ಓವರ್ ಮೇಕಪ್‌ಗೆ ಟ್ರೋಲ್ ಆದ ಊರ್ವಶಿ ರೌಟೇಲಾ

Public TV
1 Min Read

‘ಐರಾವತ’ ಬೆಡಗಿ ಊರ್ವಶಿ ರೌಟೇಲಾ (Urvashi Rautela) ಅವರು ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಹೊಸ ಫೋಟೋದಲ್ಲಿನ ಊರ್ವಶಿ ಓವರ್ ಮೇಕಪ್ ನೋಡಿ ನೆಟ್ಟಿಗರು ಸಖತ್ ಟ್ರೋಲ್ ಮಾಡ್ತಿದ್ದಾರೆ. ಸದ್ಯ ನಟಿಯ ನಯಾ ಲುಕ್ ಸಖತ್ ವೈರಲ್ ಆಗುತ್ತಿದೆ.

ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಊರ್ವಶಿ ರೌಟೇಲಾ ಸದ್ದು ಮಾಡುತ್ತಲೇ ಇರುತ್ತಾರೆ. ಈಗ ಸುಂದರವಾದ ಮಿನುಗುವ ಡ್ರೆಸ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಗ್ಲ್ಯಾಮರಸ್ ಆಗಿ ಊರ್ವಶಿ ಕಾಣಿಸಿಕೊಂಡಿದ್ದಾರೆ.

ಈ ಹೊಸ ಫೋಟೋ ಶೇರ್ ಮಾಡ್ತಿದ್ದಂತೆ ಐರಾವತ ನಟಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಓವರ್ ಮೇಕಪ್ ಮಾಡಿಕೊಳ್ಳಬೇಡಿ. ಮಲಗುವಾಗಲೂ ಮೇಕಪ್ ತೆಗೆಯಲ್ಲ ಅನಿಸುತ್ತೆ ಎಂದೆಲ್ಲಾ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ. ಒಟ್ನಲ್ಲಿ ಊರ್ವಶಿ ಹೊಸ ಲುಕ್ ಟ್ರೋಲಿಗರ (Troll) ಬಾಯಿಗೆ ಆಹಾರವಾಗಿದೆ.

ಊರ್ವಶಿ ಸುಂದರವಾಗಿ ರೆಡಿಯಾಗಿದ್ದಾರೆ. ಅವರ ಓವರ್ ಮೇಕಪ್‌ಗೆ ಟ್ರೋಲ್ ಆಗ್ತಿದ್ದಾರೆ. ಅವರಿಗೆ ಟ್ರೋಲ್ ಆಗೋದು ಇದೇ ಮೊದಲ ಬಾರಿ ಏನೇನಲ್ಲ.‌ ಇದನ್ನೂ ಓದಿ:ಇಂದ್ರಜಿತ್ ಲಂಕೇಶ್ ಸಿನಿಮಾದಲ್ಲಿ ‘ಸಲಗ’ ಬ್ಯೂಟಿ ಸಂಜನಾ ಆನಂದ್‌

‘ಐರಾವತ’ ನಟಿ ಊರ್ವಶಿ ಕನ್ನಡ, ತೆಲುಗು, ಹಿಂದಿ ಸೇರಿದಂತೆ ಬಹುಭಾಷಾ ನಟಿಯಾಗಿ ಬ್ಯುಸಿಯಾಗಿದ್ದಾರೆ. ಸಾಕಷ್ಟು ಜಾಹೀರಾತುಗಳಿಗೆ ರೂಪದರ್ಶಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ.

Share This Article