ಕೆಲಸಕ್ಕೆ ಹೋಗುವಂತೆ ಬುದ್ಧಿ ಮಾತು – ಚಾಕುವಿನಿಂದ ಇರಿದು ತಾಯಿಯ ಹತ್ಯೆಗೈದ ಪಾಪಿ ಮಗ

Public TV
1 Min Read

ಬೆಂಗಳೂರು: ಕೆಲಸಕ್ಕೆ ಹೋಗುವಂತೆ ಬುದ್ಧಿ ಮಾತು ಹೇಳಿದ್ದಕ್ಕೆ ಚಾಕುವಿನಿಂದ ಇರಿದು ತಾಯಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಪುಟ್ಟೇನಹಳ್ಳಿಯ (Puttenahalli) ಶ್ರೀಕಂಠೇಶ್ವರ ಲೇಔಟ್‌ನಲ್ಲಿ ನಡೆದಿದೆ.

ಮೃತ ತಾಯಿಯನ್ನು ಆಯೇಷಾ (50) ಎಂದು ಹಾಗೂ ಆರೋಪಿಯನ್ನು ಶುಫಿಯಾನ್ (32) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕರಾಟೆ ತರಗತಿಯಲ್ಲಿ ‘ವಿದ್ಯಾಪತಿ’ಯ ತಲೆ ಹರಟೆ-ನಾಗಭೂಷಣ್ ಸಿನಿಮಾ ಹಾಡಿಗೆ‌ ಧ್ವನಿಯಾದ ಜಗ್ಗೇಶ್‌

ಇಂದು (ನ.8) ಬೆಳಗ್ಗೆ 10 ಗಂಟೆಗೆ ಈ ಘಟನೆ ನಡೆದಿದೆ. ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದ ಮಗನಿಗೆ ಕೆಲಸಕ್ಕೆ ಹೋಗುವಂತೆ ತಾಯಿ ಬುದ್ಧಿ ಮಾತು ಹೇಳಿದ್ದಾರೆ. ಈ ವೇಳೆ ತಾಯಿ ಹಾಗೂ ಮಗನ ನಡುವೆ ಗಲಾಟೆ ನಡೆದಿದೆ. ಗಲಾಟೆಯಾಗುವಾಗ ಮನೆಯಲ್ಲಿದ್ದ ಚಾಕುವಿನಿಂದ ಇರಿದು ತಾಯಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: Kodagu | ದೇವಾಲಯಕ್ಕೂ ಹಬ್ಬಿದ ವಕ್ಫ್‌ ಭೂತ – ವನದುರ್ಗ, ಗುಳಿಗ ದೈವಾರಾಧನೆ ನಡೆಯುವ 11 ಎಕ್ರೆ ಜಾಗ ವಕ್ಫ್‌ ಆಸ್ತಿ!

Share This Article