ಹಾಟ್ ಆಗಿ ಕಾಣಿಸಿಕೊಂಡ ‘ಕಾವಾಲಾ’ ಬ್ಯೂಟಿ ತಮನ್ನಾ

Public TV
1 Min Read

ನ್ನಡದ ‘ಕೆಜಿಎಫ್’ (KGF) ನಟಿ ತಮನ್ನಾ(Tamanaah) ಅವರು ಇತ್ತೀಚಿಗೆ ತಮ್ಮ ಸಿನಿಮಾಗಳ ಮೂಲಕ ಸಿಕ್ಕಾಪಟ್ಟೆ ಚಾಲ್ತಿಯಲ್ಲಿದ್ದಾರೆ. ಲಸ್ಟ್ ಸ್ಟೋರಿಸ್ 2, ಜೀ ಕರ್ದಾ, ಕಾವಾಲಾ ಹಾಡಿನ ಸಕ್ಸಸ್ ನಂತರ ತಮನ್ನಾ ಬೇಡಿಕೆ ಜಾಸ್ತಿಯಾಗಿದೆ. ಈ ಬೆನ್ನಲ್ಲೇ ತಮನ್ನಾ ಹಾಟ್ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ.

ಲಸ್ಟ್ ಸ್ಟೋರಿಸ್ 2, ಜೀ ಕರ್ದಾ ಪ್ರಾಜೆಕ್ಟ್‌ನಲ್ಲಿ ನಟಿ ತಮನ್ನಾ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸಂಚಲನ ಮೂಡಿಸಿದ್ದರು. ತಮನ್ನಾ ಹಸಿ ಬಿಸಿ ದೃಶ್ಯಕ್ಕೆ ಕೆಲವರು ವಿರೋಧಿಸಿದ್ರೆ, ಇನ್ನೂ ಕೆಲವರು ಮೆಚ್ಚುಗೆ ಸೂಚಿಸಿದ್ದರು. ಇತ್ತೀಚಿಗೆ ರಜನಿಕಾಂತ್ (Rajanikanth) ನಟನೆಯ ‘ಜೈಲರ್’ ಸಿನಿಮಾದಲ್ಲಿ ತಮನ್ನಾ ಸಾಥ್ ನೀಡಿದ್ದರು. ಚಿತ್ರದ ಕಾವಾಲಾ ಹಾಡಿಗೆ ಅದ್ಭುತವಾಗಿ ಹೆಜ್ಜೆಗೆ ಹಾಕಿದ್ದರು. ಅವರ ಎಕ್ಸ್ಪ್ರೇಷನ್‌ಗೆ ಪಡ್ಡೆಹುಡುಗರು ಕಳೆದು ಹೋಗಿದ್ದರು.‌ ಇದನ್ನೂ ಓದಿ:ಪದೇ ಪದೇ ಪ್ರಭಾಸ್ ವಿರುದ್ದ ಕಿಡಿಕಾರುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ

ಅಷ್ಟರ ಮಟ್ಟಿಗೆ ತಮನ್ನಾ ‘ಕಾವಾಲಾ’ (Kaavala) ಸಾಂಗ್ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಚಿಕ್ಕವರಿಂದ ದೊಡ್ಡವರ ತನಕ ಈ ಸಾಂಗ್‌ಗೆ ರೀಲ್ಸ್ ಮಾಡ್ತಿದ್ದಾರೆ. ಸದ್ಯ ಜೈಲರ್ (Jailer) ಸಿನಿಮಾದ ಕಾವಾಲಾ ರಿಲೀಸ್ ಈವೆಂಟ್‌ಗೆ ತಮನ್ನಾ ಭಾಗಿಯಾಗಿದ್ದಾರೆ. ಅದಕ್ಕಾಗಿ ಸಖತ್ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಬಿಳಿ ಬಣ್ಣದ ಉಡುಗೆಯಲ್ಲಿ ಸಖತ್ ಗ್ಲ್ಯಾಮರಸ್  ಆಗಿ ತಮನ್ನಾ ಪೋಸ್ ನೀಡಿದ್ದಾರೆ. ಕಾವಾಲಾ ಬ್ಯೂಟಿಯ ನಯಾ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ತಲೈವಾ ಫ್ಯಾನ್ಸ್ ‘ಜೈಲರ್’ ಸಿನಿಮಾ ನೋಡಬೇಕು ಅಂತಾ ಕಾಯ್ತಿದ್ದಾರೆ. ಕಾವಾಲಾ ಹಾಡಿನಲ್ಲಿ ತಮನ್ನಾ ಡ್ಯಾನ್ಸ್ ನೋಡಿದ ಸಿನಿಮಾ ಮೇಲಿನ ನಿರೀಕ್ಷೆ ಈಗ ಡಬಲ್ ಆಗಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್