ಹೈದ್ರಾಬಾದ್‌ನಲ್ಲಿ ಅದಿತಿ-ಸಿದ್ದಾರ್ಥ್ ಮದುವೆ ತಯಾರಿ

Public TV
1 Min Read

ಸೆನ್ಸೇಷನಲ್ ತಾರಾ ಜೋಡಿ, ಬಹುಭಾಷಾ ನಟಿ ಅದಿತಿ ರಾವ್ ಹೈದರಿ (Aditi Rao Hydari) ಹಾಗೂ ತಮಿಳು ನಟ ಸಿದ್ದಾರ್ಥ್ (Siddharth) ಶೀಘ್ರದಲ್ಲೇ ಮದುವೆಯಾಗಲಿದ್ದು (Marriage) ಪೂರ್ವ ತಯಾರಿ ಭರದಿಂದ ಸಾಗಿದೆ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು ಕಳೆದ ಮಾರ್ಚ್ ತಿಂಗಳಲ್ಲಿ ಗುಪ್ತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದೇ ಜಾಗದಲ್ಲೀಗ ಡೆಸ್ಟಿನೇಷನ್ ವೆಡ್ಡಿಂಗ್  ಪ್ಲ್ಯಾನ್ ಮಾಡಿದ್ದಾರೆ.

400 ವರ್ಷಗಳ ಐತಿಹಾಸಿಕ ಹಿನ್ನಲೆಯುಳ್ಳ ದೇವಸ್ಥಾನದಲ್ಲೇ ಅದಿತಿ ತಾನು ಪ್ರೀತಿಸಿದ ಹುಡುಗ ಸಿದ್ದಾರ್ಥ್ ಜೊತೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. ಹೈದ್ರಾಬಾದ್‌ನಿಂದ ನೂರೈವತ್ತು ಕಿಲೋಮೀಟರ್ ದೂರವಿರುವ ವಾನಪರ್ತಿಯ ಶ್ರೀರಂಗಪುರಂ ದೇವಸ್ಥಾನದಲ್ಲಿ ಅದಿತಿ-ಸಿದ್ದಾಥ್ ಮದುವೆಗೆ ಪ್ಲಾö್ಯನ್ ಆಗಿದೆ. ಈ ದೇವಸ್ಥಾನ ಅದಿತಿಗೆ ಭಾವನಾತ್ಮಕವಾಗಿ ಪ್ರಭಾವ ಬೀರಿರುವ ಜಾಗ ಎಂದು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅಜ್ಜಿಯನ್ನ ಕಳೆದುಕೊಂಡಿದ್ದ ಅದಿತಿಗೆ ಅವರ ಆಶೀರ್ವಾದ ಇಲ್ಲಿ ಸಿಗುವ ಭಾವನೆಯಂತೆ. ಕಾರಣ ಅದಿತಿ ಪೂರ್ವಜರಿಗೆ ಈ ದೇವಾಲಯದ ಜೊತೆ ಇರುವ ನಂಟನ್ನ ಮದುವೆಯಲ್ಲಿ ಬೆಸೆಯುವ ಯೋಜನೆ.

 

ತೆಲುಗಿನ `ಮಹಾ ಸಮುದ್ರಂ’ ಚಿತ್ರದಲ್ಲಿ ಅದಿತಿ ಸಿದ್ದಾರ್ಥ್ ತೆರೆಹಂಚಿಕೊಂಡಿದ್ದರು ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಪ್ರೀತಿಯ ವಿಚಾರ ಗುಟ್ಟಾಗೇ ಇಟ್ಟಿದ್ದ ಜೋಡಿ ಎಂಗೇಜ್ಮೆಂಟ್ ಆದ್ಮೇಲೆ ಸಂಬಂಧವನ್ನ ಆಫಿಷಿಯಲ್ ಆಗಿ ಘೋಷಿಸಿದ್ದರು. ಇದೀಗ ಮದುವೆ ದಿನಾಂಕವೂ ನಿಗದಿಯಾಗಿದ್ದು ಅದ್ದೂರಿಯಾಗಿ ಪ್ರಕೃತಿ ಮಧ್ಯೆ ಸತಿಪತಿಯಾಗಲು ನಿರ್ಧರಿಸಿದ್ದಾರಂತೆ ಅದಿತಿ ಸಿದ್ದಾರ್ಥ್.

Share This Article