15 ಜನ ನಿರಂತರವಾಗಿ ರೇಪ್‌ ಮಾಡಿದ್ರೆ ಹೇಗೆ ಪುರಾವೆ ಕೊಡ್ತೀರಾ – ಅದಾ ಶರ್ಮಾ ಪ್ರಶ್ನೆ

Public TV
2 Min Read

ವಿವಾದದ ನಡುವೆಯೂ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ದಿ ಕೇರಳ ಸ್ಟೋರಿ (The Kerala Story) ಇದೀಗ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ. ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಆಸ್ಟ್ರೇಲಿಯಾದಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ರಿಲೀಸ್ ಆಗಿ 2ನೇ ದಿನಕ್ಕೆ 46 ಲಕ್ಷ ರೂ. ಕಮಾಯಿ ಮಾಡಿದೆ. ಅಲ್ಲದೇ ಅಮೆರಿಕದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

View this post on Instagram

 

A post shared by Viral Bhayani (@viralbhayani)

ಗುರುವಾರ ದಿ ಕೇರಳ ಸ್ಟೋರಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ನಟಿ ಅದಾ ಶರ್ಮಾ (Adah Sharma) ಮಾತನಾಡಿದ್ದಾರೆ. ಇದೇ ವೇಳೆ ಕೇರಳದ ಎರ್ನಾಕುಲಂನ ಆರ್ಷ ವಿದ್ಯಾ ಸಮಾಜಂ ಆಶ್ರಮದಿಂದ (Aarsha Vidya Samajam Ashram) ಮತಾಂತರಕ್ಕೆ ಗುರಿಯಾದ 26 ಸಂತ್ರಸ್ತ ಯುವತಿಯರನ್ನ ಮಾಧ್ಯಮಗಳ ಮುಂದೆ ಕರೆತಂದಿದ್ದರು. ಜೊತೆಗೆ ಚಿತ್ರದಿಂದ ಬಂದ ಲಾಭದಲ್ಲಿ 51 ಲಕ್ಷ ರೂ.ಗಳನ್ನ ಆಶ್ರಮಕ್ಕೆ ಮಹಿಳೆಯರ ಶಿಕ್ಷಣ ಮತ್ತು ಉನ್ನತಿಗಾಗಿ ದೇಣಿಗೆ ನೀಡಿದರು.

ಅದಾ ಶರ್ಮಾ ಮಾತನಾಡುತ್ತಾ, ಅತ್ಯಾಚಾರ ಹಾಗೂ ಲವ್‌ ದೋಖಾಗೆ ಬಲಿಯಾದ ಮಹಿಳೆಯರ ಸಾಕ್ಷ್ಯ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಇದನ್ನೂ ಓದಿ: ಅತೀ ಶೀಘ್ರದಲ್ಲೇ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ದಿ ಕೇರಳ ಸ್ಟೋರಿ

ಸಿನಿಮಾದಲ್ಲಿ ಬರುವ ʻನಿಮಾʼ ಪಾತ್ರವು ತನ್ನ ಮೇಲೆ ಪ್ರತಿದಿನ 15-20 ಜನರಿಂದ ಅತ್ಯಾಚಾರ ಎಸಗಿರುವ ಬಗ್ಗೆ ಕೇಸ್‌ ದಾಖಲಿಸಲು ಪ್ರಯತ್ನಿಸುತ್ತದೆ. ಆದರೆ ಅವಳ ಬಳಿ ಸಾಕ್ಷಿಗಳನ್ನು ಕೇಳಿದಾಗ ಆಕೆ ಹೇಗೆ ಅದನ್ನ ಪ್ರೂವ್‌ ಮಾಡುತ್ತಾಳೆ? ಒಂದು ತಿಂಗಳ ಕಾಲ 15 ಜನ ನಿರಂತರವಾಗಿ ಅತ್ಯಾಚಾರ ಎಸಗಿದರೆ, ಹೇಗೆ ತಾನೆ ಪುರಾವೆ ನೀಡುತ್ತಾರೆ? ಪ್ರೀತಿಯಲ್ಲಿ ದ್ರೋಹ ಬಗೆದರೆ ಕೇಸ್‌ ದಾಖಲಿಸುವುದು ಹೇಗೆ? ಅದನ್ನು ಬರವಣಿಗೆಯಲ್ಲಿ ಬರೆದುಕೊಡಲಾಗುತ್ತದೆಯೇ? ಈ ರೀತಿ ನನ್ನನ್ನ ಅತ್ಯಾಚಾರ ಮಾಡಿದ್ದಾರೆ ಅಂತಾ ಹೇಳಲಾಗುತ್ತದೆಯೇ? ಎಂದು ಮರು ಪ್ರಶ್ನೆ ಮಾಡಿದರು.

27 ದೇಶಗಳಲ್ಲಿ ಬಿಡುಗಡೆಯಾಗಿರುವ ದಿ ಕೇರಳ ಸ್ಟೋರಿ ಮತಾಂತರ ಹಾಗೂ ಐಸಿಎಸ್‌ಗೆ ಸೇರಲು ಬ್ರೈನ್‌ವಾಶ್‌ ಮಾಡುವ ಕಥೆಯನ್ನು ವಿವರಿಸುತ್ತದೆ. ಇದನ್ನೂ ಓದಿ: ಅಂದು ಯಶ್ ಶೋ ಆಫ್ ನಟ ಎಂದಿದ್ದ ರಶ್ಮಿಕಾ- ಈಗ ಹೇಳಿದ್ದೇನು ಗೊತ್ತಾ?

Share This Article