ತಮನ್ನಾ ಭಾಟಿಯಾಗೆ ಎರಡೆರಡು ಬ್ರೇಕಪ್- ಮೌನ ಮುರಿದ ನಟಿ

Public TV
1 Min Read

ಸೌತ್ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ವಿಜಯ್ ವರ್ಮಾ (Vijay Varma) ಜೊತೆ ಎಂಗೇಜ್ ಆಗಿದ್ದಾರೆ. ಮದುವೆ ಬಗ್ಗೆ ಅದ್ಯಾವಾಗ ನಟಿ ಗುಡ್ ನ್ಯೂಸ್ ಕೊಡ್ತಾರೆ ಎಂದು ಫ್ಯಾನ್ಸ್ ಕಾಯ್ತಿದ್ದಾರೆ. ಇದರ ನಡುವೆ ನಟಿ ಈ ಹಿಂದಿನ ಎರಡೆರಡು ಬ್ರೇಕಪ್‌ಗಳ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಹಿಂದಿನ ಬ್ರೇಕಪ್ ಆಗಿದ್ದು ಯಾವ ಕಾರಣಕ್ಕೆ ಎಂಬುದನ್ನು ಮುಕ್ತವಾಗಿ ನಟಿ ಮಾತನಾಡಿದ್ದಾರೆ. ಮೊದಲ ಬ್ರೇಕಪ್ ವೇಳೆ, ನಾನು ತುಂಬಾ ಚಿಕ್ಕವಳಿದ್ದೆ. ಜೀವನದಲ್ಲಿ ಆ ವ್ಯಕ್ತಿಯಾಗಿ ಎಲ್ಲಾ ಅಗತ್ಯತೆ ಮತ್ತು ಆಸೆಗಳನ್ನು ತ್ಯಜಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಕೆಲ ಕಾರಣಗಳಿಂದ ಆ ಸಂಬಂಧ ಮುರಿದು ಬಿತ್ತು ಎಂದಿದ್ದಾರೆ. ಇದನ್ನೂ ಓದಿ:‘ಬಿಲ್ಲ ರಂಗ ಭಾಷಾ’ ಸಿನಿಮಾದಲ್ಲಿ ಸುದೀಪ್ ತ್ರಿಬಲ್ ರೋಲ್?

ಎರಡನೇಯದು ಆತ ನನ್ನ ಜೊತೆ ಜೀವನ ಪೂರ್ತಿ ಜೊತೆಯಿರಲು ಸೂಕ್ತ ವ್ಯಕ್ತಿ ಅಲ್ಲ ಅನಿಸಿತು. ಸುಳ್ಳು ಹೇಳುವವರ ಜೊತೆ ಜೀವನ ಮಾಡಲು ಸಾಧ್ಯವಿಲ್ಲ. ಸಣ್ಣ ಸಣ್ಣ ವಿಚಾರಕ್ಕೂ ಸುಳ್ಳು ಹೇಳುವವರ ಜೊತೆ ಜೀವನ ಸಾಗಿಸುವುದು ಕಷ್ಟ ಎಂದು 2ನೇ ಬ್ರೇಕಪ್ ಆಗಿರುವ ಬಗ್ಗೆ ಅಸಲಿ ಕಾರಣ ಬಿಚ್ಚಿಟ್ಟರು ತಮನ್ನಾ. ಈ ಹಿಂದಿನ ಬ್ರೇಕಪ್‌ಗಳಿಂದ ನನ್ನ ಜೀವನದಲ್ಲಿ ದೊಡ್ಡ ಪಾಠ ಕಲಿತಿದ್ದೇನೆ ಎಂದು ನಟಿ ಮಾತನಾಡಿದ್ದಾರೆ.

ಅಂದಹಾಗೆ, ‘ಸ್ತ್ರೀ 2’ (Stree 2) ಸಿನಿಮಾದಲ್ಲಿ ತಮನ್ನಾ ಐಟಂ ಡ್ಯಾನ್ಸ್‌ಗೆ ಹೆಜ್ಜೆ ಹಾಕಿದ್ದರು. ಈ ಚಿತ್ರ ಸಕ್ಸಸ್ ಕಂಡಿದೆ. ಇದಾದ ನಂತರ ಬಾಲಿವುಡ್ ಮತ್ತು ಸೌತ್ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ಬ್ಯುಸಿಯಾಗಿದ್ದಾರೆ.

Share This Article