ಕಡತ ವಿಲೇವಾರಿ ಮತ್ತಷ್ಟು ಸ್ಟ್ರಿಕ್ಟ್ – ಬೊಮ್ಮಾಯಿ ಹೊಸ ರೂಲ್ಸ್ ಏನು? ಏಕೆ?

Public TV
1 Min Read

ಬೆಂಗಳೂರು: ಬಸವರಾಜ ಬೊಮ್ಮಾಯಿ ಸಿಎಂ ಪದವಿಗೇರಿ ಒಂದು ತಿಂಗಳಾಗಿದೆ. ಒಂದೇ ತಿಂಗಳಲ್ಲಿ ಆಡಳಿತವನ್ನು ಚುರುಕುಗೊಳಿಸಿ ಬಿಗಿ ಮಾಡುವ ಪ್ರಯತ್ನ ಆರಂಭವಾಗಿದೆ. ಹಂತ ಹಂತವಾಗಿ ಆಡಳಿತದಲ್ಲಿ ದಕ್ಷತೆ ತರಲು ಸಿಎಂ ಪ್ಲಾನ್ ಮಾಡಿಕೊಂಡಿದ್ದಾರೆ.

ಅಧಿಕಾರಿ ವರ್ಗವನ್ನು ಸರಿದಾರಿಗೆ ತರುವುದು, ಸರ್ಕಾರಿ ಆದೇಶಗಳಿಗೆ ಅಧಿಕೃತ ಟಚ್ ಕೊಡುವುದು ಸಿಎಂ ಮೊದಲ ಉದ್ದೇಶವಾಗಿದ್ದು, ಅಧಿಕಾರಿಗಳ ಕಾರ್ಯನಿರ್ವಹಣೆಯಲ್ಲಿದ್ದ ಲೂಪ್ ಹೋಲ್ಸ್ ಗಳಿಗೆ ಬ್ರೇಕ್ ಹಾಕಿದ್ದಾರೆ.

ಅಧಿಕಾರಿಗಳಿಗೆ ಆಯಾಯಾ ಇಲಾಖಾ ಹೊಣೆಗಾರಿಕೆಗಳನ್ನು ಸಿಎಂ ಫಿಕ್ಸ್ ಮಾಡಿದ್ದಾರೆ. ಕಡತಗಳ ವಿಲೇವಾರಿ ವಿಚಾರದಲ್ಲಿ ಸಣ್ಣ ಲೋಪ ಆಗಬಾರದು, ಯಾವುದೇ ಕಾರಣಕ್ಕೂ ಕಡತಗಳು ದುರ್ಬಳಕೆ ಆಗಬಾರದು ಎಂದು ಸೂಚಿಸಿದ್ದಾರೆ. ಪ್ರತೀ ಹಂತದ ಅಧಿಕಾರಿಯೂ ತನ್ನ ವ್ಯಾಪ್ತಿಯಲ್ಲಿ ಕಡತ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿರಬೇಕೆಂದು ತಾಕೀತು ಮಾಡಿದ್ದಾರೆ.

ಪ್ರತಿಯೊಂದು ಆಡಳಿತಾತ್ಮಕ ನಿರ್ಧಾರಗಳು ತಮ್ಮ ಕಣ್ತಪ್ಪಿ ಹೋಗಬಾರದು. ನಿರ್ಧಾರಗಳೂ ಆದೇಶ ಪ್ರತಿ ಮೂಲಕವೇ ಅಧಿಕೃತವಾಗಿರಬೇಕೆಂಬ ಕಾರಣಕ್ಕೆ ಸರ್ಕಾರಿ ಆದೇಶ ಕಾಪಿಗಳ ಕುರಿತಂತೆ ಹಿಂದಿನ ಸಂಪ್ರದಾಯಕ್ಕೆ ಸಿಎಂ ತಿಲಾಂಜಲಿ ಇಟ್ಟಿದ್ದಾರೆ. ಇದನ್ನೂ ಓದಿ : ನಾನು ಜೈಲಲ್ಲಿ ಇದ್ದೆ, ಒಂದು ಬೀಡಿಗೆ ಎಷ್ಟು ದುಡ್ಡು ಕೊಡ್ಬೇಕು ಗೊತ್ತು : ಆರಗ ಜ್ಞಾನೇಂದ್ರ 

ಆದೇಶ ಪ್ರತಿಗಳಲ್ಲಿ ಬರೇ ಸಹಿಯಷ್ಟೇ ಇಲ್ಲದೇ ಮುಖ್ಯಮಂತ್ರಿಗಳ ಮೊಹರನ್ನು ಸಹ ಬಳಸಲಾಗುತ್ತಿದೆ. ಈ ಮೂಲಕ ಸಹಿಯೊಂದಿಗೆ ಸೀಲ್ ಅನ್ನು ಆದೇಶ ಪ್ರತಿಗಳಲ್ಲಿ ಸಿಎಂ ಬಳಕೆಗೆ ತಂದಿದ್ದಾರೆ. ಮಹತ್ವದ ಆದೇಶ ಕಾಪಿಗಳಿಗೆ ತಮ್ಮ ಸೀಲ್ ಅನ್ನು ಸಿಎಂ ಕಡ್ಡಾಯ ಮಾಡಿದ್ದಾರೆ. ಯಾವುದೇ ಲೋಪ, ದುರ್ಬಳಕೆ, ಅಜಾರೂಕತೆ ಆಗದಂತೆ ಸಿಎಂ ನಿಗಾವಹಿಸಿದ್ದು, ಏನೇ ನಿರ್ಧಾರ ಇದ್ದರೂ ಖುದ್ದು ತಾವೇ ಗಮನಿಸಿ, ಪರಿಶೀಲಿಸಿ ಅನುಮತಿ ನೀಡುತ್ತಿದ್ದಾರೆ. ಇದನ್ನೂ ಓದಿ : ಮಿಡ್‍ನೈಟ್ ಪಾರ್ಟಿ ಮಾಡಿ ಜಾಲಿ ರೈಡ್? – ಜೊಮಾಟೊ ಡೆಲಿವರಿ ಬಾಯ್ ಜಸ್ಟ್ ಮಿಸ್

ಆಡಳಿತದಲ್ಲಿ ಹೊಸ ಸುಧಾರಣೆ ಜಾರಿಗೆ ಮುಂದಾಗಿದ್ದಕ್ಕೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲೂ ಸಿಎಂ ಬೊಮ್ಮಾಯಿ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *