ಮಹಿಳಾ ಸಚಿವಾಲಯವನ್ನೇ ತೆಗೆದ ತಾಲಿಬಾನ್ ಸರ್ಕಾರ

Public TV
1 Min Read

ಕಾಬೂಲ್: ತಾಲಿಬಾನ್ ಸರ್ಕಾರ ಮಹಿಳಾ ಸಚಿವಾಲಯವನ್ನೇ ತೆಗೆದು ಹಾಕಿದ್ದು, ಸದ್ಗುಣ ಸಚಿವಾಲಯ ಎಂದು ಬದಲಿಸಿದೆ. ಈ ಮೂಲಕ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಭರವಸೆಗೆ ವಿರುದ್ಧವಾಗಿ ವರ್ತಿಸುತ್ತಿದೆ.

ದೇಶದ ಮಹಿಳಾ ಸಚಿವಾಲಯವನ್ನು ತಾಲಿಬಾನ್‍ನ ನೈತಿಕ ಪೊಲೀಸ್‍ಗೆ ಬದಲಿಸುವುದಕ್ಕೆ ಸಹಿ ಹಾಕಿದೆ ಎಂದು ವರದಿಯಾಗಿದೆ. ಅಲ್ಲದೆ ಇಲಾಖೆಯ ಮಹಿಳಾ ಉದ್ಯೋಗಿಗಳನ್ನು ಕಟ್ಟಡದಿಂದ ಹೊರಗೆ ಹಾಕಲಾಗಿದೆ. ಮಹಿಳಾ ಸಚಿವಾಲಯವನ್ನು ಪ್ರಾರ್ಥನೆ, ಮಾರ್ಗದರ್ಶನ ಹಾಗೂ ಸದ್ಗುಣಗಳ ಪ್ರಚಾರ, ದುರಾಚಾರ ತಡೆ ಸಚಿವಾಲಯ ಎಂದು ಬದಲಿಸಲಾಗಿದೆ. ಇದನ್ನೂ ಓದಿ: ಆಡಿದ್ರೆ ದೇಹ ಪ್ರದರ್ಶನವಾಗುತ್ತೆ – ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರೀಡೆ ನಿಷೇಧ

ಮಹಿಳೆಯರು ಕೆಲಸ ಮಾಡಲು ಅವಕಾಶ ನಿಡುವುದಿಲ್ಲ ಎಂದು ತಾಲಿಬಾನ್ ಈಗಾಗಲೇ ಘೋಷಿಸಿದೆ. ಆದರೆ ಶಿಕ್ಷಣ ಪಡೆಯಬಹುದು ಎಂದು ಹೇಳಿದೆ. ಹೀಗಾಗಿ ಇದೀಗ ಮಹಿಳಾ ಸಚಿವಾಲಯದ ಉದ್ಯೋಗಿಗಳನ್ನು ಸಹ ಕಚೇರಿಯಿಂದ ಹೊರಗೆ ಹಾಕಲಾಗಿದೆ. ಮಹಿಳೆಯರು ಕೆಲಸ ಮಾಡುವುದನ್ನು ಅನುಮತಿಸುತ್ತಿಲ್ಲ. ಮಹಿಳೆಯರು ಕೆಲಸಕ್ಕೆ ತೆರಳಲು ಪ್ರಯತ್ನಿಸಿದಾಗ ವಾಪಸ್ ಮನೆಗೆ ಕಳುಹಿಸಲಾಗುತ್ತಿದೆ. ಇದನ್ನೂ ಓದಿ: ತಾಲಿಬಾನ್ ಸರ್ಕಾರ ವಿರುದ್ಧ ಸಿಡಿದ ಅಫ್ಘಾನ್ ಮಹಿಳೆಯರು

ಮಹಿಳೆಯರು ಕೆಲಸಕ್ಕಾಗಿ ಕಚೇರಿಗೆ ತೆರಳುವುಕ್ಕೆ ನಿರ್ಬಂಧ ವಿಧಿಸಿದ ಬಳಿಕ ಸಚಿವಾಲಯದ ಬಹುತೇಕ ಮಹಿಳಾ ಉದ್ಯೋಗಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ಕುಟುಂಬದಲ್ಲಿ ನಾನೊಬ್ಬಳೇ ಕೆಲಸ ಮಾಡುವುದು, ಯಾವುದೇ ಸಚಿವಾಲಯದಲ್ಲಿ ಕೆಲಸವಿಲ್ಲದಿದ್ದಾಗ ಅಫ್ಘಾನ್ ಮಹಿಳೆಯರು ಏನು ಮಾಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *