ʻಕಿಸ್ಸಿಕ್ʼ ಬೆಡಗಿ ಶ್ರೀಲೀಲಾ (Actress Sreeleela) `ಪುಷ್ಪ 2′ (Pushpa 2) ಚಿತ್ರದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ ಬಳಿಕ ಅವರ ಜೀವನದಲ್ಲಿ ಅದ್ಭುತವೇ ನಡೆದಿದೆ. ಅದಕ್ಕೂ ಮುನ್ನ ಶ್ರೀಲೀಲಾ ಅನೇಕ ಟಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ್ರೂ ಅಷ್ಟಕ್ಕಷ್ಟೇ. ದೊಡ್ಡದೊಂದು ಬ್ರೇಕ್ಗಾಗಿ ಕಾಯುತ್ತಿದ್ದ ಶ್ರೀಲೀಲಾಗೆ ಕೊನೆಗೆ ಕೈ ಹಿಡಿದಿದ್ದು ಒಂದೇ ಒಂದು ಐಟಂ ಡ್ಯಾನ್ಸ್. ಅದು ಪುಷ್ಪ2 ಕಿಸ್ ಕಿಸ್ ಕಿಸಿಕ್ ಹಾಡು. ಅಲ್ಲಿಂದ ಬದಲಾದ ಶ್ರೀಲೀಲಾ ಅದೃಷ್ಟ ಈಗ ಚಿತ್ರವೊಂದರಕ್ಕೆ ಏಳು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಅನ್ನೋ ಸುದ್ದಿ ವೈರಲ್ ಆಗಿದೆ.
`ಪುಷ್ಪ 2′ ಬಳಿಕ ರೆಮನ್ಯುರೇಶನ್ ಹೆಚ್ಚಿಸಿಕೊಂಡ ಶ್ರೀಲೀಲಾ ಆ ಹಾಡಿಗೆ ಭರ್ತಿ 2 ಕೋಟಿ ಸಂಭಾವನೆ ಪಡೆದಿದ್ದರಂತೆ. ಬಳಿಕ ಲೆನಿನ್ ಚಿತ್ರಕ್ಕೆ 7 ಕೋಟಿ ಕೇಳಿದ್ದಕ್ಕೆ ಆಗಲ್ಲ ಎಂದ ನಿರ್ಮಾಪಕರು ಶ್ರೀಲೀಲಾರನ್ನೇ ಕೈಬಿಟ್ರು ಅನ್ನೋದು ಸುದ್ದಿ. ಆದರೆ ಶ್ರೀಲೀಲಾ ಎಷ್ಟು ಬೇಡಿಕೆ ಇಟ್ಟಿದ್ದರು..? ಎಷ್ಟು ಸಂಭಾವನೆ ಕೇಳಿದ್ದರು ಅನ್ನೋದು ಇದೀಗ ರಿವೀಲ್ ಆಗಿದ್ದು ಇದೀಗ ಏಳು ಕೋಟಿ ಕೊಡದಿದ್ದರೆ ಡೇಟ್ಸ್ ಕೇಳಲು ಬರಲೇಬೇಡಿ ಎಂದಿದ್ದಾರಂತೆ. ಇದನ್ನೂ ಓದಿ: ಶ್ರೀಲೀಲಾ ಲೆನಿನ್ ಚಿತ್ರದಿಂದ ಹೊರಬಿಳೋಕೆ ಇಲ್ಲಿದೆ ಕಾರಣ..!?
ಪುಷ್ಪ ಮೊದಲ ಭಾಗದ ಹಿಟ್ ಬಳಿಕ ರಶ್ಮಿಕಾ ತಮ್ಮ ಸಂಭಾವನೆ ಹೆಚ್ಚಿಸಿಕೊಂಡ್ರು, ಎರಡನೇ ಭಾಗದ ಯಶಸ್ಸಿನ ಬಳಿಕ ಮತ್ತೆ ಹೆಚ್ಚು ಸ್ಯಾಲರಿ ಕೇಳಲಾರಂಭಿಸಿದ್ರು. ಹೀಗೆ ರಶ್ಮಿಕಾ ನೀತಿಯನ್ನ ಶ್ರೀಲೀಲಾ ಫಾಲೋ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಕಾಲ್ಶೀಟ್ ಬೇಕಂದ್ರೆ 7 ಕೋಟಿ ಕಮ್ಮಿ ಇಲ್ಲ ಎನ್ನುತ್ತಿದ್ದಾರಂತೆ ಈ ಡಾನ್ಸಿಂಗ್ ಕ್ವೀನ್. ಒಟ್ನಲ್ಲಿ ಶ್ರೀಲೀಲಾರ ಏಳು ಕೋಟಿ ಸಂಭಾವನೆ ರಹಸ್ಯ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಎಷ್ಟು ಸರಿ ಎಷ್ಟು ತಪ್ಪು..? ಖುದ್ದು ಲೀಲಾ ಉತ್ತರ ಕೊಡಬೇಕಷ್ಟೇ. ಇದನ್ನೂ ಓದಿ: ವೃದ್ಧಾಪ್ಯ ತಡೆಯುವ ಚಿಕಿತ್ಸೆಯೇ ಶೆಫಾಲಿ ಜರಿವಾಲಾಗೆ ಮುಳುವಾಯ್ತಾ ?