ಮುಂಬೈ ಪೊಲೀಸರಿಂದ ನಟಿ ತಮನ್ನಾಗೆ ಸಮನ್ಸ್

Public TV
1 Min Read

ಕ್ರಮವಾಗಿ ಐಪಿಎಲ್ (IPL) ಪಂದ್ಯವನ್ನು ಪ್ರಸಾರ ಮಾಡಿದ್ದಕ್ಕಾಗಿ ದಕ್ಷಿಣದ ಹೆಸರಾಂತ ತಾರೆ ತಮನ್ನಾ ಭಾಟಿಯಾಗೆ (Tamannaah Bhatia) ಮುಂಬೈ ಸೈಬರ್ ಪೊಲೀಸ್ ಸಮನ್ಸ್ (Summons) ಜಾರಿ ಮಾಡಿದ್ದಾರೆ. ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.

2023ರಲ್ಲಿ ಅಕ್ರಮವಾಗಿ ಐಪಿಎಲ್ ಪಂದ್ಯ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಲಾಗಿದ್ದು, ವಯಾಕಾಮ್‌ಗೆ ಕೋಟ್ಯಂತರ ರೂಪಾಯಿಗಳ ನಷ್ಟವನ್ನು ಉಂಟುಮಾಡಿದ ಪ್ರಕರಣ ಇದಾಗಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ನಟ ಸಂಜಯ್ ದತ್ ಅವರಿಗೆ ಸಮನ್ಸ್ ನೀಡಲಾಗಿತ್ತು. ವಿದೇಶ ಪ್ರವಾಸ ಹಿನ್ನಲೆ ವಿಚಾರಣೆಯಿಂದ ವಿನಾಯಿತಿ ಕೇಳಿದ್ದರು ಸಂಜಯ್ ದತ್.

 

ಐಪಿಎಲ್ ಪಂದ್ಯ ಪ್ರಸಾರದ ಹಕ್ಕನ್ನು ಹೊಂದಿರುವ ವಯಾಕಾಮ್, ಈ ನಟ ನಟಿಯರ ವಿರುದ್ಧ ದೂರು ನೀಡಿತ್ತು. ದೂರಿಗೆ ಸಂಬಂಧಿಸಿದಂತೆ ಈ ಹಿಂದೆ ಸಂಜಯ್ ದತ್ ಅವರಿಗೆ, ಈಗ ತಮನ್ನಾಗೆ ನೋಟಿಸ್ ಜಾರಿ ಮಾಡಿದೆ.

Share This Article