ಹೌಸ್ ಪಾರ್ಟಿಯಲ್ಲಿ ರಾಪರ್ ಜತೆ ಅದ್ವಿಕಾ

Public TV
1 Min Read

ರ‍್ಯಾಪರ್, ಸಿಂಗರ್​, ಕಂಪೋಸರ್​ ALL OK  ಅಲಿಯಾಸ್​ ಅಲೋಕ್​. ಇದೀಗ ಸದ್ದಿಲ್ಲದೆ ಮತ್ತೊಂದು ವಿಡಿಯೋ ಹಾಡನ್ನು ಹೊರತಂದಿದ್ದಾರೆ. ಅದರ ಹೆಸರು “ಹೌಸ್​ ಪಾರ್ಟಿ’. ಹಾಡಿನ ಬಗ್ಗೆ, ಶೂಟಿಂಗ್​ ಅನುಭವದ ಬಗ್ಗೆ ಸಂಗೀತ ನೀಡಿ, ಸಾಹಿತ್ಯ, ಪರಿಕಲ್ಪನೆ, ನಿರ್ದೇಶನ, ನಿರ್ಮಾಣವನ್ನೂ ಮಾಡಿರುವ ಅಲೋಕ್​ ಮಾತನಾಡುತ್ತಾ, ‘ಕೋವಿಡ್​ ಸಮಯದಲ್ಲಿನ ಕಾನ್ಸೆಪ್ಟ್​ವೊಂದರಿಂದ ಪ್ರೇರಣೆ ಪಡೆದು ಹೌಸ್​ ಪಾರ್ಟಿ ಹಾಡನ್ನು ಹೊರತಂದಿದ್ದೇನೆ.  ಮನೆಯಲ್ಲಿಯೇ ಇರಿ, ಅಲ್ಲಿಯೇ ಪಾರ್ಟಿ ಮಾಡಿ ಎಂಬುದನ್ನು ಕಲರ್ ಫುಲ್ ಆಗಿ ತೋರಿಸಿದ್ದೇವೆ. ಗೋಕರ್ಣದ ಕಹಾನಿ ಪ್ಯಾರಡೈಸ್​ ರೆಸಾರ್ಟ್​ನಲ್ಲಿ ಇಡೀ ಹಾಡಿನ ಚಿತ್ರೀಕರಣ ಮಾಡಿದ್ದೇವೆ’ ಎನ್ನುತ್ತಾರೆ . ಇದನ್ನೂ ಓದಿ : ದಪ್ಪಗಿರೋರಿಗೆ ‘ಸೂ’ ಅನ್ನೋ ಕ್ಯಾರೆಕ್ಟರ್ ಸರ್ಟಿಫಿಕೇಟ್ : ಹಿಗ್ಗಾಮುಗ್ಗ ಝಾಡಿಸಿದ ಗಾಳಿಪಟ ನೀತು

‘ಬೇರೆ ಭಾಷೆಗಳ ಆಲ್ಬಂಗಳಿಗೆ ಸಿಗುವ ರೆಸ್ಪಾನ್ಸ್​ ಕನ್ನಡದ ಆಲ್ಬಂ ಹಾಡುಗಳಿಗೆ ಸಿಗುತ್ತಿಲ್ಲ. ಆದರೆ, ನಮ್ಮ ಹಾಡುಗಳು ಬೇರಾವ ಭಾಷೆಗಿಂತಲೂ ಕಡಿಮೆಯಿಲ್ಲ. ಅದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುವುದು ವಿಪರ್ಯಾಸ’ ಎಂದು ಅಲೋಕ್​ ಕಳವಳ ವ್ಯಕ್ತಪಡಿಸುತ್ತಾರೆ. ಇದನ್ನೂ ಓದಿ : ಶ್ರುತಿ ಹಾಸನ್ ಜತೆ ನನ್ನ ಮದುವೆ ಆಗಿದೆ: ಸ್ಫೋಟಕ ಮಾಹಿತಿ ಹಂಚಿಕೊಂಡ ಬಾಯ್ ಫ್ರೆಂಡ್

ಈಗಾಗಲೇ ಕಿರಿಕ್​ ಶಂಕರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಅದ್ವಿಕಾ  ಈ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. “ಇದು ನನ್ನ ಮೊದಲ ಆಲ್ಬಂ. ತುಂಬ ಖುಷಿ ಎನಿಸುತ್ತದೆ. ಆರಂಭದಲ್ಲಿಯೇ ಈ ರೀತಿಯ ಅವಕಾಶಗಳು ಸಿಗುತ್ತಿವೆ. ಎಲ್ಲಿಯೂ ನಮಗೆ ಶೂಟಿಂಗ್​ ಅನಿಸಲೇ ಇಲ್ಲ. ಪಾರ್ಟಿ ಮಾಡಿದ ಖುಷಿ ಆಯಿತು’ ಎನ್ನುತ್ತಾರೆ ಅದ್ವಿಕಾ.  ಈ ಆಲ್ಬಂ ಗೆ ಆಕಾಶ್​ ಜೋಷಿ ಛಾಯಾಗ್ರಹಣದ ಜತೆಗೆ ಸಂಕಲನವನ್ನೂ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *