ಸುಳ್ಳು ಸುದ್ದಿ ಬರೆದ ಸಿನಿಮಾ ವಿಶ್ಲೇಷಕನಿಗೆ ಚಳಿ ಬಿಡಿಸಿದ ನಟಿ ಊರ್ವಶಿ ರೌಟೇಲಾ

Public TV
2 Min Read

ಹುಭಾಷಾ ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಸಿನಿಮಾ ಬಿಟ್ಟು ಆಗಾಗ ರಿಷಬ್ ಪಂತ್ (Rishab Pant) ವಿಚಾರವಾಗಿ ಸುದ್ದಿಯಾಗುತ್ತಿದ್ದರು. ಇದೀಗ ತಮ್ಮ ಬಗ್ಗೆ ಸುಳ್ಳು ಸುದ್ದಿ ಬರೆದ ಸಿನಿಮಾ ವಿಶ್ಲೇಷಕ ಉಮೈರ್ ಸಂಧುಗೆ (Umair Sandhu) ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಸದಾ ಒಂದಲ್ಲಾ ಒಂದು ಕಿರಿಕ್ ಮಾಡುವ ಮೂಲಕ ಸುದ್ದಿಯಲ್ಲಿರುವ ಉಮೈರ್‌ಗೆ ನಟಿ ಊರ್ವಶಿ ಇದೀಗ ಬೆಂಡೆತ್ತಿದ್ದಾರೆ.

ಕೆಲ ದಿನಗಳ ಹಿಂದೆ ‘ಶಾಕುಂತಲಂ’ ಸಿನಿಮಾ ಕಲೆಕ್ಷನ್ ಉಲ್ಲೇಖಿಸಿ ನಟಿ ಸಮಂತಾ (Samantha) ಫ್ಲಾಪ್ ನಟಿ ಎಂದು ಬರೆಯುವ ಮೂಲಕ ಸ್ಯಾಮ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ಊರ್ವಶಿ ರೌಟೇಲ್ -ಅಖಿಲ್ ಅಕ್ಕಿನೇನಿ ಬಗ್ಗೆ ಸುಳ್ಳು ಸುದ್ದಿ ಟ್ವೀಟ್ ಮಾಡಿದ್ದ ಉಮೈರ್ ಸಂಧುಗೆ ನಟಿ ಕಾನೂನು ಸಮರ ಸಾರಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

ನಟಿ ಊರ್ವಶಿ ಬಗ್ಗೆ ಅಸಭ್ಯವಾಗಿ ಬರೆದಿದ್ದಾರೆ. ಯುರೋಪ್‌ನಲ್ಲಿ ‘ಏಜೆಂಟ್’ (Agent) ಚಿತ್ರದ ಐಟಂ ಸಾಂಗ್ ಚಿತ್ರೀಕರಣದ ವೇಳೆ ನಟಿ ಅಖಿಲ್ ಅಕ್ಕಿನೇನಿ (Akhil Akkineni) ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರಿಗೆ ಕಿರುಕುಳ ನೀಡಿದ್ದಾರೆ ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ. ಇವರಿಬ್ಬರ ಫೋಟೋ ಲಗತ್ತಿಸಿ ತೀರಾ ಕೆಟ್ಟದ್ದಾಗಿ ಬರೆದಿದ್ದಾರೆ. ಇದೀಗ ಈ ಟ್ವೀಟ್ ಓದಿದ ಊರ್ವಶಿ ರೌಟೇಲಾ ಕೆಂಡಾಮಂಡಲವಾಗಿದ್ದಾರೆ. ಅವರು ಈ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅದರ ಮೇಲೆ ನಕಲಿ ಎಂದು ಬರೆದಿದ್ದಾರೆ. ಇದನ್ನೂ ಓದಿ:ಹನಿಮೂನ್‌ಗೆ ವಿದೇಶಕ್ಕೆ ಹಾರಿದ ಸಿಂಹಪ್ರಿಯಾ ಜೋಡಿ

ನನ್ನ ಕಾನೂನು ತಂಡವು ನಿಮಗೆ ಮಾನನಷ್ಟ ನೋಟಿಸ್ ಕಳುಹಿಸುತ್ತಿದೆ. ನಿಮ್ಮಂತಹ ಸಿನಿಮಾ ವಿಶ್ಲೇಷಕರ ಕೊಳಕು ಟ್ವೀಟ್‌ಗಳಿಂದ ಎಲ್ಲರೂ ಕೋಪಗೊಂಡಿದ್ದಾರೆ ಎಂದು ನಟಿ ಹೇಳಿದ್ದಾರೆ. ನೀವು ನನ್ನ ಅಧಿಕೃತ ವಕ್ತಾರರಲ್ಲ. ಅವರಂತೆ ವರ್ತಿಸಬೇಡಿ. ಇದರಿಂದ ಬಹಳಷ್ಟು ಮಂದಿಯ ಮನಸ್ಸಿಗೆ ನೋವುಂಟಾಗುತ್ತದೆ ಎಂದಿರುವ ನಟಿ, ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

Share This Article