ಮದುವೆಯ ಬಳಿಕ ಮೊದಲ ಬಾರಿಗೆ ಚಿತ್ರೀಕರಣದಲ್ಲಿ ಭಾಗಿಯಾದ ಶೋಭಿತಾ

Public TV
1 Min Read

ಟಾಲಿವುಡ್ ನಟ ನಾಗಚೈತನ್ಯ (Naga Chaitanya) ಜೊತೆ ವೈವಾಹಿಕ ಜೀವನದಲ್ಲಿ ಬ್ಯುಸಿಯಿದ್ದ ಶೋಭಿತಾ (Sobhita Dhulipala) ಮತ್ತೆ ಕ್ಯಾಮೆರಾ ಮುಂದೆ ಬಂದಿದ್ದಾರೆ. ಮದುವೆಯ ಬಳಿಕ ಮೊದಲ ಬಾರಿಗೆ ಚಿತ್ರೀಕರಣದಲ್ಲಿ ನಟಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ:ನಟ ದರ್ಶನ್‌ಗೆ ಇನ್ಮುಂದೆ ದೇಶಾದ್ಯಂತ ಸಂಚಾರಕ್ಕೆ ಅವಕಾಶ – ಹೈಕೋರ್ಟ್ ಆದೇಶ

ಶೋಭಿತಾ ನಟನೆಯ ಹೊಸ ಸಿನಿಮಾದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ನಟಿ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದುವೆಯಾಗಿ ಮೂರು ತಿಂಗಳು ಕಳೆದಿಲ್ಲ. ಅಷ್ಟರಲ್ಲಿ ಕೆಲಸಕ್ಕೆ ಹಾಜರಿ ಹಾಕಿರುವ ನಟಿಯ ನಡೆಗೆ ಫ್ಯಾನ್ಸ್ ಸೂಚಿಸಿದ್ದಾರೆ.

ಅಂದಹಾಗೆ, ನಾಗಚೈತನ್ಯ ಮತ್ತು ಶೋಭಿತಾ ಹಲವು ವರ್ಷಗಳಿಂದ ಪರಿಚಿತರು. ಆ ಪರಿಚಯವೇ ಮದುವೆಗೆ ಮುನ್ನುಡಿ ಬರೆಯುತು. ಸಮಂತಾ ಜೊತೆ ಡಿವೋರ್ಸ್ ಆದ್ಮೇಲೆ ಶೋಭಿತಾ ಜೊತೆ ನಾಗಚೈತನ್ಯ ಡೇಟಿಂಗ್‌ನಲ್ಲಿದ್ದರು.

ಇನ್ನೂ ಆಗಸ್ಟ್ 8ರಂದು ತಮ್ಮ ನಿವಾಸದಲ್ಲಿ ಉಂಗುರ ಬದಲಿಸಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕಳೆದ ವರ್ಷದ ಅಂತ್ಯದಲ್ಲಿ ಡಿ.4ರಂದು ಶೋಭಿತಾ ಹಾಗೂ ನಾಗಚೈತನ್ಯ ಮದುವೆಯಾದರು. ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಈ ಮದುವೆ ನಡೆಯಿತು.

Share This Article