ನಟಿ ಆತ್ಮಹತ್ಯೆ: ‘ಪುಷ್ಪ’ ಸಿನಿಮಾದ ನಟನ ಬಂಧನ

By
1 Min Read

ಪುಷ್ಪ (Pushpa) ಸಿನಿಮಾದಲ್ಲಿ ನಾಯಕ ಪುಷ್ಪರಾಜನ ಸ್ನೇಹಿತನಾಗಿ ನಟಿಸಿದ್ದ ಜಗದೀಶ್ ಪ್ರತಾಪ್ ಭಂಡಾರಿಯನ್ನು (Jagadish) ಪೊಲೀಸರು ಬಂಧಿಸಿದ್ದಾರೆ. ನಟಿಯೊಬ್ಬರ ಆತ್ಮಹತ್ಯೆಯ (Suicide)  ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.

ಜ್ಯೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಜಗದೀಶ್, ಅವರೊಂದಿಗೆ ಸಲುಗೆಯಿಂದ ಇದ್ದರಂತೆ. ಇದೇ ಸಲುಗೆಯನ್ನು ಬಳಸಿಕೊಂಡು ಆಕೆಯ ಖಾಸಗಿ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ತನ್ನೊಂದಿಗೆ ಸಹಕರಿಸದೇ ಇದ್ದರೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕುವುದಾಗಿ ಬೆದರಿಸಿದ್ದಾರೆ.

 

ಜಗದೀಶ್ ಬೆದರಿಕೆಗೆ ಮನನೊಂದು ನಟಿ (Actress) ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಜಗದೀಶ್ ಅವರನ್ನು ಬಂಧಿಸಿರುವ ಪೊಲೀಸರು, ಈ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ. ಜಗದೀಶ್ ಅರೆಸ್ಟ್ ಆಗುವಾಗ ಪುಷ್ಪ 2 ಸಿನಿಮಾದ ಚಿತ್ರೀಕರಣದಲ್ಲಿ ಇದ್ದರು ಎಂದು ತಿಳಿದು ಬಂದಿದೆ.

Share This Article