ವಿಕೃತಕಾಮಿ; ವನ್ಯಜೀವಿ ತಜ್ಞನಿಂದಲೇ 40 ಕ್ಕೂ ಹೆಚ್ಚು ನಾಯಿಗಳ ಮೇಲೆ ರೇಪ್‌, ದೌರ್ಜನ್ಯ!

By
1 Min Read

ಬ್ರಿಟನ್: ಬ್ರಿಟಿಷ್‌ ವನ್ಯಜೀವಿ ತಜ್ಞನೊಬ್ಬ ಸುಮಾರು 40 ಕ್ಕೂ ಹೆಚ್ಚು ನಾಯಿಗಳ ಮೇಲೆ ಅತ್ಯಾಚಾರ, ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.

ಪ್ರಾಣಿಗಳ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ 2022ರಲ್ಲಿ ವನ್ಯಜೀವಿ ತಜ್ಞ ಹಾಗೂ ಖ್ಯಾತ ಮೊಸಳೆ ತಜ್ಞ ಆ್ಯಡಮ್ ಬ್ರಿಟನ್‌ (Adam Britton) ಎಂಬಾತನನ್ನು ಬಂಧಿಸಲಾಗಿತ್ತು. ಆತನ ವಿರುದ್ಧ ಪೊಲೀಸರು 60 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಇದನ್ನೂ ಓದಿ: ಬಲೂಚಿಸ್ತಾನದ ಮಸೀದಿ ಬಳಿ ಭಾರೀ ಸ್ಫೋಟ – 52 ಜನ ದುರ್ಮರಣ

ಹತ್ತಾರು ಶ್ವಾನಗಳನ್ನು ಸಾಯುವವರೆಗೂ ಹಿಂಸಿಸುತ್ತಿದ್ದ. ಅಷ್ಟೇ ಅಲ್ಲ, ಪ್ರಾಣಿಗಳ ಮೇಲೆ ಎಸಗುತ್ತಿದ್ದ ದೌರ್ಜನ್ಯದ ದೃಶ್ಯಗಳನ್ನು ವೀಡಿಯೋ ಮಾಡಿ ಆನ್‌ಲೈನ್‌ನಲ್ಲಿ ಹರಿಬಿಡುತ್ತಿದ್ದ. ಈ ವಿಚಾರವಾಗಿ ಆ್ಯಡಮ್‌ ತಪ್ಪೊಪ್ಪಿಕೊಂಡಿದ್ದಾನೆ.

ಆಡಮ್‌ 18 ತಿಂಗಳ ಅವಧಿಯಲ್ಲಿ ಸುಮಾರು 42 ಶ್ವಾನಗಳ ಮೇಲೆ ದೌರ್ಜನ್ಯ ಎಸಗಿದ್ದಾನೆ. ಅವುಗಳ ಪೈಕಿ 39 ಶ್ವಾನಗಳು ಮೃತಪಟ್ಟಿವೆ. ಪ್ರಕರಣ ಸಂಬಂಧ ನಾರ್ದರ್ನ್ ಟೆರಿಟರಿ (ಎನ್‌ಟಿ) ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಯಿತು. ಇದನ್ನೂ ಓದಿ: ಟಿವಿ ಸ್ಟುಡಿಯೋದಲ್ಲೇ ಹೊಡೆದಾಡಿಕೊಂಡ ರಾಜಕಾರಣಿಗಳು

ಬಿಬಿಸಿ ಮತ್ತು ನ್ಯಾಷನಲ್ ಜಿಯಾಗ್ರಫಿಕ್ ಪ್ರೊಡಕ್ಷನ್‌ಗಳಲ್ಲಿ ಈತ ಕೆಲಸ ಮಾಡಿದ್ದ. ಮೊಸಳೆಗಳ ಬಗ್ಗೆ ಅಧ್ಯಯನಕ್ಕೆ 20 ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ಹೋಗಿದ್ದ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್