ತಾಲಿಬಾನಿಗಳು ಹುಡುಕುತ್ತಾ ನನ್ನ ಮನೆಗೆ ಬಂದ್ರು: ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್

Public TV
2 Min Read

– ತಂದೆ, ಗಾರ್ಡ್ ಮೇಲೆ ಹಲ್ಲೆ ನಡೆಸಿದ್ರು
– ಜಗತ್ತಿಗೆ ಇವರ ಅಸಲಿ ಮುಖ ಅನಾವರಣ ಮಾಡ್ತೀನಿ

ಕಾಬೂಲ್: ತಾಲಿಬಾನಿಗಳು ನನ್ನನ್ನು ಹುಡುಕುತ್ತಾ ನಮ್ಮ ಮನೆಗೆ ಬಂದಿದ್ದರು. ಮನೆಯಲ್ಲಿದ್ದ ನನ್ನ ತಂದೆ ಮತ್ತು ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ ಹೋಗಿದ್ದಾರೆ ಎಂದು ಅಫ್ಘಾನಿಸ್ತನದ ಮೊದಲ ಮಹಿಳಾ ಮೇಯರ್ ಜರೀಫಾ ಗಫ್ರಿ ಹೇಳಿದ್ದಾರೆ. ಸದ್ಯ ಜರೀಫಾ ಗಫರ್ ಜರ್ಮನಿಯಲ್ಲಿ ಸುರಕ್ಷಿತವಾಗಿದ್ದಾರೆ.

ಅಫ್ಘಾನಿಸ್ತಾನ ತಾಲಿಬಾನಿಗಳ ಕೈ ವಶವಾಗುತ್ತಿದ್ದ ಅಲ್ಲಿಯ ಮಕ್ಕಳು ಮತ್ತು ಮಹಿಳೆಯರ ಮುಂದಿನ ಭವಿಷ್ಯ ಏನು ಎಂಬುದರ ಪ್ರಶ್ನೆಗೆ ಉತ್ತರ ಸಿಗದಂತಾಗಿದೆ. ಇತ್ತ ತಾಲಿಬಾನಿಗಳು ಸಾಮಾಜಿಕ ಸೇವೆ ಮತ್ತು ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಮಹಿಳೆಯರ ಮನೆಗಳ ಮೇಲೆ ದಾಳಿ ನಡೆಸುತ್ತಿರುವ ಬಗ್ಗೆ ವರದಿಯಾಗ್ತಿದೆ.

20 ವರ್ಷ ಪಡೆದುಕೊಂಡಿದ್ದ ಸ್ವಾತಂತ್ರ್ಯ ಇಲ್ಲ:
ನ್ಯೂಸ್ ಏಜೆನ್ಸಿಗೆ ಸಂದರ್ಶನ ನೀಡಿರುವ ಜರೀಫಾ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಮಗೆ ಆಶ್ರಯ ನೀಡಿರುವ ಜರ್ಮನಿ ಸರ್ಕಾರಕ್ಕೂ ಧನ್ಯವಾದ ಸಲ್ಲಿಸಿದ್ದಾರೆ. ಅಫ್ಘಾನಿಸ್ತಾನದ ಜನರನನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಅವರು ಯಾವುದಕ್ಕೂ ಹೆದರಲ್ಲ. ತಾಲಿಬಾನಿ ಉಗ್ರರು ಎಷ್ಟೇ ಜನರನ್ನು ಕೊಂದರೂ ನಮ್ಮ ಹೋರಾಟ ನಿಲ್ಲಲ್ಲ. ಕಳೆದ 20 ವರ್ಷಗಳಲ್ಲಿ ನಾವು ಪಡೆದುಕೊಂಡಿದ್ದು ಎಲ್ಲವೂ ನಮ್ಮೊಂದಿಗೆ ಇಲ್ಲ. ನನ್ನ ದೇಶದ ಮಣ್ಣು ಮಾತ್ರ ಬಳಿಯಲ್ಲಿದೆ ಎಂದು ಭಾವುಕರಾಗಿದ್ದಾರೆ.

ಪಾಕ್ ವಿರುದ್ಧ ಆಕ್ರೋಶ:
ಇಂದಿನ ಅಫ್ಘಾನಿಸ್ತಾನದ ಸ್ಥಿತಿಗೆ ಜನರು, ರಾಜಕೀಯ ಮುಖಂಡರು ಮತ್ತು ನಮ್ಮ ವಿಶ್ವವೇ ಕಾರಣ. ಸ್ಥಳೀಯ ಜನರು ಒಮ್ಮೆಯೂ ಒಗ್ಗಟ್ಟಾಗಿ ಉಗ್ರರ ವಿರುದ್ಧ ಧ್ವನಿ ಎತ್ತುವ ಪ್ರಯತ್ನ ಮಾಡಲಿಲ್ಲ. ಪಾಕಿಸ್ತಾನ ಏನು ಮಾಡಿದೆ ಅನ್ನೋ ವಿಷಯ ಅಫ್ಘಾನಿಸ್ತಾನದ ಪ್ರತಿ ಮಗುವಿಗೆ ಗೊತ್ತಿದೆ ಎಂದು ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು

ಅಫ್ಘಾನಿಸ್ತಾನ ನಮ್ಮದೇ:
ಇದು ನಮ್ಮ ದೇಶ, ಎಂದಿಗೂ ನಮ್ಮದೇ ಆಗಿರುತ್ತೆ. ಇಂದು ನನ್ನಂತಹ ಮಹಿಳೆಯರು ಅಫ್ಘಾನಿಸ್ತಾದಲ್ಲಿರುವ ಪರಿಸ್ಥಿತಿ ಇಲ್ಲ. ಬೇಟೆಗೂ ಮುನ್ನ ಹುಲಿ ಎರಡು ಹೆಜ್ಜೆ ಹಿಂದೆ ಹಾಕೋದು ಭಯದಿಂದಲ್ಲ. ತನ್ನ ಪೂರ್ಣ ಶಕ್ತಿಯನ್ನು ಪ್ರಯೋಗಿಸಲು ಎಂಬುದನ್ನ ಅಲ್ಲಿದ್ದವರು ಅರ್ಥ ಮಾಡಿಕೊಳ್ಳಬೇಕು. ಜರ್ಮನಿಯಲ್ಲಿರು ನಾವು ಶೇ.99 ಅಫ್ಘನ್ನರು ಮತ್ತು ಮಹಿಳೆಯರ ಧ್ವನಿಯಾಗಿರುತ್ತೇನೆ. ವಿಶ್ವದ ಮುಂದೆ ತಾಲಿಬಾನಿಗಳನ್ನು ಅನಾವರಣಗೊಳಿಸುವ ಕೆಲಸ ಮಾಡಲಿದ್ದೇನೆ. ಇಲ್ಲಿಂದಲೇ ನನ್ನ ಮುಂದಿನ ಕೆಲಸಗಳನ್ನು ಆರಂಭಿಸಲಿದು, ಅವರ ವಿರುದ್ಧ ಧ್ವನಿ ಎತ್ತುತ್ತೇನೆ ಎಂದು ಹೇಳಿದ್ದಾರೆ. ಇಂದು ನಾವು ಎರಡು ಹೆಜ್ಜೆ ಹಿಂದೆ ಬಂದಿರೋದು ಇದೇ ಕಾರಣ ಎಂದು ಹೇಳುವ ತಾಲಿಬಾನಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದರು. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!

ಕಳೆದ ವಾರ ಇಸ್ತಾಂಬುಲ್ ಗೆ ತೆರಳಿದ್ದ ಜರೀಫಾ ಈಗ ಜರ್ಮನಿಯಲ್ಲಿದ್ದಾರೆ. ಸದ್ಯ ಜರೀಫಾ ಜೊತೆ ಅವರ ಕುಟುಂಬ ಸದಸ್ಯರಿದ್ದಾರೆ. ತಾವು ನಿರಾಶ್ರಿತಳಾಗಿ ಜರ್ಮನಿಗೆ ಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ. ಇತ್ತ ಜರ್ಮನಿಯಲ್ಲಿ ಅಫ್ಘನ್ನರಿಗೆ ಆಶ್ರಯ ನೀಡುವ ಕುರಿತಿ ಹಲವು ಸಮಸ್ಯೆಗಳು ಎದುರಾಗಿವೆ. ಇದನ್ನೂ ಓದಿ: ಕಾಬೂಲ್‍ನಿಂದ ಉಕ್ರೇನ್ ವಿಮಾನ ಹೈಜಾಕ್

Share This Article
Leave a Comment

Leave a Reply

Your email address will not be published. Required fields are marked *