ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದಿದ್ದು ಅಮೆರಿಕಾ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಬೈಡನ್ ವಿರುದ್ಧ ಟ್ರಂಪ್ ವಾಗ್ದಾಳಿ

Public TV
2 Min Read

ವಾಷಿಂಗ್ಟನ್: ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದುಕೊಂಡ ಅಧ್ಯಕ್ಷ ಜೋ ಬೈಡನ್ ನಿರ್ಧಾರ ಅಮೆರಿಕಾ ಇತಿಹಾಸದಲ್ಲಿ ದೊಡ್ಡ ಕಪ್ಪು ಚುಕ್ಕೆ ಆಗಲಿದೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.

ಜೋ ಬೈಡನ್ ಸಮರ್ಥನೆ:
ಅಫ್ಘಾನಿಸ್ತಾನ ಸೇನೆಯೇ ಹೋರಾಟ ಮಾಡದಿರುವಾಗ ನಮ್ಮ ಸೈನಿಕರು ಅಲ್ಲಿ ಬಲಿ ಆಗುವುದರಲ್ಲಿ ಅರ್ಥ ಇಲ್ಲ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಪೂರ್ಣ ಕೈವಶ ಮಾಡಿಕೊಡ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಸೇನೆ ಹಿಂಪಡೆಯುವ ಬಗ್ಗೆ ಟ್ರಂಪ್ ಅವಧಿಯಲ್ಲಿ ಒಪ್ಪಂದ ಆಗಿತ್ತು. ಆ ಒಪ್ಪಂದವನ್ನು ಜಾರಿಗೊಳಿಸುತ್ತಿದ್ದೇನೆ ಎಂದು ಹೇಳಿದ್ದರು.

ಈ ಹಿಂದೆ ಮಾತುಕತೆ ವೇಳೆ ಅಫ್ಘಾನಿಸ್ತಾನ ಸೇನೆ ಹೋರಾಟ ಮಾಡುವುದಾಗಿ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದರು. ಆದರೆ ಅವರೇ ಓಡಿಹೋಗಿದ್ದಾರೆ. ಅಫ್ಘಾನ್ ಸೇನೆಯೇ ಹೋರಾಟ ಮಾಡದಿರುವಾಗ ನಮ್ಮ ಸೈನಿಕರು ಅಲ್ಲಿ ಬಲಿ ಆಗುವುದರಲ್ಲಿ ಅರ್ಥ ಇಲ್ಲ. ಈ ಹಿಂದೆ ಮಾಡಿದ ತಪ್ಪುಗಳನ್ನೇ ಮತ್ತೆ ಮಾಡುವುದಿಲ್ಲ. ಈಗಾಗಲೇ ನಾವು 3 ಶತಕೋಟಿ ಡಾಲರ್ ಹಣವನ್ನು ಖರ್ಚು ಮಾಡಿದ್ದೇವೆ. ಈ ಯುದ್ಧದಲ್ಲಿ ಇನ್ನೂ ಎಷ್ಟು ತಲೆಮಾರಿನವರೆಗೆ ಅಮೇರಿಕದ ಗಂಡು ಮತ್ತು ಹೆಣ್ಣು ಮಕ್ಕಳು ತಮ್ಮ ಜೀವವನ್ನು ಕಳೆದುಕೊಳ್ಳಬೇಕು ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

ತಾಲಿಬಾನ್ ಕುರಿತು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಎಂಪಿಎಲ್‍ಬಿ)ನ ವಕ್ತಾರ ನೋಮಾನಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಾಲಿಬಾನಿಗಳಿಗೆ ಶುಭಕೋರಿರುವ ನೋಮಾನಿ, ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿದ್ದನು ಸಮರ್ಥಿಸಿಕೊಂಡು, ನಿಮಗೆ ಹಿಂದು ಮುಸ್ಲಿಮರು ಸಲಾಮ್ ಹೇಳುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ

ಇತ್ತ ಬ್ರಿಟನ್ 20 ಸಾವಿರ ಶರಣಾರ್ಥಿ ಅಫ್ಗನರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದೆ. ಇದರಲ್ಲಿ ಮಹಿಳೆ ಮತ್ತು ಧರ್ಮದ ಆಧಾರದಲ್ಲಿ ಅಲ್ಪಸಂಖ್ಯಾತರಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ತಾಲಿಬಾನಿಗಳಿಗೆ ಹೆದರಿ 1 ವಿಮಾನದಲ್ಲಿ ಪ್ರಯಾಣಿಸಲು ಮುಗಿಬಿದ್ದ ನೂರಾರು ಜನ

https://www.youtube.com/watch?v=q1d3GWb66jQ

Share This Article
Leave a Comment

Leave a Reply

Your email address will not be published. Required fields are marked *