ರಾಮ್ ಚರಣ್ ತಾಯಿಯ ಪಾತ್ರದಲ್ಲಿ ವಿಜಯ ಶಾಂತಿ

Public TV
1 Min Read

ಟಾಲಿವುಡ್ ನಟ ರಾಮ್ ಚರಣ್ ‘ಗೇಮ್ ಚೇಂಜರ್’ (Game Changer) ಸಿನಿಮಾ ಬಳಿಕ ‘ಉಪ್ಪೇನಾ’ ಡೈರೆಕ್ಟರ್ ಜೊತೆ ಕೈಜೋಡಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ಜರುಗಿತ್ತು. ಈಗ ಸಿನಿಮಾ ತಂಡದಿಂದ ಇಂಟ್ರಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ರಾಮ್ ಚರಣ್ (Ram Charan) ಚಿತ್ರಕ್ಕೆ ವಿಜಯ ಶಾಂತಿ (Vijay Shanthi) ಎಂಟ್ರಿ ಕೊಟ್ಟಿದ್ದಾರೆ.

ರಾಮ್ ಚರಣ್ 16ನೇ ಸಿನಿಮಾದಲ್ಲಿ ಹೀರೋ ರಾಮ್ ತಾಯಿ ಪಾತ್ರದಲ್ಲಿ ವಿಜಯ ಶಾಂತಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರತಂಡ ವಿಜಯ ಶಾಂತಿ ಅವರನ್ನು ಭೇಟಿ ಮಾಡಿ ಕಥೆ ಕೂಡ ಹೇಳಿದ್ದಾರೆ. ನಟಿ ಗ್ರೀನ್ ಸಿಗ್ನಲ್ ಕೂಡ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಶಾರುಖ್ ಖಾನ್ ಪುತ್ರಿ ಸುಹಾನಾ ಹುಟ್ಟುಹಬ್ಬಕ್ಕೆ ಬಿಟೌನ್ ಸ್ಟಾರ್ಸ್‌ಗಳ ವಿಶ್

ರಾಮ್ ಚರಣ್ ತಾಯಿಯ ಪಾತ್ರಕ್ಕೆ ಪವರ್ ಫುಲ್ ನಟಿಯೇ ಬೇಕು ಎಂದು ಹಿರಿಯ ಸ್ಟಾರ್ ನಟಿಯನ್ನೇ ಚಿತ್ರತಂಡ ಮಣೆ ಹಾಕಿದೆ. ವಿಜಯ ಶಾಂತಿ ಪಾತ್ರಕ್ಕೂ ಭಾರೀ ಪ್ರಾಮುಖ್ಯತೆ ಇದೆ.

ಅಂದಹಾಗೆ, ರಾಮ್ ಚರಣ್‌ಗೆ ನಾಯಕಿಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಕೂಡ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ‘ಉಪ್ಪೇನಾ’ ಡೈರೆಕ್ಟರ್ ಬುಚ್ಚಿಬಾಬು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

Share This Article