ಊರ್ವಶಿ ರೌಟೇಲಾ ಬಾತ್‌ರೂಮ್ ಸೀನ್ ಲೀಕ್ – ಪ್ರಚಾರಕ್ಕಾಗಿ ಗಿಮಿಕ್ ಮಾಡ್ತಿದ್ದಾರೆ ಎಂದ ನೆಟ್ಟಿಗರು

Public TV
1 Min Read

ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ (Urvashi Rautela) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಬಾತ್‌ರೂಮ್‌ನಲ್ಲಿ ಸ್ನಾನಕ್ಕಾಗಿ ಊರ್ವಶಿ ಬಟ್ಟೆ ಬಿಚ್ಚುತ್ತಿರುವ ವಿಡಿಯೋವೊಂದು ಲೀಕ್ ಆಗಿದೆ. ಈ ಕುರಿತು ನಟಿಯ ಪರ ಮತ್ತು ವಿರೋಧದ ಚರ್ಚೆ ಕೂಡ ಶುರುವಾಗಿದೆ. ಇದನ್ನೂ ಓದಿ:ನ್ಯಾಯಾಂಗದ ಬಗ್ಗೆ ಗೌರವವಿದೆ, ಅಪರಾಧ ಸಾಬೀತಾದ್ರೆ ಯಾರೇ ಆಗಿದ್ರೂ ಶಿಕ್ಷೆ ಆಗಲಿ: ಅನು ಪ್ರಭಾಕರ್

ಸ್ನಾನದ ಗೃಹದಲ್ಲಿ ನಟಿ ಬಟ್ಟೆ ಬಿಚ್ಚುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಬಾತ್‌ರೂಮ್‌ನಲ್ಲಿ ಕ್ಯಾಮೆರಾ ಇಟ್ಟಿರುವ ವಿಷಯ ಆಕೆಗೆ ತಿಳಿದಿಲ್ಲ ಎಂದು ನಟಿಯ ಪರ ಕೆಲವರು ಬ್ಯಾಟ್ ಬೀಸಿದ್ದಾರೆ. ಇನ್ನೂ ಕೆಲ ನೆಟ್ಟಿಗರು ಊರ್ವಶಿ ಪ್ರಚಾರಕ್ಕಾಗಿ ಹೊಸ ಗಿಮಿಕ್ ಶುರು ಮಾಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ನಟಿಯ ಕತ್ತಲ್ಲಿ ತಾಳಿ ಇರುವುದನ್ನು ಗಮನಿಸಿ ಇದು ಫೇಕ್ ಎಂದು ಕೂಡ ಹೇಳ್ತಿದ್ದಾರೆ.

 

View this post on Instagram

 

A post shared by Manav Manglani (@manav.manglani)


ಇದೀಗ ಈ ವಿಚಾರದ ಬಗ್ಗೆ ನಟಿಯ ಮ್ಯಾನೇಜರ್ ಪ್ರತಿಕ್ರಿಯಿಸಿ, ಈ ರೀತಿಯ ವಿಡಿಯೋಗಳು ಹೇಗೆ ಲೀಕ್ ಆಗುತ್ತದೆ ಎಂಬುದು ಗೊತ್ತಿಲ್ಲ. ವಿಡಿಯೋನ ಸೋಷಿಯಲ್ ಮೀಡಿಯಾದಲ್ಲಿ ತೆಗೆದು ಹಾಕುವ ಪ್ರಯತ್ನದಲ್ಲಿದ್ದೇವೆ ಎಂದಿದ್ದಾರೆ. ಆದರೆ ವೈರಲ್ ಆಗುತ್ತಿರುವ ವಿಡಿಯೋವನ್ನು ಬ್ರೇಕ್ ಹಾಕೋಕೆ ಸಾಧ್ಯವಾಗುತ್ತಿಲ್ಲ ಎಂದು ಮಾತನಾಡಿದ್ದಾರೆ.

ಅಂದಹಾಗೆ, ಊರ್ವಶಿ ರೌಟೇಲಾ ತೆಲುಗು ಮತ್ತು ಬಾಲಿವುಡ್‌ ಸಿನಿಮಾಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಕನ್ನಡದ ‘ಐರಾವತ’ ಸಿನಿಮಾದಲ್ಲಿ ದರ್ಶನ್‌ಗೆ ನಾಯಕಿಯಾಗಿ ನಟಿಸಿದ್ದಾರೆ.

Share This Article