್ಚೆದ್ದು ಕುಣಿವಂತೆ ಮಾಡಿದ್ದರು. ಈ ಕಾರ್ಯಕ್ರಮಕ್ಕಾಗಿ ಹುಬ್ಬಳ್ಳಿಗೆ ಬರುವೆ ಅಂತ ಸನ್ನಿ ವೀಡಿಯೋ ಮಾಡಿದ್ದರು. ಈ ವೀಡಿಯೋ ಈಗ ವೈರಲ್ ಆಗುತ್ತಿದೆ.

ಇದು ಖಾಸಗಿ ಕಾರ್ಯಕ್ರಮ ಆಗಿದ್ದ ಹಿನ್ನೆಲೆ ಸನ್ನಿ ಬರುವ ವಿಷಯ ಪ್ರಚಾರ ಮಾಡಿರಲಿಲ್ಲ. ಆಯ್ದ ವ್ಯಕ್ತಿಗಳಿಗೆ ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನವಿತ್ತು ಎಂದು ಕಾರ್ಯಕ್ರಮ ಆಯೋಜಕರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

Web Stories

Share This Article
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್ ಬೋಲ್ಡ್ ಅವತಾರ ತಾಳಿದ ಪ್ರಣೀತಾ ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್