‘ಆದಿಪುರುಷ್‌’ ಚಿತ್ರದಲ್ಲಿ ಎರಡೇ ದೃಶ್ಯದಲ್ಲಿ ನಟಿಸಲು 50 ಲಕ್ಷ ಸಂಭಾವನೆ ಪಡೆದ ಕನ್ನಡದ ನಟಿ ಸೋನಾಲ್‌

Public TV
2 Min Read

ನ್ನಡದ ‘ಚೆಲುವೆಯೇ ನಿನ್ನ ನೋಡಲು’ ಸಿನಿಮಾದಲ್ಲಿ ಶಿವಣ್ಣಗೆ (Shivarajkumar) ಜೋಡಿಯಾಗಿ ನಟಿಸಿದ್ದ ಸೋನಾಲ್ ಚೌಹಾಣ್ (Sonal Chauhan) ಇತ್ತೀಚಿಗೆ ‘ಆದಿಪುರುಷ್’ ಚಿತ್ರದಲ್ಲಿ ನಟಿಸಿದ್ದರು. ರಾವಣನ ಮಡದಿಯಾಗಿ ಕಾಣಿಸಿಕೊಂಡಿದ್ದರು. ಎರಡೇ ದೃಶ್ಯಕ್ಕೆ ನಟಿ ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರೆ. ಸೋನಾಲ್ ಪಡೆದಿರುವ ಸಂಭಾವನೆ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.

ಪ್ರಭಾಸ್ (Prabhas), ಕೃತಿ ಸನೋನ್ (Kriti Sanon) ನಟನೆಯ ‘ಆದಿಪುರುಷ್’ ಸಿನಿಮಾ ಜೂನ್ 16ರಂದು ತೆರೆಕಂಡಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ವರ್ಗದ ಜನರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಮತ್ತೊಂದು ವರ್ಗದ ಜನರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಪ್ರಭಾಸ್ ರಾಮನಾಗಿ ನಟಿಸಿದ್ರೆ, ಕೃತಿ ಸೀತಾ ಮಾತೆಯಾಗಿ ನಟಿಸಿದ್ದಾರೆ. ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಓಂ ರಾವತ್ ನಿರ್ದೇಶನ ಮಾಡಿದ್ದು, ಸಾಕಷ್ಟು ಟೀಕೆ ಎದುರಿಸುತ್ತಿದ್ದಾರೆ. ಇಷ್ಟೆಲ್ಲದರ ಮಧ್ಯೆ ಚಿಕ್ಕದೊಂದು ಪಾತ್ರ ಮಾಡಿದ ನಟಿ ಸೋನಲ್ ಚೌಹಾಣ್ ಕೂಡ ಸುದ್ದಿ ಆಗುತ್ತಿದ್ದಾರೆ. ‘ಆದಿಪುರುಷ್’ ಸಿನಿಮಾದಲ್ಲಿ ಅವರು ಮಂಡೋದರಿಯ ಪಾತ್ರ ಮಾಡಿದ್ದಾರೆ. ಅದಕ್ಕಾಗಿ ಅವರು ಬರೋಬ್ಬರಿ 50 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಬಹುಕೋಟಿ ಬಜೆಟ್‌ನಲ್ಲಿ ‘ಆದಿಪುರುಷ್’ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದಲ್ಲಿನ ಕಲಾವಿದರ ಸಂಭಾವನೆಗೂ ಹೆಚ್ಚು ಹಣ ಖರ್ಚಾಗಿದೆ. ನಟಿ ಸೋನಲ್ ಚೌಹಾಣ್ ಅವರು ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದಾರೆ. ‘ಆದಿಪುರುಷ್’ (Adipurush) ಸಿನಿಮಾದಲ್ಲಿ ರಾವಣನ ಹೆಂಡತಿ ಮಂಡೋದರಿಯ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಇಡೀ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುವುದು 2 ದೃಶ್ಯದಲ್ಲಿ ಮಾತ್ರ, ಹಾಗಿದ್ದರೂ ಕೂಡ ಅವರಿಗೆ ದುಬಾರಿ ಸಂಭಾವನೆ ಸಿಕ್ಕಿದೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ ಇಂಥದ್ದೊಂದು ಸುದ್ದಿ ಹರಿದಾಡುತ್ತಿದೆ.

ಚಿತ್ರರಂಗದಲ್ಲಿ ಸೋನಲ್ ಚೌಹಾಣ್ ಅವರು ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ‘ಆದಿಪುರುಷ್’ ಚಿತ್ರದಲ್ಲಿ ಮಂಡೋದರಿ ಪಾತ್ರದಲ್ಲಿ ನಟಿಸಲು 50 ಲಕ್ಷ ರೂಪಾಯಿ ಸಂಭಾವನೆಯನ್ನ ಡಿಮ್ಯಾಂಡ್ ಮಾಡಿ ಪಡೆದಿದ್ದಾರೆ. 500-600 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡಿದ್ದು, ಹಾಕಿದ ಬಂಡವಾಳ ಪೂರೈಸೋದು ಕಷ್ಟವಾಗಿದೆ. ‘ಆದಿಪುರುಷ್’ ರಾಮಾಯಣ ಹಾಗೆ ಇಲ್ಲ. ರಾವಣ ಹೇಗೆ ಮಾಡ್ರನ್ ಆಗಿ ಕಾಣಿಸಿಕೊಳ್ಳುತ್ತಾರೆ ಎಂಬ ಟೀಕೆಗಳು ವ್ಯಕ್ತವಾಗಿದೆ.

Share This Article