12 ವರ್ಷಗಳ ನಂತರ ಹಾಲಿವುಡ್‌ನತ್ತ ಟಬು

Public TV
1 Min Read

ಬಾಲಿವುಡ್ ಬ್ಯೂಟಿ ಟಬುಗೆ (Tabu) 52 ವರ್ಷವಾದ್ರೂ ಫಿಟ್ & ಬ್ಯೂಟಿಫುಲ್ ಆಗಿದ್ದಾರೆ. ಇಂದಿಗೂ ಟಬು ಚಾರ್ಮ್ ಮಾಸಿಲ್ಲ. ಬಾಲಿವುಡ್‌ನ ಹಲವು ಬ್ಯುಸಿಯಿರುವಾಗಲೇ ಹಾಲಿವುಡ್‌ನಿಂದ ಮತ್ತೆ ಕರೆ ಬಂದಿದೆ. 12 ವರ್ಷಗಳ ನಂತರ ಮತ್ತೆ ಹಾಲಿವುಡ್‌ನತ್ತ ನಟಿ ಮುಖ ಮಾಡಿದ್ದಾರೆ.

‘ಡ್ಯೂನ್’ ಹೆಸರಿನ ದೀರ್ಘ ಕಾದಂಬರಿಯನ್ನು ಆಧರಿಸಿದ ವೆಬ್ ಸರಣಿ ಇದಾಗಿರಲಿದೆ. ವೆಬ್ ಸಡಣಿಯಲ್ಲಿ ಸಿಸ್ಟರ್ ಫ್ರಾಂಕೆಸ್ಕಾ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರ ಬಹಳ ಗಟ್ಟಿ ಪಾತ್ರವಾಗಿದ್ದು, ಕಥೆಯ ಅತ್ಯಂತ ಪ್ರಮುಖ ಪಾತ್ರಗಳಲ್ಲಿ ಒಂದು ಎನ್ನಲಾಗುತ್ತಿದೆ.

‘ಡ್ಯೂನ್’ (Dune) ವೆಬ್ ಸರಣಿಯಲ್ಲಿ ತಮ್ಮ ಪಾತ್ರ ಮತ್ತು ಕಥೆ ಇಷ್ಟವಾಗಿ ನಟಿ ಓಕೆ ಎಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯದಲ್ಲೇ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಭರ್ಜರಿ ಆ್ಯಕ್ಷನ್ ಅವತಾರದಲ್ಲಿ ರಾಮ್ ಪೋತಿನೇನಿ ಎಂಟ್ರಿ- ‌’ಡಬಲ್ ಇಸ್ಮಾರ್ಟ್’ ಟೀಸರ್ ಔಟ್

‘ದಿ ನೇಮ್ಸೇಕ್’, ‘ಲೈಫ್ ಆಫ್ ಪೈ’ ಎಂಬ ಹಾಲಿವುಡ್ ಸಿನಿಮಾಗಳಲ್ಲಿ ಟಬು ಹಲವು ವರ್ಷಗಳ ಹಿಂದೆ ನಟಿಸಿದ್ದರು. ಈಗ ಮತ್ತೆ ಹಾಲಿವುಡ್‌ಗೆ ನಟಿ ಹೊರಟಿದ್ದಾರೆ.

ಈ ವರ್ಷ ‘ಕ್ರೀವ್’ (Crew) ಎಂಬ ಸಿನಿಮಾದಲ್ಲಿ ಕೃತಿ ಸನೋನ್, ಕರೀನಾ ಕಪೂರ್ ಜೊತೆ ಟಬು ನಟಿಸಿದ್ದರು. ಈ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದರು.

Share This Article