2 ವರ್ಷಗಳ ಬಳಿಕ ಡಿಕೆಶಿ 8 ವರ್ಷ ಸಿಎಂ ಆಗಿರುತ್ತಾರೆ- ಜ್ಯೋತಿಷಿ ಭವಿಷ್ಯ

Public TV
1 Min Read

ಬೆಂಗಳೂರು: ಎರಡು ವರ್ಷಗಳ ಬಳಿಕ ಎಂಟು ವರ್ಷಗಳ ಕಾಲ ಡಿ.ಕೆ ಶಿವಕುಮಾರ್ ಸಿಎಂ ಆಗಿರುತ್ತಾರೆ ಎಂದು ಜ್ಯೋತಿಷಿ ಬಿಬಿ ಆರಾಧ್ಯ (BB Aradhya) ಭವಿಷ್ಯ ನುಡಿದಿದ್ದಾರೆ.

ಸಿದ್ದರಾಮಯ್ಯ (Siddaramaiah) ಹಾಲಿ ವಾಸ್ತವ್ಯ ಹೂಡಿರುವ ಸರ್ಕಾರಿ ನಿವಾಸ ಆಯ್ಕೆ ಮಾಡಿಕೊಳ್ಳುವಂತೆಯೂ ಆರಾಧ್ಯ ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: Exclusive: ಸಿದ್ದು ಅದೃಷ್ಟದ ಮನೆಗೆ ಬೇಡಿಕೆ ಇರಿಸಿದ ಡಿಕೆಶಿ

ವಿಧಾನಸೌಧದಲ್ಲಿ ಗುರುವಾರ ಮಧ್ಯಾಹ್ನ ಕೊಠಡಿ ಪೂಜೆಯನ್ನು ಡಿಕೆಶಿ ನೆರವೇರಿಸಲಿದ್ದಾರೆ. ಡಿಕೆ ಶಿವಕುಮಾರ್ (DK Shivakumar) ಗೆ ಲಕ್ಕಿ ಸಂಖ್ಯೆಯ ಕೊಠಡಿ 336 ರಲ್ಲಿ ಪೂಜೆ ನಡೆಯಲಿದೆ. ಜ್ಯೋತಿಷಿ ಆರಾಧ್ಯ ಸೂಚನೆ ಮೇರೆಗೆ ಕೊಠಡಿ ಪೂಜೆ ನಡೆಯಲಿದೆ.

ಡಿಕೆ ಶಿವಕುಮಾರ್ ಜಾತಕ ಫಲದ ಪ್ರಕಾರವೇ ಜ್ಯೋತೀಷಿ ಮುಹೂರ್ತ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಜಿನ್ ಲಗ್ನದಲ್ಲಿ ಅರ್ಚಕರು ಪೂಜೆ ನೆರವೇರಿಸಲಿದ್ದಾರೆ.

Share This Article