ಚಿಕ್ಕಬಳ್ಳಾಪುರದಲ್ಲಿ ಹಂದಿಜ್ವರ ದೃಢ; ಸತ್ತ ಹಂದಿಗಳ ಕಳೇಬರ ಕೆರೆಗೆ ಎಸೆದಿದ್ದ ಅವಿವೇಕಿ – ಇಡೀ ಕೆರೆ ಮಲಿನ

Public TV
1 Min Read

– 100ಕ್ಕೂ ಅಧಿಕ ಹಂದಿ ಸಾವು; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೆಬ್ಬರಿ ಗ್ರಾಮದಲ್ಲಿ ಆಫ್ರಿಕನ್ ಹಂದಿ ಜ್ವರ (African Swine Fever Virus) ಧೃಢವಾಗಿದೆ. ವೆಂಕಟರೆಡ್ಡಿ ಎಂಬುವವರಿಗೆ ಸೇರಿದ ಹಂದಿಗಳ ಫಾರಂನಲ್ಲಿ 200 ಹಂದಿಗಳಿದ್ದು ಆಗಸ್ಟ್ 14ರಿಂದಲೇ ಅನುಮಾನಸ್ಪಧವಾಗಿ ಹಂದಿಗಳು ಸಾವನ್ನಪ್ಪಲು ಆರಂಭಿಸಿವೆ.

ಹೀಗಾಗಿ ಪಶುಪಾಲನಾ ಇಲಾಖಾಧಿಕಾರಿಗಳ ಸತ್ತ ಹಂದಿಗಳ ಮಾದರಿಗಳನ್ನ ಪರೀಕ್ಷೆಗೆ ಕಳುಹಿಸಿದ್ದು ಹಂದಿ ಜ್ವರ ಧೃಢಪಟ್ಟಿದೆ. ಅಷ್ಟರಲ್ಲೇ 100ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿದ್ದು ಸತ್ತ ಹಂದಿಗಳನ್ನ ಫಾರಂ ಸಮೀಪದ ಹೆಬ್ಬರಿ ಗ್ರಾಮದ ಕೆರೆಗೆ ಬಿಸಾಡಲಾಗಿದೆ. ಹೀಗಾಗಿ ಕೆರೆಯ ನೀರಿನಲ್ಲಿ ಎಲ್ಲಂದರಲ್ಲಿ ಸತ್ತ ಹಂದಿಗಳ ಕಳೇಬರಗಳು ತೇಲಾಡುತ್ತಿವೆ. ಹಂದಿಗಳು ಕೊಳೆತು ಗಬ್ಬು ನಾರಿ ದುರ್ವಾಸನೆ ಬೀರುತ್ತಿವೆ. ಇದ್ರಿಂದ ಇಡೀ ಕೆರೆಯ ನೀರು ಮಲಿನವಾಗಿದೆ.

ಈ ಘಟನೆಯ ನಂತರ ಎಚ್ಚೆತ್ತುಕೊಂಡಿರುವ ಪಶುಪಾಲನಾ ಇಲಾಖೆ ಈಗ ಫಾರಂ ನಲ್ಲಿ ಉಳಿದಿದ್ದ 57 ಹಂದಿಗಳ ಸಾಮೂಹಿಕ ಹತ್ಯೆ ನಡೆಸಿದೆ. ಮತ್ತೊಂದಡೆ ತಾಲೂಕು ಆಡಳಿತ ಕೆರೆಯಲ್ಲಿ ಬಿಸಾಡಿರುವ ಹಂದಿಯ ಮೃತದೇಹದ ಕಳೇಬರಗಳನ್ನ ಜೆಸಿಬಿ ಮೂಲಕ ತೆಗೆದು ಮಣ್ಣಿನಲ್ಲಿ ಮುಚ್ಚಿ ಹಾಕುವ ಪ್ರಯತ್ನ ಮಾಡಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಆಫ್ರಿಕನ್ ಹಂದಿ ಜ್ವರ ದೃಢ – 57 ಹಂದಿಗಳನ್ನ ಕೊಲ್ಲಲು ಮುಂದಾದ ಪಶು ಇಲಾಖೆ

ಇದಲ್ಲದೇ ಮಲಿನವಾಗಿರುವ ಕೆರೆಯ ನೀರನ್ನ ಶುದ್ಧೀಕರಿಸುವ ಸಲುವಾಗಿ ಕ್ಯಾಲ್ಸಿಯಂ ಹೈಪೋಕ್ಲೋರೈಡ್ ಪೌಡರ್ ಸಿಂಪಡಣೆ ಕ್ಲೋರಿನೇಷನ್ ಕಾಯಕ ನಡೆಸಲಾಗುತ್ತಿದೆ.

Chikkaballapura Virus 2

ಇನ್ನೂ ಕೆರೆಯ ನೀರು ಮಲಿನವಾಗಿರೋ ಕಾರಣ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ ಮನೆ ಮಾಡಿದೆ. ಕೆರೆಯ ನೀರನ್ನ ಕುಡಿಯೋ ಜಾನುವಾರುಗಳು, ಪ್ರಾಣಿ ಪಕ್ಷಿಗಳ ಜೀವಕ್ಕೆ ಅಪಾಯ ಕಾದಿಯಾ ಅನ್ನೋ ಆತಂಕ ಎದುರಾಗಿದೆ. ಘಟನೆಯ ನಂತರ ಪೊಲೀಸ್ ಠಾಣೆಯಲ್ಲಿ ಮಾಲೀಕ ವೆಂಕಟರೆಡ್ಡಿ ವಿರುದ್ಧ ದೂರು ದಾಖಲಿಸಲು ಪಶು ಪಾಲನಾ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಸ್ಫೋಟ – ಓರ್ವ ಬಾಲಕ ದುರ್ಮರಣ

Share This Article