ಪಾಕಿನ ಮಿಲಿಟರಿ ನೆಲೆಯ ಮೇಲೆ ತಾಲಿಬಾನ್‌ ಏರ್‌ಸ್ಟ್ರೈಕ್‌

1 Min Read

ಕಾಬೂಲ್‌: ಪಾಕಿಸ್ತಾನ (Pakistan) ನಡೆಸಿದ ಏರ್‌ಸ್ಟ್ರೈಕ್‌ಗೆ (Airstrike) ಪ್ರತಿಯಾಗಿ ಅಫ್ಘಾನಿಸ್ತಾನವೂ (Afghanistan) ಏರ್‌ಸ್ಟ್ರೈಕ್‌ ನಡೆಸಿ ತಿರುಗೇಟು ನೀಡಿದೆ.

ಎಕ್ಸ್‌ ಮೂಲಕ ತನ್ನ ಹೇಳಿಕೆ ತಿಳಿಸಿದ ತಾಲಿಬಾನ್ (Taliban) ರಕ್ಷಣಾ ಸಚಿವಾಲಯ, ಇಂದು ಬೆಳಿಗ್ಗೆ 11 ಗಂಟೆಗೆ ವಾಯುಪಡೆಯು ಇಸ್ಲಾಮಾಬಾದ್‌ನ ಫೈಜಾಬಾದ್ ಬಳಿಯ ಮಿಲಿಟರಿ ಶಿಬಿರ ಮತ್ತು ನೌಶೇರಾದ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡು ಸಂಘಟಿತ ವೈಮಾನಿಕ ದಾಳಿ ನಡೆಸಿತು ಎಂದು ತಿಳಿಸಿದೆ.

ಪಾಕ್-ಅಫ್ಘಾನ್ ಗಡಿಯಲ್ಲಿ ತಾಲಿಬಾನ್ ಆಡಳಿತವು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತದೆ ಎಂದು ಪಾಕಿಸ್ತಾನ ಆರೋಪಿಸಿದೆ. ಪಾಕಿಸ್ತಾನ ವಾಯುಪಡೆ ಕಾಬೂಲ್ ಮತ್ತು ಕಂದಹಾರ್ ಮೇಲೆ ದಾಳಿ ಮಾಡಿ 13 ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದೆ.  ಇದನ್ನೂ ಓದಿ: ಅಫ್ಘಾನ್ ಮಿಲಿಟರಿ ದಾಳಿಗೆ 55 ಸೈನಿಕರು ಬಲಿ – ಪಾಕ್‌ನಿಂದ ಪ್ರತೀಕಾರದ ದಾಳಿ; 3 ಕಡೆ ಬಾಂಬ್‌ ಸ್ಫೋಟ

ತಾಲಿಬಾನ್‌ ವಿರುದ್ಧದ ಹೋರಾಟಕ್ಕೆ ಪಾಕಿಸ್ತಾನ ʼಆಪರೇಷನ್ ಗಜಬ್ ಲಿಲ್ ಹಕ್ʼ ಹೆಸರಿನಲ್ಲಿ ದಾಳಿ ನಡೆಸುತ್ತಿದೆ.

ಪಾಕಿಸ್ತಾನದ ಎಫ್‌ 16 ಯುದ್ಧ ವಿಮಾನವನ್ನು ತಾಲಿಬಾನ್‌ ಹೊಡೆದುರಳಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ ಎಐ ಫೋಟೋ ಎನ್ನುವುದು ದೃಢಪಟ್ಟಿದೆ.

Share This Article