ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ

Public TV
2 Min Read

– ಭಯೋತ್ಪಾದನೆಗೆ ಅಫ್ಘನ್ ನೆಲೆ ಬಳಸಲು ಬಿಡಲ್ಲ
– ಮುಂದಿನ ವಾರ ಮಹತ್ವದ ನಿರ್ಧಾರ ಪ್ರಕಟ

ವಾಷಿಂಗ್ಟನ್: ನಮ್ಮ ಸೈನಿಕರ ಮೇಲೆ ದಾಳಿಯಾದ ಮರುಕ್ಷಣವೇ ಪ್ರತಿದಾಳಿ ನಡೆಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ತಡರಾತ್ರಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಫ್ಘಾನಿಸ್ತಾನದ ವಿಷಯದ ಕುರಿತು ಮಾತನಾಡಿದ್ದಾರೆ. ಈ ವೇಳೆ ಇದು ಜಗತ್ತಿನಲ್ಲಿ ಅತಿ ದೊಡ್ಡ ಸಮಸ್ಯೆ. ಭಯೋತ್ಪಾದನೆಗೆ ಅಫ್ಘನ್ ನೆಲೆ ಬಳಸಲು ಬಿಡಲ್ಲ ಎಂದು ಹೇಳಿದ್ದಾರೆ.

ಬೈಡನ್ ಭರವಸೆ:
ನಾವು ಜುಲೈನಿಂದ ಇಲ್ಲಿಯವರೆಗೆ 18 ಸಾವಿರಕ್ಕೂ ಹೆಚ್ಚು ಮತ್ತು ಆಗಸ್ಟ್ 14ರ ನಂತರ 13 ಸಾವಿರ ಜನರನ್ನು ಕಾಬೂಲ್ ನಿಂದ ಸ್ಥಳಾಂತರ ಮಾಡಿದ್ದೇವೆ. ಇದು ಇತಿಹಾಸದಲ್ಲಿ ಕಂಡು ಕೇಳರಿಯದ ದೊಡ್ಡ ಸಮಸ್ಯೆಯಾಗಿದ್ದು, ದೊಡ್ಡ ಮಟ್ಟದಲ್ಲಿಯೇ ಜನರ ಏರ್ ಲಿಫ್ಟ್ ಕಾರ್ಯ ನಡೆಯುತ್ತಿದೆ. ಇದೇ ವೇಳೆ ಕಾಬೂಲ್ ನಲ್ಲಿಯ ಜನರ ಏರ್ ಲಿಫ್ಟ್ ಮಾಡಲು ಅಮೆರಿಕದ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ನಾವು 20 ವರ್ಷ ಅಫ್ಘಾನಿಸ್ತಾನದ ಜೊತೆ ಕೆಲಸ ಮಾಡಿದ್ದೇವೆ. ಸದ್ಯ ಕಾಬೂಲ್ ನಲ್ಲಿ ಅಮೆರಿಕದ 6 ಸಾವಿರ ಸೈನಿಕರಿದ್ದಾರೆ. ಒಂದು ವೇಳೆ ಅಮೆರಿಕ ಸೇನೆಯ ಮೇಲೆ ತಾಲಿಬಾನಿಗಳು ದಾಳಿ ನಡೆಸಿದ್ರೆ ಪ್ರತ್ಯುತ್ತರ ನೀಡುತ್ತೇವೆ. ಅಫ್ಘಾನಿಸ್ತಾನದ ಕುರಿತು ಮುಂದಿನ ವಾರದಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗವುದು ಎಂದು ಹೇಳಿದರು.  ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣಕ್ಕೆ 5 ಸಾವಿರ ಅಮೆರಿಕ ಸೈನಿಕರ ನಿಯೋಜನೆ

ಬೈಡನ್ ಭಾಷಣದ ಪ್ರಮುಖ ಅಂಶಗಳು
* ಸದ್ಯ ನಮ್ಮ ಸೈನಿಕರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭದ್ರತೆ ನೀಡಿದ್ದು, ಜನರ ಏರ್ ಲಿಫ್ಟ್ ಮಾಡಲು ಸಹಾಯ ಮಾಡುತ್ತಿದ್ದಾರೆ. ಅಮೆರಿಕ ಸೇರಿದಂತೆ ಬೇರೆ ದೇಶದ ಚಾರ್ಟರ್ ವಿಮಾನ ಮತ್ತು ಜನರಿಗೆ ಅಮೆರಿಕ ಸೇನೆ ರಕ್ಷಣೆ ನೀಡುವ ಕೆಲಸ ಮಾಡುತ್ತಿದೆ.
* ಐಎಸ್‍ಐಎಸ್ ನವರ ಭಯೋತ್ಪಾದನೆ ಅಪಾಯಕಾರಿಯಾಗಿದೆ ನಾಟೋ ದೇಶಗಳ ಜೊತೆ ಅಮೆರಿಕ ನಿಲ್ಲಲಿದೆ.
* ಅಫ್ಘಾನಿಸ್ತಾನದಲ್ಲಿಯ ಯದ್ಧಕ್ಕೆ ಅಂತ್ಯ ಹಾಡುವ ಸಮಯ ಬಂದಾಗಿದೆ. ನಾಟೋ ದೇಶಗಳು ಈ ನಿರ್ಣಯಕ್ಕೆ ಸಹಮತ ನೀಡಿದೆ. ಮುಂದಿನ ವಾರ ಜಿ-7 ಬೈಠಕ್ ನಲ್ಲಿ ನಾವು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದೇವೆ.
* ಗಾಯಾಳು ಸೈನಿಕರ ನಡುವೆಯೇ ಸೇನೆ ಕೆಲಸ ಮಾಡುತ್ತಿದೆ. ಇದರ ಅಂತಿಮ ಪರಿಣಾಮ ಏನು ಆಗುತ್ತೆ ಎಂದು ಸದ್ಯಕ್ಕೆ ನಾನು ಹೇಳುವ ಸ್ಥಿತಿಯಲ್ಲಿಲ್ಲ. ಸಾವು-ನೋವು ಆಗದಂತೆ ತಮ್ಮ ನಿರ್ಣಯ ಜಾರಿಗೆ ಬರಲಿದೆ. ಇದನ್ನೂ ಓದಿ: ನೀನು ಮಹಿಳೆ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು – ಮಹಿಳಾ ಪತ್ರಕರ್ತೆಗೆ ಗೇಟ್‍ಪಾಸ್

ಅಮೆರಿಕದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು:
ಅಮೆರಿಕದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ತಾಲಿಬಾನಿಗಳ ಕೈವಶವಾಗಿವೆ. ಅತ್ಯಾಧುನಿಕ ಯುದ್ಧ ಟ್ಯಾಂಕ್‍ಗಳು, ರೈಫೆಲ್ಸ್ ಗಳು, 2 ಸಾವಿರ ಬಹು ಉದ್ದೇಶಿತ ಅತ್ಯಾಧುನಿಕ ಟ್ಯಾಂಕ್ ಗಳು, ಬಹು ಉದ್ದೇಶಿತ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್, ಸ್ಕೌಟ್ ಯುದ್ಧ ಹೆಲಿಕಾಪ್ಟರ್, ಮಿಲಿಟರಿ ಡ್ರೋಣ್‍ಗಳು, ಎಂ-16 ರೈಫಲ್‍ಗಳು, 6 ಲಕ್ಷದಷ್ಟು ಶಸ್ತ್ರಾಸ್ತ್ರಗಳು ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ಈ ಶಸ್ತ್ರಾಸ್ತ್ರಗಳ ನಾಶಕ್ಕೆ ವೈಮಾನಿಕ ದಾಳಿ ನಡೆಸಲು ಅಮೆರಿಕ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕಾಬೂಲ್‍ನಲ್ಲಿ ಕನ್ನಡಿಗರು ಸೇರಿ 450 ಭಾರತೀಯರ ಒದ್ದಾಟ – ಯಾವುದೇ ಕ್ಷಣದಲ್ಲಿ ಏರ್‌ಲಿಫ್ಟ್ ಸಾಧ್ಯತೆ

 

Share This Article
Leave a Comment

Leave a Reply

Your email address will not be published. Required fields are marked *