ಡಿವೋರ್ಸ್ ಕುರಿತ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಬುರ್ಖಾ ಧರಿಸಿದ್ರಾ ಕಾರ್ತಿಕೇಯ ನಾಯಕಿ?

Public TV
2 Min Read

ಣ್ಣದ ಲೋಕದಲ್ಲಿ ಲವ್, ಬ್ರೇಕಪ್, ಸೆಕ್ಸ್, ಡಿವೋರ್ಸ್ ಎಲ್ಲಾ ಕಾಮನ್ ಆಗಿದೆ. ಟಾಲಿವುಡ್‌ನ ಸ್ಟಾರ್ ನಟಿ ಸಮಂತಾ, ನಿಹಾರಿಕಾ ಡಿವೋರ್ಸ್ ಪಡೆದುಕೊಳ್ಳುವ ಮೂಲಕ ಶಾಕ್ ಕೊಟ್ಟಿದ್ದರು. ಈಗ ತೆಲುಗಿನ ನಟಿ ಸ್ವಾತಿ ರೆಡ್ಡಿ(Swathi Reddy), ದಾಂಪತ್ಯದಲ್ಲಿ ಬಿರುಕಾಗಿದೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಈ ಬೆನ್ನಲ್ಲೇ ಅವರು ಬುರ್ಖಾ ಧರಿಸಿ ಬಂದಿದ್ದಾರೆ. ನಟಿಯ ಈ ನಡೆ ಅಭಿಮಾನಿಗಳಿಗೆ ಶಾಕ್ ನೀಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಧನುಷ್-ಶಿವಣ್ಣ ಕಾಳಗ?

‘ಡೇಂಜರ್’ (Danger) ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಸ್ವಾತಿ ರೆಡ್ಡಿ ಅವರು ಸಾಲು ಸಾಲಾಗಿ ತೆಲುಗು, ತಮಿಳು, ಮಲಯಾಳಂ ಸಿನಿಮಾದಲ್ಲಿ ನಟಿಸಿದ್ರು. ಕಾರ್ತಿಕೇಯ(Karthikeya), ತ್ರಿಪುರ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನ ನಟಿ ನೀಡಿದ್ದಾರೆ. ಡಿಮ್ಯಾಂಡ್ ಇರುವಾಗಲೇ ಉದ್ಯಮಿ ವಿಕಾಸ್ ವಾಸು (Vikas Vasu) ಜೊತೆ ಸ್ವಾತಿ ರೆಡ್ಡಿ ಮದುವೆಯಾದರು. ಪ್ರೀತಿಸಿದ ಹುಡುಗ ವಿಕಾಸ್ ಜೊತೆ 2018ರಲ್ಲಿ ದಾಂಪತ್ಯ(Wedding) ಜೀವನಕ್ಕೆ ಕಾಲಿಟ್ಟರು. ಈಗ ಇಬ್ಬರ ನಡುವೆ ಸಂಬಂಧ ಸರಿಯಿಲ್ಲ ಎಂದು ಹೇಳಲಾಗುತ್ತಿದೆ.

ಸಮಂತಾ, ನಿಹಾರಿಕಾ ಡಿವೋರ್ಸ್ (Divorce)  ಪ್ಯಾಟರ್ನ್ ಅಂತೆಯೇ ಸ್ವಾತಿ ರೆಡ್ಡಿ ಹಾಗೇ ಮಾಡ್ತಿದ್ದಾರೆ. ಸ್ಯಾಮ್ ಮತ್ತು ನಿಹಾರಿಕಾ ದಾರಿಯನ್ನೇ ಸ್ವಾತಿ ರೆಡ್ಡಿ ಕೂಡ ಹಿಡಿದ್ರಾ ಎಂಬ ಅನುಮಾನ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪತಿ ವಿಕಾಸ್ ವಾಸು ಜೊತೆಗಿನ ಫೋಟೋವನ್ನ ನಟಿ ಡಿಲೀಟ್ ಮಾಡಿದ್ದಾರೆ. ಸಮಂತಾ- ನಿಹಾರಿಕಾ ಕೂಡ ಹೀಗೆ ಮಾಡಿದ್ದರು. ಕೆಲ ತಿಂಗಳುಗಳ ನಂತರ ಡಿವೋರ್ಸ್ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದರು. ಇಷ್ಟೆಲ್ಲಾ ವದಂತಿಯ ಮಧ್ಯೆ ಸ್ವಾತಿ ರೆಡ್ಡಿ ಬುರ್ಖಾ (Burka) ಧರಿಸಿ ಓಡಾಡುತ್ತಿರೋದು ಹಲವು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ.

ಸ್ವತಃ ಸ್ವಾತಿ ಅವರೇ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಬುರ್ಖಾ ಧರಿಸಿ ರೈಲ್ವೆ ನಿಲ್ದಾಣದಲ್ಲಿ ಓಡಾಡಿದ್ದಾರೆ. ರೈಲು ಏರಿದ ಬಳಿಕ ಅವರು ಬುರ್ಖಾ ತೆಗೆದಿದ್ದಾರೆ. ಈ ಪೋಸ್ಟ್ ಅನೇಕರಿಗೆ ಅಚ್ಚರಿ ಮೂಡಿಸಿದೆ. ಈ ವಿಡಿಯೋನ ಅವರು ಹಂಚಿಕೊಂಡಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ. ಅವರ ದಾಂಪತ್ಯ ಬದುಕಿನ ವಿಚಾರ ಸಖತ್ ಸುದ್ದಿಯಾಗುತ್ತಿರುವ ಕಾರಣ, ಡಿವೋರ್ಸ್ ಕುರಿತ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ನಟಿ ಹೀಗೆ ಮಾಡ್ತಿದ್ದಾರಾ? ಅಸಲಿಗೆ ಏನಾಗಿದೆ ಎಂಬ ಅನುಮಾನ ಅಭಿಮಾನಿಗಳಿಗೆ ಮೂಡಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್