ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

Public TV
2 Min Read

ಕಾಬೂಲ್: ಯುಎಸ್ ಬೆಂಬಲಿತ ಆಡಳಿತದಲ್ಲಿ ಸೇವೆ ಸಲ್ಲಿಸಿದ ಸೈನಿಕರನ್ನು ತಾಲಿಬಾನಿಗಳು ರಹಸ್ಯವಾಗಿ ಕೊಂದಿದ್ದಾರೆ ಎಂದು ಆರೋಪಿಸಿ ಮಹಿಳೆಯರ ಗುಂಪೊಂದು ಮಂಗಳವಾರ ಅಫ್ಘಾನ್ ರಾಜಧಾನಿ ಕಾಬೂಲ್ ನಲ್ಲಿ ಪ್ರತಿಭಟನೆ ನಡೆಸಿದೆ.

ಕಾಬೂಲ್‍ನ ಮಧ್ಯಭಾಗದಲ್ಲಿರುವ ಮಸೀದಿಯೊಂದರ ಬಳಿ ಸುಮಾರು 30 ಮಹಿಳೆಯರು ಜಮಾಯಿಸಿದ್ದು, ತಾಲಿಬಾನ್ ಪಡೆಗಳ ವಿರುದ್ಧ ‘ನ್ಯಾಯಬೇಕು’ ಎಂದು ಘೋಷಣೆಗಳನ್ನು ಕೂಗುತ್ತಾ ನೂರು ಮೀಟರ್ ಮೆರವಣಿಗೆ ನಡೆಸಿದ್ದಾರೆ.

ತಾಲಿಬಾನಿಗಳು ಯುವಕರನ್ನು ನಿಗೂಢವಾಗಿ ಹತ್ಯೆ ಮಾಡಿದ್ದಾರೆ. ಅಲ್ಲದೇ ದೇಶದ ಮಾಜಿ ಸೈನಿಕರನ್ನು ಹತ್ಯೆ ಮಾಡಿದ್ದಾರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವಿಚಾರವನ್ನು ಮಾಧ್ಯಮಗಳು ಪ್ರಕಟಿಸಬಾರದು ಎಂದು ತಾಲಿಬಾನ್ ಪ್ರಯತ್ನಿಸಿತ್ತು. ಇದಕ್ಕೆ ತಾಲಿಬಾನಿಗಳು ವರದಿಗಾರರನ್ನು ಮತ್ತು ಛಾಯಾಗ್ರಾಹಕರ ಉಪಕರಣಗಳನ್ನು ವಶಪಡಿಸಿಕೊಂಡಿದ್ದರು. ಕ್ಯಾಮರಾವನ್ನು ಹಿಂದಿರುಗಿಸುವ ಮೊದಲು ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿ ಅವರಿಗೆ ಕೊಟ್ಟಿದ್ದರು. ಇದನ್ನೂ ಓದಿ: ಪುರುಷ ಸಂಬಂಧಿಗಳು ಜೊತೆಯಲ್ಲಿ ಇಲ್ಲದಿದ್ರೆ ಮಹಿಳೆಯರು ದೂರ ಪ್ರಯಾಣಿಸುವಂತಿಲ್ಲ: ತಾಲಿಬಾನ್‌

ಅಮ್ನೆಸ್ಟಿ ಇಂಟರ್‍ನ್ಯಾಶನಲ್ ಮತ್ತು ಹ್ಯೂಮನ್ ರೈಟ್ಸ್ ವಾಚ್, ತಾಲಿಬಾನ್ ಅಧಿಕಾರವನ್ನು ಸ್ವಾಧೀನಪಡಿಸಿಕೊಂಡ ನಂತರ 100 ಕ್ಕೂ ಹೆಚ್ಚು ಕಾನೂನುಬಾಹಿರ ಹತ್ಯೆಗಳು ಅಫ್ಘಾನ್ ನಲ್ಲಿ ನಡೆದಿದೆ ಎಂಬ ಆರೋಪಗಳಿವೆ ಎಂದು ವಿಶ್ವಸಂಸ್ಥೆ ವರದಿ ಮಾಡಿತ್ತು. ಈ ಹಿನ್ನೆಲೆ ಮಂಗಳವಾರ ತಾಲಿಬಾನ್ ವಿರುದ್ಧ ಪ್ರತಿಭಟನೆ ಮಾಡಲಾಗಿದೆ.

ಪ್ರತಿಭಟನಾಕಾರರಾದ ನಯೆರಾ ಕೊಹಿಸ್ತಾನಿ, ತಾಲಿಬಾನಿಗಳು ತಮ್ಮ ದೌರ್ಜನ್ಯವನ್ನು ನಿಲ್ಲಿಸಬೇಕು. ನಮಗೆ ಸ್ವಾತಂತ್ರ್ಯ ಬೇಕು, ನಮಗೆ ನ್ಯಾಯ ಬೇಕು. ನಮಗೆ ಮಾನವ ಹಕ್ಕುಗಳು ಬೇಕು ಎಂದು ಆಗ್ರಹಿಸಿದ್ದಾರೆ.

ಆಗಸ್ಟ್‍ನಲ್ಲಿ ತಾಲಿಬಾನ್ ಘೋಷಿಸಿದ ಸಾಮಾನ್ಯ ಕ್ಷಮಾದಾನವನ್ನು ಉಲ್ಲಂಘಿಸಿ, ಮಾಜಿ ಸೈನಿಕರು ಮತ್ತು ಸರ್ಕಾರಿ ನೌಕರರನ್ನು ತಾಲಿಬಾನಿಗಳು ಹತ್ಯೆ ಮಾಡಲಾಗಿದೆ. ಅಲ್ಲದೇ ತಾಲಿಬಾನ್ ಆಳ್ವಿಕೆಯ ಅಡಿಯಲ್ಲಿ ಮಹಿಳೆಯರಿಗೆ ಹಲವು ನಿರ್ಬಂಧಗಳಿವೆ. ಇದರಿಂದ ಅವರು ಜೀವಿಸಲು ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂದು ಬಂದ್‌ ಬದಲಿಗೆ ಬೃಹತ್‌ ರ‍್ಯಾಲಿ – MES ನಿಷೇಧಕ್ಕೆ ಸರ್ಕಾರಕ್ಕೆ ಗಡುವು

ವಾರಾಂತ್ಯದಲ್ಲಿ ತಾಲಿಬಾನ್ ಸರ್ಕಾರವು, ಮಹಿಳೆಯರು ಪುರುಷ ಸಂಬಂಧಿ ಬೆಂಗಾವಲು ಹೊರತು ದೂರದ ಪ್ರಯಾಣವನ್ನು ನಿಷೇಧಿಸಲಾಗಿದೆ ಎಂದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದರಿಂದ ಆಕ್ರೋಶಗೊಂಡ ಮಹಿಳೆಯರು, ನಮ್ಮ ಹಕ್ಕುಗಳು ಮಾನವ ಹಕ್ಕುಗಳಾಗಿವೆ. ನಾವು ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *