ಅರೆಸ್ಟ್ ಆದ್ರೆ ಸರ್ಕಾರಿ ಉದ್ಯೋಗಿಗಳು ಕೆಲಸ ಕಳೆದುಕೊಳ್ತಾರೆ, ಪಿಎಂ, ಸಿಎಂಗೆ ಯಾಕೆ ಹೀಗಾಗಬಾರದು? – ಮೋದಿ

Public TV
3 Min Read

-ಹಗಲು ರಾತ್ರಿ ಮೋದಿಯನ್ನು ನಿಂದಿಸ್ತಾ ಇರ್ತಾರೆ – ವಿಪಕ್ಷಗಳ ವಿರುದ್ಧ ವಾಗ್ದಾಳಿ
-ಬಿಹಾರದಲ್ಲಿ 13,000 ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳ ಉದ್ಘಾಟಿಸಿದ ಪ್ರಧಾನಿ

ಪಾಟ್ನಾ: ಬಂಧನದ ಬಳಿಕ ಸರ್ಕಾರಿ ಉದ್ಯೋಗಿಗಳು ಕೆಲಸ ಕಳೆದುಕೊಳ್ತಾರೆ, ಪ್ರಧಾನಿ, ಸಿಎಂಗೆ ಯಾಕೆ ಹೀಗಾಗಬಾರದು? ಎಂದು ಕ್ರಿಮಿನಲ್ ಕಾನೂನಿನ ವಿಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದರು.

ಬೋಧ್‌ಗಯಾದ (Bodhgaya) ಮಗಧ ವಿಶ್ವವಿದ್ಯಾಲಯದ (Magadh University) ಮೈದಾನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ 13 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ ರೈಲು, ರಸ್ತೆ, ವಿದ್ಯುತ್, ವಸತಿ, ನೀರು ಸರಬರಾಜು ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.ಇದನ್ನೂ ಓದಿ: ಆನ್‌ಲೈನ್‌ ಗೇಮಿಂಗ್‌ ಮಸೂದೆಗೆ ರಾಷ್ಟ್ರಪತಿ ಅಂಕಿತ

ರ‍್ಯಾಲಿಯಲ್ಲಿ ಮಾತಾಡಿದ ಅವರು, ಬಿಹಾರ ಚಂದ್ರಗುಪ್ತ ಮೌರ್ಯ ಮತ್ತು ಚಾಣಕ್ಯನ ನಾಡು. ಈ ನೆಲದಲ್ಲಿ ತೆಗೆದುಕೊಂಡ ಪ್ರತಿಯೊಂದು ನಿರ್ಣಯವೂ ಎಂದಿಗೂ ವ್ಯರ್ಥವಾಗುವುದಿಲ್ಲ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಾಗ ಬಿಹಾರದ ಈ ನೆಲದಿಂದ ನಿಂತು ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡಿದ್ದೆ. ಅಂದು ಬಿಹಾರದ ನೆಲದಿಂದ ತೆಗೆದುಕೊಂಡ ನಿರ್ಣಯವು ಈಡೇರಿದೆ ಎಂದು ಜಗತ್ತು ನೋಡುತ್ತಿದೆ ಎಂದು ಹೇಳಿದರು.

ಭ್ರಷ್ಟ ಮುಖ್ಯಮಂತ್ರಿ ಅಥವಾ ಪ್ರಧಾನಿ 30 ದಿನ ಜೈಲಿನಲ್ಲಿ ಕಳೆದರೆ ವಜಾಗೊಳಿಸಲು ಅವಕಾಶ ನೀಡುವ ಕಾನೂನನ್ನು ತರಲು ನಾವು ನಿರ್ಧರಿಸಿದ್ದೇವೆ. ಅಲ್ಪಾವಧಿಗೆ ಜೈಲಿನಲ್ಲಿದ್ದ ಒಬ್ಬ ಗುಮಾಸ್ತನನ್ನು ಅಮಾನತುಗೊಳಿಸಲಾಗುತ್ತದೆ. ಪ್ರಧಾನಿಯನ್ನು ಏಕೆ ಅಮಾನತುಗೊಳಿಸಬಾರದು? ಈ ಸಂಬಂಧ ನಾವು ಕಠಿಣ ಕಾನೂನನ್ನು ತಂದರೆ ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಂಥಿಯರು ಕೋಪಗೊಂಡಿದ್ದಾರೆ. ಇದಕ್ಕಾಗಿ ಹಗಲು-ರಾತ್ರಿ ನನ್ನನ್ನು ನಿಂದಿಸುತ್ತಾರೆ. ಅವರು ತಮ್ಮ ಸ್ವಂತ ಪಾಪಗಳಿಗೆ ಶಿಕ್ಷೆಯನ್ನು ಎದುರಿಸುವ ಭಯದಿಂದ ಕೋಪಗೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಂವಿಧಾನ (130ನೇ ತಿದ್ದುಪಡಿ) ಮಸೂದೆ, ಚುನಾವಣಾ ಆಯೋಗ ಬಿಹಾರದಲ್ಲಿ ಪ್ರಸ್ತುತ ನಡೆಸುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಬಗ್ಗೆ ಪ್ರಸ್ತಾಪಿಸಿದರು. ಅಧಿಕಾರದ ಉನ್ನತ ಸ್ಥಾನದಲ್ಲಿರುವ ಜನರು ಜೈಲಿನಿಂದ ಸರ್ಕಾರಗಳನ್ನು ನಡೆಸುತ್ತಿದ್ದಾರೆ. ಕಂಬಿಗಳ ಹಿಂದಿನಿಂದ ಫೈಲ್‌ಗಳಿಗೆ ಸಹಿ ಮಾಡುತ್ತಿದ್ದಾರೆ. ಸಾಂವಿಧಾನಿಕ ಔಚಿತ್ಯವನ್ನು ಹರಿದು ಹಾಕುತ್ತಿದ್ದಾರೆ ಎಂಬ ವಿಷಾದಕರ ಪರಿಸ್ಥಿತಿಯನ್ನು ನಾವು ನೋಡಿದ್ದೇವೆ ಅಂದರು. ಅಲ್ಲದೆ, ತಮ್ಮ 11 ವರ್ಷಗಳ ಸರ್ಕಾರದಲ್ಲಿ `ಭ್ರಷ್ಟಾಚಾರದ ಕಲೆ ಇಲ್ಲ’ ಎಂದು ಹೇಳಿದ್ದಾರೆ.

ಈ ಮಧ್ಯೆ, ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನುಪಸ್ಥಿತಿಯಲ್ಲಿ ಕೋಲ್ಕತ್ತಾದಲ್ಲಿ ಮೆಟ್ರೋ ಮಾರ್ಗವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. 9 ಹೊಸ ವಂದೇ ಭಾರತ್ ರೈಲುಗಳನ್ನು ಕೂಡ ಘೋಷಿಸಿದರು.ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ- ಸಂಚಾರಕ್ಕೆ ಕಂಪ್ಲಿ ಸೇತುವೆ ಮುಕ್ತ

Share This Article