ನಾನೇನೂ ತಪ್ಪು ಮಾಡಿಲ್ಲ- ನಾಗ ಚೈತನ್ಯ ಜೊತೆಗಿನ ಡೇಟಿಂಗ್ ಸುದ್ದಿಗೆ ಶೋಭಿತಾ ರಿಯಾಕ್ಷನ್

Public TV
1 Min Read

ಸೌತ್ ಬ್ಯೂಟಿ ಸಮಂತಾ- ನಾಗ ಚೈತನ್ಯ (Nagachaitanya) ಡಿವೋರ್ಸ್ (Divorce) ಪಡೆದ ಬಳಿಕ ಶೋಭಿತಾ ಧುಲಿಪಾಲ್ (Sobitha Dhulipala) ಜೊತೆ ನಾಗ ಚೈತನ್ಯ ಡೇಟಿಂಗ್ ಸುದ್ದಿ ಸದ್ದು ಮಾಡ್ತಿದ್ದಾರೆ. ಸುದ್ದಿ ತಕ್ಕಂತೆ ಆಗಾಗ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ತಿರೋದು ಡೇಟಿಂಗ್ ವಿಚಾರಕ್ಕೆ ಮತ್ತಷ್ಟು ಪುಷ್ಟಿ ನೀಡಿತ್ತು. ಈ ಎಲ್ಲಾ ಊಹಾಪೋಹಗಳಿಗೂ ಶೋಭಿತಾ ಪ್ರತಿಕ್ರಿಯೆ ನೀಡಿದ್ದಾರೆ.

ಸಮಂತಾ (Samantha) – ನಾಗಚೈತನ್ಯ ಬೇರೆ ಆದ ಮೇಲೆ ತಮ್ಮ ಬದುಕಿನಲ್ಲಿ ಮೂವ್ ಆನ್ ಆಗಿದ್ದಾರೆ. ತಮ್ಮ ಸಿನಿಮಾ ಕೆಲಸಗಳತ್ತ ಗಮನ ನೀಡುತ್ತಿದ್ದಾರೆ. ಆದರೆ ಶೋಭಿತಾ- ನಾಗಚೈತನ್ಯ ಡೇಟಿಂಗ್ ಅವರನ್ನ ಬಿಟ್ಟು ಬಿಡದೇ ಕಾಡುತ್ತಿದೆ. ನಾಗ್ ಹೊಸ ಮನೆಯಲ್ಲಿ ಶೋಭಿತಾ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಲಂಡನ್ ರೆಸ್ಟೋರೆಂಟ್‌ವೊಂದರಲ್ಲಿ ಇಬ್ಬರು ಡಿನ್ನರ್ ಡೇಟ್ ಮಾಡ್ತಿರೋದು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ನಟಿ ಮೌನ ಮುರಿದಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶೋಭಿತಾ, ಡೇಟಿಂಗ್ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಒಳ್ಳೊಳ್ಳೆಯ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತಿದೆ. ನನಗೆ ಡ್ಯಾನ್ಸ್ ಎಂದರೆ ಇಷ್ಟ. ಮಣಿರತ್ನಂ ಸಿನಿಮಾದಲ್ಲಿ ಎಆರ್ ರೆಹಮಾನ್ ಕಂಪೋಸ್ ಮಾಡಿದ ಮೂರು ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದೇನೆ. ಇದಕ್ಕಿಂತ ಅದೃಷ್ಟ ಇನ್ನೇನು ಬೇಕು. ಗೊತ್ತಿಲ್ಲದೆ ಮಾತನಾಡುವವರಿಗೆ ನಾನು ಉತ್ತರ ನೀಡಬೇಕಿಲ್ಲ. ನಾನೇನೂ ತಪ್ಪು ಮಾಡಿಲ್ಲ ಎಂದರೆ ಸ್ಪಷ್ಟನೆ ಕೊಡುವ ಮಾತೇ ಇಲ್ಲ. ಆ ಬಗ್ಗೆ ನನಗೆ ಭಯ ಇಲ್ಲ. ಇದು ನನಗೆ ಸಂಬಂಧಿಸಿದ ವಿಷಯ ಅಲ್ಲ ಎಂದಿದ್ದಾರೆ. ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ನಿಷೇಧ : ಪ್ರತಿಭಟನೆಗೆ ಇಳಿದ ಬಿಜೆಪಿ

ಜನರು ಅರ್ಧಂಬರ್ಧ ಜ್ಞಾನದಿಂದ ಬರೆಯುವ ವಿಷಯಗಳಿಗೆ ಉತ್ತರಿಸುವ ಅಥವಾ ಸ್ಪಷ್ಟಪಡಿಸುವ ಬದಲು ಜೀವನದ ಮೇಲೆ ಕೇಂದ್ರೀಕರಿಸಬೇಕು, ಸುಧಾರಿಸಬೇಕು, ಶಾಂತವಾಗಿರಬೇಕು ಮತ್ತು ಒಳ್ಳೆಯ ವ್ಯಕ್ತಿಯಾಗಲು ಪ್ರಯತ್ನಿಸಬೇಕು ಎಂದು ಶೋಭಿತಾ ಮಾತನಾಡಿದ್ದಾರೆ. ಇದೀಗ ಶೋಭಿತಾ ಪ್ರತಿಕ್ರಿಯೆ ನೀಡುವ ಮೂಲಕ ನಾಗ ಚೈತನ್ಯ ಡೇಟಿಂಗ್ ವದಂತಿಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ.

Share This Article