ಮದುವೆಗೂ ಮುನ್ನ ಮೊದಲ ಪ್ರೀತಿಯ ಬಗ್ಗೆ ಸನ್ನಿ ಶಾಕಿಂಗ್ ಕಾಮೆಂಟ್

Public TV
1 Min Read

ಬಾಲಿವುಡ್ (Bollywood) ಬ್ಯೂಟಿ ಸನ್ನಿ ಲಿಯೋನ್ (Sunny Leone) ಬಹುಭಾಷಾ ನಟಿಯಾಗಿ ಗುರುತಿಸಿಕೊಳ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಬೆಡಗಿ ಸನ್ನಿ ಇದೀಗ ಸಂರ್ದಶನವೊಂದರಲ್ಲಿ ತಮ್ಮ ಮೊದಲ ಪ್ರೀತಿಯ ಬಗ್ಗೆ ಬಾಯ್ಬಿಟ್ಟಿದ್ದಾರೆ. ಮದುವೆ ಹೊಸ್ತಿಲಲ್ಲಿರುವಾಗ ಬ್ರೇಕಪ್ ಆಗಿದ್ದರ ಬಗ್ಗೆ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಸೋನು ಶ್ರೀನಿವಾಸ್‌ ಗೌಡ ಜೈಲಿನಿಂದ ರಿಲೀಸ್‌

ಡೇನಿಯಲ್ ಜೊತೆಗಿನ ಮದುವೆಗೂ ಮುನ್ನ ಓರ್ವ ವ್ಯಕ್ತಿಯನ್ನು ತುಂಬಾ ಪ್ರೀತಿಸುತ್ತಿದ್ದೆ. ನಾವು ಮದುವೆಯಾಗಲು ನಿರ್ಧಾರ ಮಾಡಿದ್ದೆವು. ನಮ್ಮ ನಿಶ್ಚಿತಾರ್ಥ ಕೂಡ ಆಗಿತ್ತು. ಆದರೆ ಅವನು ನನಗೆ ಮೋಸ ಮಾಡುತ್ತಿದ್ದಾನೆ ಎಂದು ನನಗೆ ತಿಳಿಯಿತು. ನಾನು ತಕ್ಷಣ ಅವನನ್ನು ನೇರವಾಗಿ ಕೇಳಿದೆ. ನೀನು ನನ್ನನ್ನು ಪ್ರೀತಿಸುತ್ತೀಯಾ ಎಂದು ಕೇಳಿದಾಗ ಇಲ್ಲ ಎಂದು ಅವನು ಉತ್ತರಿಸಿದ್ದ. ನಿನ್ನ ಮೇಲಿನ ಪ್ರೀತಿ ಮಾಯವಾಯಿತು ಎಂದು ಮಾತನಾಡಿದ್ದ ಎಂದು ಸನ್ನಿ ಮೊದಲ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ.

ಅಂದು ಆತನ ಮಾತು ಕೇಳಿ ನನಗೆ ಶಾಕ್ ಆಗಿತ್ತು. ಅದಾಗಲೇ ನಮ್ಮಿಬ್ಬರ ಮದುವೆಗೆ ಎಲ್ಲಾ ಸಿದ್ಧತೆ ನಡೆದಿತ್ತು. ಆದರೆ ನಾನಂದ್ರೆ ಇಷ್ಟ ಇಲ್ಲ ಎಂದು ಹೇಳಿ ಅವನು ಹೋಗಿಬಿಟ್ಟ. ಅದು ನನ್ನ ಜೀವನದ ಕೆಟ್ಟ ಕ್ಷಣ. ಆ ನಂತರ ದೇವರು ನನ್ನ ಜೀವನಕ್ಕೆ ಡೇನಿಯಲ್‌ನ ಕಳುಹಿಸಿದ್ದಾರೆ. ಈಗ ಜೀವನ ಚೆನ್ನಾಗಿದೆ ಎಂದು ಸನ್ನಿ ಲಿಯೋನ್ ಮಾತನಾಡಿದ್ದಾರೆ.

ಸನ್ನಿ ಲಿಯೋನ್ ದಂಪತಿ ಇದೀಗ ಮೂವರು ಮಕ್ಕಳಿದ್ದಾರೆ. ಮೊದಲ ಮಗುವನ್ನು ನಟಿ ದತ್ತು ಪಡೆದಿದ್ದಾರೆ. ಇನ್ನಿಬ್ಬರು ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದಾರೆ. ಸದ್ಯ ನಟಿ ಸಿನಿಮಾ ಮತ್ತು ಕೆರಿಯರ್ ಎರಡನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ.

Share This Article