‘ಬಾಹುಬಲಿ’ ಖ್ಯಾತಿಯ ರಾಣಾ ದಗ್ಗುಬಾಟಿಗೆ ಶ್ರೀನಿಧಿ ಶೆಟ್ಟಿ ನಾಯಕಿ

Public TV
1 Min Read

‘ಕೆಜಿಎಫ್’ (KGF) ಸಿನಿಮಾದ ಯಶ್ (Yash) ನಾಯಕಿ ಶ್ರೀನಿಧಿ ಶೆಟ್ಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ‘ಕೆಜಿಎಫ್-2’ ಸಿನಿಮಾದ ಸಕ್ಸಸ್ ನಂತರ ಸೈಲೆಂಟ್ ಆಗಿದ್ದರು. ಈಗ ಹೊಸ ಸಿನಿಮಾದ ಅಪ್‌ಡೇಟ್ ಸಿಕ್ಕಿದೆ. ‘ಬಾಹುಬಲಿ’ ನಟನ ಜೊತೆ ಡ್ಯುಯೆಟ್ ಹಾಡೋಕೆ ನಟಿ ಸಜ್ಜಾಗಿದ್ದಾರೆ.

ಶ್ರೀನಿಧಿ ಶೆಟ್ಟಿ (Srinidhi Shetty) ಮಾಡಿದ್ದು ಎರಡ್ಮೂರು ಸಿನಿಮಾ ಆಗಿದ್ರೂ ಅವರ ಮೇಲೆ ಫ್ಯಾನ್ಸ್‌ಗೆ ಭಾರೀ ಕ್ರೇಜ್ ಇದೆ. ಹೊಸ ಚಿತ್ರದ ಬಗ್ಗೆ ಅಪ್‌ಡೇಟ್ ಕೊಡಲಿ ಎಂದು ಕಾದು ಕುಳಿತವರಿಗೆ ಈಗ ಖುಷಿಯ ಸುದ್ದಿ ಸಿಕ್ಕಿದೆ. ‘ಬಾಹುಬಲಿ’ ಖ್ಯಾತಿಯ ರಾಣಾ ದಗ್ಗುಬಾಟಿ ಹೊಸ ಚಿತ್ರಕ್ಕೆ ಶ್ರೀನಿಧಿ ನಾಯಕಿ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ನಟ ದರ್ಶನ್ ಬಳಿ ಇದೆ 2 ಯುಎಸ್ ಮೇಡ್ ಪಿಸ್ತೂಲ್‍ಗಳು!

ರಾಣಾ (Rana Daggubati) ನಟನೆಯ ಹೊಸ ಚಿತ್ರಕ್ಕೆ ‘ಕೆಜಿಎಫ್’ ನಟಿಯನ್ನು ಸಂಪರ್ಕಿಸಲಾಗಿದೆ ಎನ್ನಲಾಗಿದೆ. ಕಥೆ ಕೇಳಿ ನಟಿ ಕೂಡ ಥ್ರಿಲ್ ಆಗಿದ್ದಾರಂತೆ. ಇನ್ನೂ ಚಿತ್ರತಂಡದ ಕಡೆಯಿಂದ ಅಧಿಕೃತ ಘೋಷಣೆಯೊಂದೇ ಬರಬೇಕಿದೆ. ಇದನ್ನೂ ಓದಿ:ಪತಿ ಜೊತೆಗಿನ ರೊಮ್ಯಾಂಟಿಕ್‌ ಫೋಟೋ ಹಂಚಿಕೊಂಡ ಆಲಿಯಾ ಭಟ್


ಅಂದಹಾಗೆ, ಕಿಚ್ಚ ಸುದೀಪ್ (Kichcha Sudeep) ನಟನೆಯ ಹೊಸ ಚಿತ್ರಕ್ಕೂ ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ. ‘ಮ್ಯಾಕ್ಸ್’ (Max Film) ಸಿನಿಮಾದ ರಿಲೀಸ್ ನಂತರ ಇವರಿಬ್ಬರ ಕಾಂಬಿನೇಷನ್ ಚಿತ್ರದ ಶೂಟಿಂಗ್ ಶುರುವಾಗಲಿದೆ.

Share This Article