ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸಿರಿ ಪ್ರಹ್ಲಾದ್

Public TV
1 Min Read

‘ಯುಗಳಗೀತೆ’ ಸೀರಿಯಲ್ ಮೂಲಕ ಗಮನ ಸೆಳೆದ ನಟಿ ಸಿರಿ ಪ್ರಹ್ಲಾದ್ (Siri Prahlad) ಅವರು ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ಮಧುಸೂದನ್ ಜೊತೆ ನಟಿ ಸಪ್ತಪದಿ ತುಳಿದಿದ್ದಾರೆ. ಇದನ್ನೂ ಓದಿ:ಟೈಗರ್ ಶ್ರಾಫ್‌ಗೆ ‘ಭಜರಂಗಿ’ ಹರ್ಷ ಆ್ಯಕ್ಷನ್ ಕಟ್- ಪೋಸ್ಟರ್ ಔಟ್

‘ಯುಗಳಗೀತೆ’ ಸೀರಿಯಲ್‌ನಲ್ಲಿ ಜೊತೆಯಾಗಿ ಸಿರಿ ಮತ್ತು ಮಧುಸೂದನ್ ನಟಿಸಿದರು. ಈ ಪರಿಚಯವೇ ಪ್ರೀತಿಗೆ ತಿರುಗಿತ್ತು. ಹಲವು ವರ್ಷಗಳ ಪ್ರೀತಿಗೆ ಈ ಜೋಡಿ ಮದುವೆಯ ಮುದ್ರೆ ಒತ್ತಿದ್ದಾರೆ. ಈ ಮದುವೆಗೆ ‘ದಿಯಾ’ ನಟಿ ಖುಷಿ ರವಿ, ಆಶಿಕಾ ರಂಗನಾಥ್ ಕುಟುಂಬ, ತೇಜಸ್ವಿನಿ ಶರ್ಮಾ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ.

 

View this post on Instagram

 

A post shared by Eva Photo & Films (@evaphotofilms)

ಇನ್ನೂ ಲಾ, ಇಷ್ಟ, ಬಡ್ಡೀಸ್, ಒಂದು ಶಿಕಾರಿಯ ಕಥೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಿರಿ ಪ್ರಹ್ಲಾದ್ ನಟಿಸಿದ್ದಾರೆ. ಮಧುಸೂದನ್ ಮೇಡ್ ಇನ್ ಬೆಂಗಳೂರು ಚಿತ್ರದಲ್ಲಿ ನಟಿಸಿದ್ದಾರೆ.

Share This Article