3 ಸಾವಿರ ಲೀಟರ್ ಮದ್ಯವನ್ನ ಕಾಲುವೆಗೆ ಸುರಿದ ತಾಲಿಬಾನ್

Public TV
2 Min Read

ಕಾಬೂಲ್: ಅಫ್ಘಾನಿಸ್ತಾನದ ಗುಪ್ತಚರ ಏಜೆಂಟ್ ತಂಡವು 3,000 ಲೀಟರ್ ಮದ್ಯವನ್ನು ಕಾಲುವೆಗೆ ಸುರಿದಿದೆ.

ಅಫ್ಘಾನಿಸ್ತಾನದ ಗುಪ್ತಚರ ಏಜೆಂಟ್ ತಂಡವು ಕಾಬೂಲ್‍ನ ಕಾಲುವೆಗೆ ಸುಮಾರು 3,000 ಲೀಟರ್ ಮದ್ಯವನ್ನು ಸುರಿದಿದೆ ಎಂದು ದೇಶದ ಬೇಹುಗಾರಿಕಾ ಸಂಸ್ಥೆ ಇಂದು ತಿಳಿಸಿದೆ. ಅದು ಅಲ್ಲದೇ ಈ ಕುರಿತು ತಾಲಿಬಾನ್ ಅಧಿಕಾರಿಗಳು ಮದ್ಯ ಮಾರಾಟವನ್ನು ಭೇದಿಸುತ್ತಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

ಜನರಲ್ ಡೈರೆಕ್ಟರೇಟ್ ಆಫ್ ಇಂಟೆಲಿಜೆನ್ಸ್(ಜಿಡಿಐ) ಈ ಕುರಿತು ಮಾಹಿತಿ ನೀಡಿದ್ದು, ಕಾಬೂಲ್ ನಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ತಿಳಿದ ನಂತರ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಮದ್ಯವನ್ನು ವಶಪಡಿಸಿಕೊಂಡ ಏಜೆಂಟ್ ಗಳು ಅದನ್ನು ಕಾಲುವೆಗೆ ಸುರಿದಿದ್ದಾರೆ.

ಗುಪ್ತಚರ ಅಧಿಕಾರಿಯೊಬ್ಬರು ಇಂದು ಟ್ವಿಟರ್‌ನಲ್ಲಿ, ಮುಸ್ಲಿಮರು ಮದ್ಯ ತಯಾರಿಕೆ ಮತ್ತು ವಿತರಣೆಯಿಂದ ಗಂಭೀರವಾಗಿ ದೂರವಿರಬೇಕು ಎಂದು ಬರೆದು ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

ಈ ದಾಳಿ ಕುರಿತು ಅಧಿಕಾರಿಗಳು ಯಾವುದೇ ನಿಖರ ಮಾಹಿತಿಯನ್ನು ನೀಡಿಲ್ಲ. ಆದರೆ ಕಾರ್ಯಾಚರಣೆಯ ಸಮಯದಲ್ಲಿ ಮದ್ಯವನ್ನ ವಿತರಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಹಿಂದಿನ ಪಾಶ್ಚಿಮಾತ್ಯ-ಬೆಂಬಲಿತ ಆಡಳಿತದಲ್ಲಿಯೂ ಸಹ ಮದ್ಯವನ್ನು ಮಾರಾಟ ಮಾಡುವುದು ಮತ್ತು ಸೇವಿಸುವುದನ್ನು ನಿಷೇಧಿಸಲಾಗಿತ್ತು. ಆದರಲ್ಲೂ ಇಸ್ಲಾಂನ ಕಠಿಣ ಬ್ರಾಂಡ್‍ಗೆ ಹೆಸರುವಾಸಿಯಾದ ತಾಲಿಬಾನ್, ಅದರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತದೆ. ಇದನ್ನೂ ಓದಿ: ಅಷ್ಟಮಠದ ನಾಲ್ವರು ಸ್ವಾಮೀಜಿಗಳಿಂದ ಎಳ್ಳಮಾವಾಸ್ಯೆ ಸಮುದ್ರಸ್ನಾನ – ಭಕ್ತರು ಪುಳಕ

ಆಗಸ್ಟ್ 15 ರಂದು ಇಸ್ಲಾಮಿಸ್ಟ್ ಗಳು ಅಧಿಕಾರವನ್ನು ವಶಪಡಿಸಿಕೊಂಡ ನಂತರ, ಮಾದಕ ವ್ಯಸನಿಗಳು ಸೇರಿದಂತೆ ದೇಶಾದ್ಯಂತ ದಾಳಿಗಳು ಸಹ ಅಷ್ಟೇ ಹೆಚ್ಚಾಗಿದೆ.

.

Share This Article
Leave a Comment

Leave a Reply

Your email address will not be published. Required fields are marked *