ಅಕ್ಕನ ಜೊತೆ ಮೈಸೂರು ಅರಮನೆ ಸುತ್ತಾಡಿದ ಶುಭಾ ಪೂಂಜಾ

Public TV
1 Min Read

ಸ್ಯಾಂಡಲ್‌ವುಡ್ ನಟಿ ಶುಭಾ ಪೂಂಜಾ (Shubha Poonja) ಸದ್ಯ ‘ತ್ರಿದೇವಿ’ (Tridevi) ಸಿನಿಮಾ ರಿಲೀಸ್‌ಗೆ ಎದುರು ನೋಡ್ತಿದ್ದಾರೆ. ಈ ನಡುವೆ ಅಕ್ಕನ ಜೊತೆ ಮೈಸೂರು ಅರಮನೆಯಲ್ಲಿ ಸುತ್ತಾಡಿದ್ದಾರೆ. ಖುಷಿಯಿಂದ ಒಂದಿಷ್ಟು ಸಮಯ ಕಳೆದಿದ್ದಾರೆ. ಈ ಕುರಿತ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ಮಗಳ ದಾಂಪತ್ಯದಲ್ಲಿ ಬಿರುಕು- ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ

ಚಿತ್ರರಂಗದ ತಾರೆಯರು ರಾಜಕೀಯ ಎಂಟ್ರಿ ಕೊಡುವುದು ಸರ್ವೇ ಸಾಮಾನ್ಯವಾಗಿದೆ. ಇತ್ತೀಚಿಗೆ ಶುಭಾ ಪೂಂಜಾಗೆ ರಾಜಕೀಯ (Politics) ಬರುವ ಬಗ್ಗೆ ಪ್ರಶ್ನೆ ಎದುರಾಗಿತ್ತು. ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ. ನನಗೆ ಸುಮಾರು ಜನ ಕೇಳ್ತಿರುತ್ತಾರೆ ರಾಜಕೀಯಕ್ಕೆ ಬರುತ್ತೀರಾ ಅಂತಾ ಆದರೆ ಸದ್ಯಕ್ಕೆ ಈ ಬಗ್ಗೆ ಆಲೋಚನೆ ಇಲ್ಲ. ಸಿನಿಮಾಗೆ ಅನಿರೀಕ್ಷಿತವಾಗಿ ಎಂಟ್ರಿ ಸಿಕ್ಕಿತು. ಅದೇ ರೀತಿ ರಾಜಕೀಯಕ್ಕೆ ಬರಲು ಮುಂದಿನ ದಿನಗಳಲ್ಲಿ ಒಂದೊಳ್ಳೆಯ ಅವಕಾಶ ಸಿಕ್ಕರೆ ಬರುತ್ತೀನಿ. ಆದರೆ ಸದ್ಯಕ್ಕೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ದಯವಿಟ್ಟು ನಿಮ್ಮ ಮತಗಳನ್ನ ಚಲಾಯಿಸಿ, ಮೇ 10ಕ್ಕೆ ಎಲೆಕ್ಷನ್ Vote ಮಾಡಿ ಎಂದು ನಟಿ ಮತದಾರನ ಕರ್ತವ್ಯದ ಬಗ್ಗೆ ಮನವಿ ಮಾಡಿದ್ದರು.

ಈಗ ನಟಿ ಶುಭಾ ಪೂಂಜಾ ಮೈಸೂರು ಅರಮನೆಗೆ ಅಕ್ಕನ ಜೊತೆ ಎಂಟ್ರಿ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಮಸ್ತ್ ಆಗಿ ಎಂಜಾಯ್ ಮಾಡ್ತಿದ್ದಾರೆ. ಸಹೋದರಿ ಜೊತೆಗಿನ ಫೋಟೋ ಹಂಚಿಕೊಂಡು, ಮೈಸೂರು ಟ್ರಿಪ್ ಬಗ್ಗೆ ನಟಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

‘ತ್ರಿದೇವಿ’ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಶುಭಾ ಪೂಂಜಾ, ನಟನೆಯ ಜೊತೆ ನಿರ್ಮಾಣದ ಹೊಣೆ ಕೂಡ ಹೊತ್ತಿದ್ದಾರೆ. ಈ ಮೂಲಕ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

Share This Article