ವಿವಾದಕ್ಕೆ ಕಾರಣವಾಯಿತು ನಟಿ ಸ್ವರಾ ಭಾಸ್ಕರ್ ಮಗುವಿಗಿಟ್ಟ ಹೆಸರು

Public TV
1 Min Read

ನಿನ್ನೆಯಷ್ಟೇ ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhaskar) ಅವರು ಹೆಣ್ಣು ಮಗುವಿಗೆ (Baby Girl)) ಜನ್ಮ ನೀಡಿದ್ದರ ಕುರಿತು ಸುದ್ದಿ ನೀಡಿದ್ದರು. ಈ ಖುಷಿಯನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸ್ವರ ಅಭಿಮಾನಿಗಳು ಮತ್ತು ಅನೇಕರು ಮಗುವಿಗೆ ಮತ್ತು ತಾಯಿಗೆ ಶುಭ ಹಾರೈಸಿದ್ದರೆ, ಕೆಲವರು ನೆಗೆಟಿವ್  ಕಾಮೆಂಟ್  ಕೂಡ ಮಾಡಿದ್ದಾರೆ.

ಸ್ವರಾಗೆ ಮಗು ಜನಿಸಿ 3 ದಿನಗಳು ಆಗಿವೆ. ಮೂರು ದಿನಗಳ ಬಳಿಕ ನಿನ್ನೆ ಸುದ್ದಿ ಹಂಚಿಕೊಂಡಿದ್ದರು. ಮುದ್ದು ಮಗಳಿಗೆ ‘ರಾಬಿಯಾ’ (Raabiyaa) ಎಂದು ನಾಮಕರಣ ಕೂಡ  ಮಾಡಿದ್ದಾರೆ. ಸದ್ಯ ಈ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಮಗಳಿಗೆ ಇಟ್ಟ ಹೆಸರೇ ವಿವಾದಕ್ಕೆ ಕಾರಣವಾಗಿದೆ. ತಾನು ಓರ್ವ ಹಿಂದೂವಾಗಿ ಮುಸ್ಲಿಂ ಹೆಸರನ್ನು ಯಾಕೆ ಇಟ್ಟಿದ್ದೀರಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಅಂದ ಹಾಗೆ ಸ್ವರಾ ಅವರು ಫಹಾದ್ ಅನ್ನುವವರ ಜೊತೆ ಫೆ.16ರಂದು ಮ್ಯಾರೇಜ್ ಆಗಿದ್ದಾರೆ. ಇಬ್ಬರದ್ದೂ ಅಂತರ್ ಧರ್ಮಿ ಮದುವೆ ಆಗಿದೆ. ಹಲವು ವರ್ಷಗಳ ಡೇಟಿಂಗ್ ನಂತರ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಗುರುಹಿರಿಯರ ಸಮ್ಮುಖದಲ್ಲಿ ಮತ್ತೆ ಹಿಂದೂ ಪದ್ಧತಿಯಂತೆ ಈ ಜೋಡಿ ಹಸೆಮಣೆ ಏರಿದ್ದರು.

 

ಮದುವೆ ಮಾತ್ರ ಹಿಂದೂ ಸಂಪ್ರದಾಯದಲ್ಲಿ ಮಗಳ ಹೆಸರನ್ನು ಕೂಡ ಅದೇ ಸಂಪ್ರದಾಯದಲ್ಲೇ ಇಡಬೇಕು ಎಂದು ಅನೇಕರು ಸಲಹೆ ನೀಡಿದ್ದಾರೆ. ಸ್ವರಾ ಮಾತ್ರ ಈ ಯಾವ ಕಾಮೆಂಟ್‍ ಗೂ ಪ್ರತಿಕ್ರಿಯೆ ನೀಡಿಲ್ಲ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್