ʻಲಕ್ಷ್ಮೀ ನಿವಾಸʼದಿಂದ ಹೊರನಡೆದ ಶ್ವೇತಾ

Public TV
2 Min Read

ಕನ್ನಡದ ಹೆಸರಾಂತ ʻಲಕ್ಷ್ಮೀ ನಿವಾಸʼ ಧಾರಾವಾಹಿಯಿಂದ (Lakshmi Nivasa Serial) ನಟಿ ಶ್ವೇತಾ ಹೊರನಡೆದಿದ್ದಾರೆ. ಲಕ್ಷ್ಮಿ ಪಾತ್ರದಲ್ಲಿ ಕಾಣಿಸ್ಕೊಂಡಿದ್ದ ಶ್ವೇತಾ ಧಾರಾವಾಹಿಗೆ ಕಳೆ ತಂದಿದ್ದರು. ಕಳೆದ ಒಂದು ತಿಂಗಳಿಂದ ಪ್ರಸಾರವಾಗುತ್ತಿದ್ದ ಸಂಚಿಕೆಗಳಲ್ಲೂ ಶ್ವೇತಾ ಕಾಣಿಸಿಕೊಂಡಿರಲಿಲ್ಲ. ಇದೀಗ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಧಾರಾವಾಹಿ ತಂಡ ಘೋಷಿಸುವ ಮೊದಲೇ ʻಲಕ್ಷ್ಮೀ ನಿವಾಸʼದಿಂದ ಹೊರಬಂದ ವಿಚಾರ ಅವರೇ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಸುಮಾರು 1 ವರ್ಷದಿಂದ ʻಲಕ್ಷ್ಮೀ ನಿವಾಸʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಒಂದು ಗಂಟೆಗಳ ಕಾಲ ಪ್ರಸಾರವಾಗುತ್ತಿದ್ದ ಸುದೀರ್ಘ ಧಾರಾವಾಹಿ (Kannada Serial) ಇದಾಗಿದ್ದು ಬಹಳ ವರ್ಷಗಳ ಬಳಿಕ ಶ್ವೇತಾ ಕನ್ನಡಕ್ಕೆ ವಾಪಸ್ಸಾಗಿದ್ರು. ಇದನ್ನೂ ಓದಿ: ಯುವ ಗಾಯಕಿ ಅಖಿಲಾ ಪಜಿಮಣ್ಣು ಬಾಳಲ್ಲಿ ಬಿರುಗಾಳಿ – ವಿವಾಹ ವಿಚ್ಛೇದನಕ್ಕೆ ಅರ್ಜಿ

ಚೆನೈನಲ್ಲಿ ಕುಟುಂಬದೊಂದಿಗೆ ವಾಸವಿರುದ ಶ್ವೇತಾ (Actress Shweta) ಶೂಟಿಂಗ್ ಇದ್ದಾಗ ಮಾತ್ರ ಬೆಂಗಳೂರಿಗೆ ಬರುತ್ತಿದ್ದರು. ಇದೀಗ ತಾಯಿಯ ಅನಾರೋಗ್ಯದ ಕಾರಣ ಕೊಟ್ಟು ಧಾರಾವಾಹಿಯಿಂದ ಹೊರಬಂದಿರೋದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರುಕ್ಮಿಣಿ ಸೆಲ್ಫಿ `ಟೈಗರ್’ ಪ್ರಿಂಟ್ ಶರ್ಟ್ ಸೀಕ್ರೆಟ್ ರಿವೀಲ್! ಜೂ.ಎನ್‌ಟಿಆರ್‌ಗೆ ನಾಯಕಿ?

ʻಚೈತ್ರದ ಪ್ರೇಮಾಂಜಲಿʼ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತವಾದ ತಮಿಳಿನ ವಿನೋದಿನಿ ಕನ್ನಡದಲ್ಲಿ ಶ್ವೇತಾ ಹೆಸರಿನಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಮೂಲ ತಮಿಳುನಾಡಿನವರಾಗಿದ್ದರೂ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಪ್ರೀತಿ ಗಳಿಸಿದವರು ಶ್ವೇತಾ. ʻಗೆಜ್ಜೆನಾದʼ, ʻಲಕ್ಷ್ಮಿ ಮಹಾಲಕ್ಷ್ಮಿʼ, ʻಕರ್ಪೂರದ ಗೊಂಬೆʼ ಸೇರಿ ಹಲವು ಸಿನಿಮಾಗಳಲ್ಲಿ ಇವರ ಅಭಿನಯ ಮರೆಯುವಂತಿಲ್ಲ.

ಬಹು ವರ್ಷಗಳ ಬಳಿಕ ʻಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಲೀಡ್‌ರೋಲ್‌ನಲ್ಲಿ ಅಭಿನಯಿಸೋ ಮೂಲಕ ಕಮ್‌ಬ್ಯಾಕ್ ಆಗಿದ್ದರು. ಇದೀಗ ವೈಯಕ್ತಿಕ ಕಾರಣ ಹೇಳಿ ಬ್ರೇಕ್ ತೆಗೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಮತ್ತೆ ಮರಳುತ್ತಾರಾ? ಅಲ್ಲಿಯವರೆಗೂ ಧಾರಾವಾಹಿಯಲ್ಲಿ ಲಕ್ಷ್ಮಿ ಪಾತ್ರವನ್ನ ಹೊರಗಿಟ್ಟು ಚಿತ್ರೀಕರಣ ಮಾಡಲಾಗುತ್ತಾ? ಶ್ವೇತಾ ಪಾತ್ರವನ್ನ ಬೇರೆಯವರು ರಿಪ್ಲೇಸ್ ಮಾಡೋದಾಗಿದ್ರೆ ಯಾರು ಮಾಡಲಿದ್ದಾರೆ? ಅನ್ನೋದು ಸಸ್ಪೆನ್ಸ್‌ ಆಗಿ ಉಳಿದಿದೆ. ಇದನ್ನೂ ಓದಿ: ಮೋಹದ ಬಣ್ಣ ನೀಲಿ: ಯೋಗರಾಜ್ ಭಟ್ಟರ ಹೊಸ ಪ್ರಯೋಗ

ಶ್ವೇತಾ ಹೇಳಿದ್ದೇನು ?
ವೈಯಕ್ತಿಕ ಕಾರಣ ಹಾಗೂ ತಾಯಿಯ ಅನಾರೋಗ್ಯದಿಂದಾಗಿ ʻಲಕ್ಷ್ಮೀ ನಿವಾಸʼ ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡಿದ್ದೇನೆ. ನನ್ನನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದಕ್ಕಾಗಿ ಕರ್ನಾಟಕ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. ಧಾರಾವಾಹಿ ಸೆಟ್‌ನಲ್ಲಿ ಹಲವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅದ್ಭುತ ಪ್ರೀತಿ ಕೊಡುವ ಕನ್ನಡಿಗರಿಗೆ ನನ್ನನ್ನು ರೀ ಎಂಟ್ರಿ ಮಾಡಿಸಿರೋದಕ್ಕೆ ಜೀ ಕನ್ನಡ ವಾಹಿನಿ ಧನ್ಯವಾದ ಹೇಳುತ್ತೇನೆ. ಮತ್ತೆ ಸಿಗುತ್ತೇನೆ. ಇದನ್ನೂ ಓದಿ: ಮಹಿಳೆಗೆ ಕಾರು ಡಿಕ್ಕಿ ಹೊಡೆದಿದ್ದಕ್ಕೆ ಕ್ಷಮೆ ಕೇಳಿದ ಯುವ ರಾಜ್‌ಕುಮಾರ್

Share This Article