ಮತ್ತೆ ಒಂದಾಯ್ತು ಗುಡ್ ಬ್ಯಾಡ್ ಅಗ್ಲಿ ಕಾಂಬಿನೇಷನ್

Public TV
1 Min Read

ಗುಡ್ ಬ್ಯಾಡ್ ಅಗ್ಲಿ ನಿರ್ದೇಶಕನ ಜೊತೆ ಅಜಿತ್‌ಕುಮಾರ್ (Ajith Kumar) ಮುಂದಿನ ಸಿನಿಮಾ ಮಾಡೋದು ಪಕ್ಕಾ ಆಗಿದೆ. ಎಕೆ-64 (AK 64) ವರ್ಕಿಂಗ್ ಟೈಟಲ್‌ನಲ್ಲಿ ಸಿನಿಮಾ ಅನೌನ್ಸ್ ಮಾಡಿದ್ದು, ಚಿತ್ರದ ಟೈಟಲ್ ಬಗ್ಗೆ ಮುಂದಿನ ದಿನಗಳಲ್ಲಿ ರಿವೀಲ್ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಇದೇ ವರ್ಷ ತೆರೆಕಂಡ ಕಮರ್ಶಿಯಲ್ ಎಂಟರ್‌ಟೈನ್ಮೆಂಟ್‌ನ ಗುಡ್ ಬ್ಯಾಡ್ ಅಗ್ಲಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದೆ. ಹೀಗಾಗಿ ಇದೇ ಸಿನಿಮಾ ನಿರ್ದೇಶಕ ಅಧಿಕ್ ರವಿಚಂದ್ರನ್ (Adhik Ravichandran) ಜೊತೆ ಅಜಿತ್‌ಕುಮಾರ್ ಮತ್ತೆ ಸಿನಿಮಾ ಮಾಡಲು ಕಾಲ್‌ಶೀಟ್ ಕೊಟ್ಟಿದ್ದಾರೆ.

ಇತ್ತೀಚೆಗೆ ಸುದ್ದಿಗೋಷ್ಠಿಯೊಂದರಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಅಧಿಕ್ ರವಿಚಂದ್ರನ್ ಮತ್ತೆ ಅಜಿತ್‌ಕುಮಾರ್ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕಿರೋ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಾರಿ ಗುಡ್ ಬ್ಯಾಡ್ ಅಗ್ಲಿ ಸಿನಿಮಾಗಿಂತ ವಿಭಿನ್ನವಾದ ಕಥೆಯನ್ನ ಮಾಡಿಕೊಂಡಿರೋದಾಗಿ ಹೇಳಿಕೊಂಡಿದ್ದಾರೆ. ತಲಾ ಅಜಿತ್ ಒಂದು ಕಡೆ ಸಿನಿಮಾ, ಮತ್ತೊಂದೆಡೆ ಕಾರ್ ರೇಸ್‌ನಲ್ಲೂ ಬ್ಯುಸಿಯಾಗಿದ್ದಾರೆ.

ಕಾರ್ ರೇಸ್ ಬಗ್ಗೆ ಪ್ಯಾಷನ್ ಹೊಂದಿರೋ ನಟ ಅಜಿತ್ ಕುಮಾರ್ ತಮ್ಮ ಮುಂದಿನ ಸಿನಿಮಾ ಆ ಕಾನ್ಸೆಪ್ಟ್ ಮೇಲೆ ಮಾಡ್ತಾರಾ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಆದ್ರೆ ಈ ಬಗ್ಗೆ ಮಾಹಿತಿ ಇನ್ನು ದೊರೆತಿಲ್ಲ. ಆದರೆ ಗುಡ್ ಬ್ಯಾಡ್ ಅಗ್ಲಿ ಸಿನಿಮಾ ನಿರ್ದೇಶಕರ ಜೊತೆ ತಲಾ ಅಜಿತ್ ಸಿನಿಮಾ ಮಾಡೋದು ಪಕ್ಕಾ. ಈ ಸುದ್ದಿ ಕೇಳಿ ಫ್ಯಾನ್ಸ್ ಸಂಭ್ರಮಿಸಿದ್ದಾರೆ.

Share This Article