ಪೊಲೀಸ್ ಠಾಣೆ ಮೆಟ್ಟಿಲೇರಿತು #MeToo ಬ್ಯಾಟಲ್ – ಸರ್ಜಾ ಆಪ್ತನ ವಿರುದ್ಧ ಶೃತಿ ದೂರು

Public TV
1 Min Read

ಬೆಂಗಳೂರು: #MeToo ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಆಪ್ತನ ವಿರುದ್ಧ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?
ಫಿಲಂ ಚೇಂಬರ್ ನಲ್ಲಿ ಸಭೆ ನಡೆಯುತ್ತಿದ್ದ ವೇಳೆ ಫಿಲಂ ಚೇಂಬರ್ ಕಟ್ಟಡದ ಒಳಗೆ ಮತ್ತು ಹೊರಗೆ ನಮ್ಮ ಪ್ರಕರಣ ಸಂಬಂಧ ಪಡದ ಅನಪೇಕ್ಷಿತ ವ್ಯಕ್ತಿಗಳು ಜಮಾವಣೆಗೊಂಡಿದ್ದರು. ಈ ಸಂದರ್ಭ ದುರ್ಬಳಕೆ ಮಾಡಿಕೊಂಡ ಪ್ರಶಾಂತ್ ಸಂಬರ್ಗಿ ಎಂಬ ವ್ಯಕ್ತಿ ಗೂಂಡಾಗಳ ಜೊತೆ ಜಮಾವಣೆಗೊಂಡಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಶಾಂತ್ ಸಂಬರ್ಗಿ, ಅವಳು ಶೃತಿ ಹರಿಹರನ್ ಹಿಂದೂ ಜನರ ಭಾವನೆಗಳಿಗೆ ಧಕ್ಕೆ ತರುವಂತೆ ವರ್ತಿಸಿದ್ದಾಳೆ ಎಂದು ಹೇಳಿದ್ದಾನೆ. ಇದು ನನ್ನನ್ನು ಧರ್ಮವೊಂದಕ್ಕೆ ಎತ್ತಿಕಟ್ಟುವ ಅಪರಾಧವಾಗಿರುತ್ತದೆ. ಮುಂದುವರಿದು ವಿದೇಶಿ ಹಣದಲ್ಲಿ ಮಾಧ್ಯಮಗಳಿಗೆ ಹಣ ನೀಡಿ ಮಹಿಳಾ ದೌರ್ಜನ್ಯ ವಿರೋಧಿ ಸುದ್ದಿಗಳನ್ನು ಮಾಡಿದ್ದಾಳೆ ಎಂದು ಹೇಳಿದ್ದಾನೆ.

ಇದು ಆಧಾರ ರಹಿತ ಆರೋಪವಾಗಿದ್ದು ನನ್ನ ಮತ್ತು ಮಾಧ್ಯಮಗಳ ತೇಜೋವಧೆ ಮಾಡುವ ಕೃತ್ಯವಾಗಿರುತ್ತದೆ. ಮುಂದುವರಿದು ಮಾತನಾಡಿದ ಪ್ರಶಾಂತ್ ಸಂಬರ್ಗಿ ಶೃತಿ ಹರಿಹರನ್ ಬಳಸೋ 3 ಫೇಸ್‍ಬುಕ್‍ಗಳ ಐಪಿ ಅಡ್ರೆಸ್ ಬಗ್ಗೆ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ ಎಂದು ಹೇಳಿದ್ದಾನೆ.

ಇದು ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ. ನಾನು ಯಾವುದೇ ಕಾರಣಕ್ಕೂ ಶೃತಿ ಹರಿಹರನ್‍ಳನ್ನು ಬಿಡುವುದಿಲ್ಲ ಎಂದಿದ್ದಾನೆ. ಏಕವಚನದಲ್ಲಿ ನಿಂದಿಸಿ ನನ್ನ ಘನತೆಯ ಬದುಕಿಗೆ ಅಡ್ಡಿಯಾಗಿದ್ದಲ್ಲದೆ, ಕೊಲೆ ಬೆದರಿಕೆ ಒಡ್ಡಿದ್ದಾನೆ. ಇದಲ್ಲದೆ ನಾನು ಆರೋಪಿಸಲ್ಪಟ್ಟ ವ್ಯಕ್ತಿ ಕೂಡ ನಟನಾಗಿರೋದ್ರಿಂದ ಅವರ ಅಭಿಮಾನಿಗಳಿಗೆ ನನ್ನ ವಿರುದ್ಧ ಕೊಲೆ, ಹಲ್ಲೆಯ ಪ್ರಚೋದನೆ ಮಾಡಿದ್ದಾನೆ. ಸೂಕ್ತ ಕ್ರಮ ಕೈಗೊಂಡು, ನನಗೆ ರಕ್ಷಣೆ ಕೊಡುವಂತೆ ಕೋರುತ್ತೇನೆ ಎಂಬುದಾಗಿ ಶೃತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಸದ್ಯ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=RKPY3g4jWRM

https://www.youtube.com/watch?v=Mud4GP9t0ik

Share This Article
Leave a Comment

Leave a Reply

Your email address will not be published. Required fields are marked *