ನಾವು ಒಟ್ಟಿಗೆ ಇಲ್ಲದಿದ್ದರೂ, ನಮ್ಮ ಬಾಂಧವ್ಯ ಮರೆಯಾಗುವುದಿಲ್ಲ- ಸೋನಲ್

By
1 Min Read

ನಟ ದರ್ಶನ್‌ (Darshan) ಕುರಿತು ಸೋನಲ್‌ (Actress Sonal) ವಿಶೇಷ ಪೋಸ್‌ವೊಂದನ್ನು ಶೇರ್‌ ಮಾಡಿದ್ದಾರೆ. ಈ ವರ್ಷ ರಕ್ಷಾ ಬಂಧನದಂದು (ಆ.19) ದರ್ಶನ್‌ರನ್ನು ಮಿಸ್ ಮಾಡಿಕೊಳ್ಳುತ್ತಿರೋದಾಗಿ ಸೋನಲ್ ಹೇಳಿದ್ದಾರೆ. ನಾವು ಒಟ್ಟಿಗೆ ಇಲ್ಲದಿದ್ದರೂ, ನಮ್ಮ ಬಾಂಧವ್ಯ ಮರೆಯಾಗುವುದಿಲ್ಲ. ಅಣ್ಣನಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ:‘ಧ್ರುವತಾರೆ’ ಸಿನಿಮಾದಲ್ಲಿ ವಿಲನ್‌ ಆದ ಕಾರ್ತಿಕ್ ಮಹೇಶ್

ಸೋನಲ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿ, ನಾವು ಒಟ್ಟಿಗೆ ಇಲ್ಲದಿದ್ದರೂ, ನಮ್ಮ ಬಾಂಧವ್ಯ ಎಂದಿಗೂ ಮರೆಯಾಗುವುದಿಲ್ಲ. ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮತ್ತು ನಾವು ನಿಮ್ಮನ್ನು ಪ್ರೀತಿಸುತ್ತೇವೆ ಅಣ್ಣ. ರಕ್ಷಾಬಂಧನದ ಶುಭಾಶಯಗಳು ದರ್ಶನ್‌ಗೆ ನಟಿ ಶುಭಕೋರಿದ್ದಾರೆ.

ಅಂದಹಾಗೆ, ‘ರಾಬರ್ಟ್’ ಸಿನಿಮಾದ ವೇಳೆ ಆದ ಪರಿಚಯ. ದರ್ಶನ್ ಜೊತೆಗಿನ ಸಹೋದರತ್ವದ ಒಡನಾಟ ಇಂದಿಗೂ ಮುಂದುವರೆದಿದೆ. ಪ್ರತಿ ವರ್ಷ ದರ್ಶನ್ ಮನೆಗೆ ತೆರಳಿ ನಟಿ ರಾಕಿ ಕಟ್ಟಿ ಶುಭಕೋರುತ್ತಿದ್ದರು. ಈ ವರ್ಷ ದರ್ಶನ್ ನ್ಯಾಯಾಂಗ ಬಂಧನದಲ್ಲಿರುವ ಹಿನ್ನೆಲೆ ಅವರನ್ನು ಮಿಸ್ ಮಾಡಿಕೊಳ್ತಿದ್ದಾರೆ.

ಆ.11ರಂದು ತರುಣ್ ಸುಧೀರ್ (Tarun Sudhir) ಜೊತೆ ಸೋನಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿನಿಮಾ ಸೆಟ್‌ನಲ್ಲಿ ಆದ ಪರಿಚಯ ದರ್ಶನ್‌ರಿಂದ ಮದುವೆಗೆ ಮುನ್ನುಡಿ ಬರೆಯಿತು.

Share This Article