ಧರ್ಮಸ್ಥಳ ಮೂಲದ ಏರೋಸ್ಪೇಸ್ ಎಂಜಿನಿಯರ್ ಪಂಜಾಬ್‌ನಲ್ಲಿ ನಿಗೂಢ ಸಾವು

Public TV
1 Min Read

ಚಂಡೀಗಢ/ಮಂಗಳೂರು: ಧರ್ಮಸ್ಥಳ (Dharmasthala) ಮೂಲದ ಏರೋಸ್ಪೇಸ್ ಎಂಜಿನಿಯರ್ (Aerospace Engineer) ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಪಂಜಾಬ್‌ನಲ್ಲಿ (Punjab) ನಡೆದಿದೆ.

ಆಕಾಂಕ್ಷ ಮೃತ ಏರೋಸ್ಪೇಸ್ ಎಂಜಿನಿಯರ್. ಮೇ 17ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಆಕಾಂಕ್ಷ ಮನೆಯವರು ಪಂಜಾಬ್‌ಗೆ ತೆರಳಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಅಪಮಾನ – ಜಿಎಸ್‌ ಸೂಟ್ಸ್‌ ಹೋಟೆಲ್‌ ಸೀಜ್‌, ಮ್ಯಾನೇಜರ್‌ ಬಂಧನ

ಧರ್ಮಸ್ಥಳದ ಬೋಳಿಯಾರ್ ನಿವಾಸಿಗಳಾದ ಸುರೇಂದ್ರ ಹಾಗೂ ಸಿಂದೂದೇವಿ ದಂಪತಿ ಮಗಳಾದ ಆಕಾಂಕ್ಷ ಪಂಜಾಬಿನ ಫಗ್ವಾಡಾ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪೂರೈಸಿ ಆರು ಹಿಂಗಳ ಹಿಂದೆ ದೆಹಲಿಯಲ್ಲಿ ಏರೋಸ್ಪೇಸ್ ಎಂಜಿನಿಯರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ಇದನ್ನೂ ಓದಿ: ಪೂರ್ವ ಮುಂಗಾರು ಮಳೆಗೆ ಬೆಂಗಳೂರು ತತ್ತರ – ಒಂದೇ ಒಂದು ಮಳೆಗೆ ಕೆರೆಯಂತಾದ ರಸ್ತೆಗಳು

ಜಪಾನಿನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಆಕಾಂಕ್ಷ ಶೈಕ್ಷಣಿಕ ಪ್ರಮಾಣ ಪತ್ರ ಪಡೆಯಲು ಪಂಜಾಬ್‌ಗೆ ತೆರಳಿದ್ದರು. ಶೈಕ್ಷಣಿಕ ಪ್ರಮಾಣ ಪತ್ರ ಪಡೆದ ನಂತರ ಆಕಾಂಕ್ಷ ಮನೆಯವರಿಗೆ ಕರೆ ಮಾಡಿ ಮಾತನಾಡಿದ್ದರು. ನಂತರ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: EOS-09 ಉಪಗ್ರಹ ಉಡಾವಣೆ ವಿಫಲ – ನಿರ್ದಿಷ್ಟ ಕಕ್ಷೆ ಸೇರುವಲ್ಲಿ ಫೇಲ್

Share This Article