ವ್ಯಭಿಚಾರ ಕ್ರಿಮಿನಲ್ ಅಪರಾಧವಲ್ಲ: ಸುಪ್ರೀಂ ಕೋರ್ಟ್

Public TV
2 Min Read

ನವದೆಹಲಿ: ಕಾನೂನಿನ ಮುಂದೆ ಗಂಡು-ಹೆಣ್ಣು ಎಂಬ ಬೇಧವಿಲ್ಲ. ವಿವಾಹಿತ ಪುರುಷ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿರುವುದು ಅಪರಾಧವಲ್ಲ ಅಂತ ಸುಪ್ರೀಂ ಕೋರ್ಟ್‍ನ ಸಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ.

ಭಾರತೀಯ ದಂಡ ಸಹಿತೆಯ ಸೆಕ್ಷನ್ 497 ರ ಪ್ರಕಾರ ವಿವಾಹಿತ ಪುರುಷ ಅನೈತಿಕ ಸಂಬಂಧ ಹೊಂದಿದ್ದರೆ ಅಪರಾಧ ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಅಪರಾಧ ಎಂದು ಹೇಳುವ ಈ ಸೆಕ್ಷನ್ ಅಸಂವಿಧಾನಿಕ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ರೊಹಿನ್‍ಟನ್ ಫಾಲಿ ನಾರಿಮನ್, ಎ ಎಂ ಖಾನ್‍ವಿಲ್ಕರ್, ಡಿ ವೈ ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರ ಅವರನ್ನು ಒಳಗೊಂಡ ಈ ಪೀಠ ಈ ಆದೇಶವನ್ನು ಪ್ರಕಟಿಸಿದೆ. ಹಲವು ದೇಶಗಳು ವ್ಯಭಿಚಾರವನ್ನು ನಿಷೇಧಿಸಿದೆ. ಪ್ರತಿಯೊಬ್ಬ ವ್ಯಕ್ತಿಗೂ ವೈಯಕ್ತಿಕ ಜೀವನ ಇರುತ್ತದೆ. ಗಂಡ ಹೆಂಡತಿಗೆ ಮಾಲೀಕನಲ್ಲ ಎಂದು ಹೇಳುವ ಮೂಲಕ ಸಮಾನತೆಯನ್ನು ಪೀಠ ಸಾರಿದೆ.

ಸಂವಿಧಾನದ 14ನೇ ವಿಧಿಯ ನೆಲೆಯಲ್ಲಿ (ಕಾನೂನಿನ ಮುಂದೆ ಎಲ್ಲರೂ ಸಮಾನರು) ಐಪಿಸಿಯ ಸೆಕ್ಷನ್ 497 ಕ್ರಿಮಿನಲ್ ಅಪರಾಧವಾಗಿ ಉಳಿಯಲು ಸಾಧ್ಯವಿಲ್ಲ. ಗಂಡು-ಹೆಣ್ಣು ಎಂಬ ಬೇಧವಿಲ್ಲ. ಎಲ್ಲರೂ ಸಂವಿಧಾನದ ಮುಂದೆ ಸಮಾನರು ಎಂದು ಹೇಳಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಹಿರಿಯ ವಕೀಲ ಶ್ಯಾಮ್ ಸುಂದರ್, ನಮ್ಮದು ಸಾಂಸ್ಕೃತಿಕ ದೇಶ. ತೀರ್ಪು ಹಲವು ಗೊಂದಲಗಳನ್ನು ಹೊಂದಿದ್ದು, ಮುಂದೆ ಏನಾಗುತ್ತದೆ ಎಂಬುದರ ಬಗ್ಗೆ ಭಯ ಹುಟ್ಟಿಸುವಂತಿದೆ. ಸದ್ಯ ನನಗೆ ತೀರ್ಪಿನ ಸಂಪೂರ್ಣ ವಿವರ ನೋಡಿಲ್ಲ. ಒಬ್ಬ ವಿವಾಹಿತ ಪುರುಷ ಅಥವಾ ಮಹಿಳೆ ಅನೈತಿಕ ಸಂಬಂಧ ಹೊಂದಿದ್ದಲ್ಲಿ ಅದು ಅವನಿಗೆ/ಆಕೆಗೆ ಮಾಡಿದ ಮೋಸವಾಗಲಿದೆ. ನಂಬಿಕೆ, ಸಂಸ್ಕೃತಿಯನ್ನು ಒಳಗೊಂಡ ಸಮಾಜ. ನೈತಿಕವಾಗಿ ಅನೈತಿಕ ಸಂಬಂಧ ಮೋಸ ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು.

ಏನಿದು ಪ್ರಕರಣ:
ಮದುವೆ ಬಳಿಕ ಪತಿಯಾದವನು ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ರೆ ಆತನಿಗೆ ಶಿಕ್ಷೆ ವಿಧಿಸಬಹುದಾಗಿತ್ತು. ಮದುವೆಯಾದರೂ ಅನೈತಿಕ ಸಂಬಂಧವನ್ನು ಹೊಂದಿದ್ದರೆ ಅದು ಅಪರಾಧವಾಗುತ್ತಿರಲಿಲ್ಲ. ಹೀಗಾಗಿ ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಐಪಿಸಿ ಸೆಕ್ಷನ್ 497 ಸರಿಯೇ ಎಂದು ಪ್ರಶ್ನಿಸಿ ಜೋಸೆಫ್ ಶೈನ್ ಎಂಬವರು ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿವಾಹಿತ ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದುವ ಪುರುಷರನ್ನು ಮಾತ್ರವೇ ಶಿಕ್ಷಿಸುವ ಈ ಸೆಕ್ಷನ್ ಅನ್ನು ರದ್ದು ಪಡಿಸಬೇಕೆಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದರು.

ಪುರುಷನ ಮೇಲಿನ ಈ ಆರೋಪ ಸಾಬೀತಾದರೆ ಗರಿಷ್ಟ 5 ವರ್ಷ ಜೈಲು ಶಿಕ್ಷೆ ಅಥವಾ ದಂಡವನ್ನು ವಿಧಿಸಲಾಗುತಿತ್ತು. ಕೆಲವೊಮ್ಮೆ ಜೈಲು ಶಿಕ್ಷೆಯ ಜೊತೆ ದಂಡವನ್ನು ಪಾವತಿಸಬೇಕಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *