‘ಐ ಲವ್ ಯು ಬೆಂಗಳೂರು’ ಅಂತ ಕನ್ನಡದಲ್ಲೇ ಮಾತನಾಡಿದ ಸನ್ನಿ ಲಿಯೋನ್

Public TV
1 Min Read

ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ (Sunny Leone) ಅವರು ಡಿ.7ರಂದು ಬೆಂಗಳೂರಿಗೆ ಆಗಮಿಸಿದ್ದು, ಈ ವೇಳೆ ಕನ್ನಡದಲ್ಲಿ ಮಾತನಾಡಿದ್ದಾರೆ. ಈ ವೇಳೆ, ಐ ಲವ್ ಯು ಬೆಂಗಳೂರು ಎಂದು ನಟಿ ಜೋರಾಗಿ ಕೂಗಿದ್ದಾರೆ. ಇದನ್ನೂ ಓದಿ:ಬಾಕ್ಸಾಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದ ‘ಪುಷ್ಪ 2’- 500 ಕೋಟಿ ಬಾಚಿದ ಅಲ್ಲು ಅರ್ಜುನ್ ಸಿನಿಮಾ

ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಸನ್ನಿ ಲಿಯೋನ್ ಆಗಮಿಸಿದರು. ಆಗ ಕನ್ನಡ ಕಲಿಯುತ್ತೇನೆ ಎಂದು ಮಾತು ಆರಂಭಿಸಿದ ಸನ್ನಿ ಲಿಯೋನ್, ಐ ಲವ್ ಯು ಬೆಂಗಳೂರು ಎಂದು ಜೋರಾಗಿ ಕೂಗಿದ್ದಾರೆ. ಅಷ್ಟೇ ಅಲ್ಲದೆ, ನನಗೆ ಸ್ವಲ್ಪ ಕನ್ನಡ ಬರುತ್ತದೆ. ಇನ್ನೂ ಕಲಿಯುತ್ತೇನೆ ಎಂದು ಹೇಳಿ ಗಮನ ಸೆಳೆದಿದ್ದಾರೆ.

ಅಂದಹಾಗೆ, ಲವ್ ಯೂ ಆಲಿಯಾ, ಡಿಕೆ, ಚಾಂಪಿಯನ್ ಸಿನಿಮಾಗಳಲ್ಲಿ ಸ್ಪೆಷಲ್ ಹಾಡಿಗೆ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದಾರೆ. ಹಾಗಾಗಿ ಕರ್ನಾಟಕ ಮತ್ತು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಅವರು ಮತ್ತಷ್ಟು ಹತ್ತಿರವಾಗಿದೆ.

ಇನ್ನೂ ಈ ಹಿಂದೆ ಮಂಡ್ಯದ ಗ್ರಾಮವೊಂದರಲ್ಲಿ ಸನ್ನಿ ಅಭಿಮಾನಿಗಳ ಬಳಗ, ನಟಿಯ ಹೆಸರಲ್ಲಿ ರಕ್ತದಾನ ಶಿಬಿರ ಮಾಡಿದರು. ಕರ್ನಾಟಕದ ಹಲವೆಡೆ ನಟಿಯನ್ನು ದೇವತೆ ಎಂದು ಅಭಿಮಾನದಿಂದ ಆರಾಧಿಸುತ್ತಾರೆ.

Share This Article