ಕೋಲಾರದ ಕ್ಲಾಕ್ ಟವರ್ ಮೇಲೆ 74 ವರ್ಷಗಳ ಬಳಿಕ ರಾರಾಜಿಸಿದ ತ್ರಿವರ್ಣ ಧ್ವಜ

Public TV
1 Min Read

ಕೋಲಾರ: ಶ್ರೀನಗರದ ಐತಿಹಾಸಿಕ ಲಾಲ್‍ಚೌಕ್‍ನಲ್ಲಿ ತಿರಂಗಾ ಹಾರಿದ ರೀತಿ ಕೋಲಾರದ ಕ್ಲಾಕ್ ಟವರ್ ಮೇಲೆ 74 ವರ್ಷಗಳ ಬಳಿಕ ತಿರಂಗಾ ಹಾರಿದೆ.

ಮುಸ್ಲಿಮ್ ಮುಖಂಡರ ಸಹಯೋಗದಲ್ಲಿ ಜಿಲ್ಲಾಡಳಿತ ಹಸಿರುಬಣ್ಣದಲ್ಲಿದ್ದ ಕ್ಲಾಕ್ ಟವರ್‌ಗೆ ತ್ರಿವರ್ಣ ರಂಗು ತುಂಬಿದೆ. ಆದರೆ ಕೆಲ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಸ್ವಲ್ಪ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಲಾಕ್ ಟವರ್‌ನ ನಾಲ್ಕು ದಿಕ್ಕುಗಳಲ್ಲಿಯೂ ತ್ರಿವರ್ಣ ಧ್ವಜ ಹಾರಿಸಲಾಯಿತು. ಇದನ್ನೂ ಓದಿ: ಕುಶಾಲನಗರ-ಸಂಪಾಜೆ ಚತುಷ್ಪಥ ರಸ್ತೆ ನಿರ್ಮಾಣ ಇಲ್ಲ: ಪ್ರತಾಪ್ ಸಿಂಹ ಸ್ಪಷ್ಟನೆ

ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜ ಹಾರಿಸುತ್ತಿದ್ದಂತೆ ಹಿಂದೂಸ್ತಾನ್ ಜಿಂದಾಬಾದ್ ಎಂದು ಮುಸ್ಲಿಂ ಮುಖಂಡರು ಘೋಷಣೆ ಕೂಗಿದ್ರು. ಕ್ಲಾಕ್ ಟವರ್‌ನಲ್ಲಿ ತಿರಂಗಾ ಹಾರಿಸಲೇಬೇಕು ಎಂದು ಕಳೆದ ಕೆಲ ದಿನಗಳಿಂದ ಸಂಸದ ಮುನಿಸ್ವಾಮಿ ಪಟ್ಟು ಹಿಡಿದು ಹೋರಾಟ ನಡೆಸಿದ್ರು. ಮುಸ್ಲಿಮರೇ ಹೆಚ್ಚಿರುವ ಪ್ರದೇಶದಲ್ಲಿ ಕ್ಲಾಕ್ ಟವರ್ ಇದ್ದು, ಇದನ್ನು ಕೋಮು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲಾಗಿತ್ತು. ಇಲ್ಲಿ ಯಾವುದಾದರೂ ಮೆರವಣಿಗೆ ಬಂದಾಗ ಸಣ್ಣ ಪುಟ್ಟ ಘರ್ಷಣೆ ನಡೆಯುತ್ತಿದ್ದವು. ಹೀಗಾಗಿ ಈ ಪ್ರದೇಶದಲ್ಲಿ ಹಲವು ವರ್ಷಗಳ ಹಿಂದೆಯೇ ಮೆರವಣಿಗೆಯನ್ನು ನಿಷೇಧಿಸಲಾಗಿತ್ತು. ಮುಸ್ತಾಫಾ ಸಾಬ್ ಎಂಬುವರು ನಿರ್ಮಿಸಿದ್ದ ಕ್ಲಾಕ್ ಟವರ್‌ನ್ನು 1986ರಲ್ಲಿ ನಗರಸಭೆಗೆ ಹಸ್ತಾಂತರಿಸಲಾಗಿತ್ತು. ಕೊನೆಗೆ ಕ್ಲಾಕ್ ಟವರ್ ನಿರ್ವಹಣೆಯನ್ನು ನಗರಸಭೆ, ಅಂಜುಮಾನ್ ಸಂಸ್ಥೆಗೆ ಬಿಟ್ಟುಕೊಟ್ಟಿತ್ತು. ಇದನ್ನೂ ಓದಿ: ಮಕ್ಕಳ ಕೈಯಲ್ಲಿ ಕೇಸರಿ ಶಾಲು ಕೊಡ್ತೀರ, ಕಾಶ್ಮೀರ್ ಫೈಲ್ ಚಿತ್ರ ನೋಡಿ ಅಂತೀರ, ದಲಿತರ ಹಣವನ್ನು ಯಾಕೆ ನುಂಗ್ತಿದ್ದೀರ?: ಪ್ರಿಯಾಂಕ್ ಖರ್ಗೆ

Share This Article
Leave a Comment

Leave a Reply

Your email address will not be published. Required fields are marked *