ಗೆಳೆಯನ ಜೊತೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ತೇಜಸ್ವಿನಿ ಪ್ರಕಾಶ್

Public TV
2 Min Read

ಸ್ಯಾಂಡಲ್ವುಡ್, ಟಾಲಿವುಡ್, ಕಿರುತೆರೆಯಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಜನಮನ್ನಣೆ ಪಡೆದಿರುವ ನಟಿ ತೇಜಸ್ವಿನಿ ಪ್ರಕಾಶ್, ಖಾಸಗಿ ಕಂಪನಿಯ ಉದ್ಯೋಗಿ ಪಣಿ ವರ್ಮಾ ಜೊತೆಗೆ ರವಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.


ಪಣಿ ಮತ್ತು ತೇಜಸ್ವಿನಿ ಹಲವು ವರ್ಷಗಳಿಂದ ಸ್ನೇಹಿತರು, ಈ ಸ್ನೇಹವೇ ಪ್ರೀತಿಗೆ ತಿರುಗಿ ಇದೀ ಹೊಸ ಜೀವನಕ್ಕೆ ನಾಂದಿ ಹಾಡಿದೆ. ಈ ಜೋಡಿಯ ಮದುವೆ ಸಂಭ್ರಮದಲ್ಲಿ ವಧು, ವರರ ಕುಟುಂಬಸ್ಥರು, ಅನೇಕ ಸಿನಿ ಮತ್ತು ಕಿರುತೆರೆ ಕಲಾವಿದರು ಭಾಗಿಯಾಗಿದ್ದರು. ಮದುವೆ ಅದ್ಧೂರಿಯಾಗಿ ನಡೆದದ್ದು ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ: ಹಸೆಮಣೆ ಏರಲಿದ್ದಾರೆ ನಟಿ ತೇಜಸ್ವಿನಿ ಪ್ರಕಾಶ್

ಕೆಂಪು ಮತ್ತು ಗೋಲ್ಡ್ ಬಣ್ಣದ ರೇಶ್ಮೆ ಸೀರೆಯಲ್ಲಿ ತೇಜಸ್ವಿನಿ, ಪಣಿ ವರ್ಮಾ ಕ್ರೀಮ್ ಬಣ್ಣದ ರೇಶ್ಮೆ ಶರ್ಟ್, ಪಂಚೆಯಲ್ಲಿ ನವ ದಂಪತಿ ಕಾಣಿಸಿಕೊಂಡಿದ್ದಾರೆ. ತೇಜಸ್ವಿನಿ ಮದುವೆಯಲ್ಲಿ ಕಿರುತೆರೆ ಸ್ನೇಹಿತರು, ನಟ ಪ್ರೇಮ್ ನೆನಪಿರಲಿ, ಸಿಹಿ ಕಹಿ ಚಂದ್ರು ಮತ್ತು ನಿರ್ದೇಶಕ ತರುಣ್ ಸುಧೀರ್, ನಟಿ ಕಾರಣ್ಯ ರಾಮ್ ಸೇರಿದಂತೆ ಅನೇಕ ಕಲಾವಿದರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ

 

View this post on Instagram

 

A post shared by Karunya (@ikarunya)

ನಟಿ ಕಾರುಣ್ಯ ರಾಮ್ ಅವರು ಸ್ನೇಹಿತೆ ತೇಜಸ್ವಿನಿ ಪ್ರಕಾಶ್ ಮದುವೆಯಲ್ಲಿ ಭಾಗಿಯಾದ್ದರ ವಿವಾಹದ ಫೋಟೋಗಳನ್ನು  ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಎರಡು ಹೃದಯಗಳು ಒಂದಾಗಿ ನಿಮ್ಮ ಭವಿಷ್ಯಕ್ಕಾಗಿ ಅತ್ಯುತ್ತಮವಾಗಿರಲಿ. ನಿಮ್ಮ ವಿವಾಹ ಜೀವನ ಸುಖಮಯವಾಗಿರಲಿ ಎಂದು ಹಾರೈಸಿ ಫೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ತೇಜಸ್ವಿನಿ ಪ್ರಕಾಶ್ ಅವರ ದಾಂಪತ್ಯ ಜೀವನಕ್ಕೆ ಶುಭ ಕೋರುತ್ತಿದ್ದಾರೆ.

ತೇಜಸ್ವಿನಿ ಕನ್ನಡ ಚಿತ್ರರಂಗ, ಕಿರುತೆರೆ, ಮಾಡೆಲಿಂಗ್ನಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದವರು. 2016ರಲ್ಲಿ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿ, ನಂತರದಲ್ಲಿ 2020ರಿಂದ ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನನ್ನರಸಿ ರಾಧೆ’ ಧಾರಾವಾಹಿಯಲ್ಲಿ ಲಾವಣ್ಯ ಪಾತ್ರದ ಮೂಲಕ ಫೇಮಸ್ ಆದರು.

ಮಾತಾಡ್ ಮಾತಾಡ್ ಮಲ್ಲಿಗೆ, ಪ್ರೀತಿ ಏಕೆ ಭೂಮಿ ಮೇಲಿದೆ, ಅರಮನೆ, ರಾಬರ್ಟ್, ಕೃಷ್ಣ ಸೇರಿದಂತೆ ಈವರೆಗೆ 22 ಚಿತ್ರಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5ರಲ್ಲಿ ತೇಜಸ್ವಿನಿ ಸ್ಪರ್ಧಿಯಾಗಿದ್ದರು. ತಮ್ಮದೇ ಆಗಿರುವ ನಟನಾ ಶೈಲಿಯ ಮೂಲಕವಾಗಿ ಅಭಿಮಾನಿಗಳ ಬಳಗವನ್ನು ಸಂಪಾದಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *