ಬೇಬಿ ಬಂಪ್‍ ಮಗುವಿನ ಚಿತ್ತಾರ: ವೈರಲ್ ಆಗಿದೆ ಶ್ವೇತಾ ಶ್ರೀವಾತ್ಸವ್‌ ಫೋಟೋ

Public TV
1 Min Read

ಬೆಂಗಳೂರು: ಬೇಬಿ ಬಂಪ್ ಮೇಲೆ ಮೆಹಂದಿ ಚಿತ್ತಾರ ಬಿಡಿಸುವುದು ಸದ್ಯ ಟ್ರೆಂಡ್ ಆಗಿದ್ದು, ಈಗ ಸಿಂಪಲ್ ಸುಂದರಿ ಶ್ವೇತಾ ಶ್ರೀವಾತ್ಸವ್ ತಮ್ಮ ಹೊಟ್ಟೆಯ ಮೇಲೆ ಮಗುವಿನ ಚಿತ್ರವನ್ನು ಹಾಕಿಸಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ.

3ಡಿ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಶ್ವೇತಾ ಶ್ರೀವಾತ್ಸವ್ ಹೊಟ್ಟೆಯಲ್ಲಿ ಮಲಗಿರುವ ಮಗುವಿನ ಚಿತ್ರವನ್ನು ಸುಂದರವಾಗಿ ಬಿಡಿಸಿದ್ದಾರೆ. ಹೊಟ್ಟೆಯ ಮೇಲೆ ಮೆಹಂದಿ ಚಿತ್ತಾರ ಹಾಕಿಸಿಕೊಂಡು ಪೋಸ್ ಕೊಟ್ಟಿರೋ ಶ್ವೇತಾ ಶ್ರೀವಾತ್ಸವ್ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗರ್ಭಿಣಿಯರು ಹೊಟ್ಟೆಯನ್ನು ಆದಷ್ಟು ಮುಚ್ಚಿಡುವುದು ಇಲ್ಲವೇ ಸಾರ್ವಜನಿಕವಾಗಿ ತೋರಿಸುವುದು ನಿಷಿದ್ದ ಎನ್ನುವ ಕಾಲವಿತ್ತು. ಆದರೆ ಈಗ ಇದು ಬದಲಾಗಿದೆ. ಬಾಲಿವುಡ್, ಹಾಲಿವುಡ್ ಸೆಲೆಬ್ರಿಟಿಗಳು ತಮ್ಮ ಹೊಟ್ಟೆಯ ಮೇಲೆ ಚಿತ್ರ ಹಾಕಿಸಿ ಶೂಟ್ ಮಾಡಿಸಿದ್ದು, ಈಗ ಈ ಸಾಲಿಗೆ ಶ್ವೇತಾ ಸೇರಿದ್ದಾರೆ.

ಈ ಹಿಂದೆ `ಮೆಟರ್ನಿಟಿ ಫೋಟೊಶೂಟ್’ ಮಾಡಿಸಿ, ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶ್ವೇತಾ ಶ್ರೀವಾತ್ಸವ್ ಹಂಚಿಕೊಂಡಿದ್ದರು.

 

 

Share This Article
Leave a Comment

Leave a Reply

Your email address will not be published. Required fields are marked *