ಬೆಂಗಳೂರು: ಚಂದನವನದ ಮೊಗ್ಗಿನ ಮನಸಿನ ಬೆಡಗಿ ಶುಭಾ ಪೂಂಜಾ ತಮ್ಮ ಕನಸಿನ ಹುಡುಗನಲ್ಲಿ ಇರಬೇಕಾದ ಪ್ರಮುಖ ಗುಣಗಳ ಪಟ್ಟಿಯನ್ನು ಬಹಿರಂಗ ಪಡಿಸಿದ್ದಾರೆ.
ಹೌದು, ಸೋಮವಾರ ಆಯೋಜಿಸಲಾಗಿದ್ದ ನಟಿ ಶುಭಾ ಪೂಂಜಾ ನಟನೆಯ `ಜಯಮಹಲ್’ ಸಿನಿಮಾ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮ ಆರಂಭವಾಗುವ ಮೊದಲು ಪತ್ರಕರ್ತರ ಜತೆ ಮಾತಿಗೆ ಕುಳಿತಿದ್ದರು. ಈ ವೇಳೆ ಪತ್ರಕರ್ತರು ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನಿಸಿದರು. ಇದಕ್ಕೆ ಅವರು, ನಾನು ಮೆಚ್ಚುವ ಹುಡುಗ ಇನ್ನೂ ಸಿಕ್ಕಿಲ್ಲ ಎಂದು ನಾನು ನಗು ಮುಖದಲ್ಲೇ ಉತ್ತರಿಸಿದರು.
ಮರುಕ್ಷಣವೇ ನೀವು ಇಷ್ಟಪಡುವ ಹುಡುಗ ಹೇಗಿರಬೇಕು ಎನ್ನುವ ಪ್ರಶ್ನೆಯನ್ನು ಕೇಳಲಾಯಿತು. ಅದಕ್ಕೆ ಅವರು ಪೇಪರ್, ಪೇನ್ ತೆಗೆದುಕೊಂಡು ಕನಸಿನ ಹುಡುಗನ ಗುಣಗಳ ಬಗ್ಗೆ ಪಟ್ಟಿ ಮಾಡಿದರು. ಪ್ರಾಣಿಗಳನ್ನು ಪ್ರೀತಿಸಬೇಕು, ಹಳ್ಳಿ ಜೀವನಕ್ಕೆ ಸಿದ್ಧನಾಗಿರಬೇಕು, ಮಹತ್ವಾಕಾಂಕ್ಷೆಗಳು ಇರಬಾರದು, ಕಪ್ಪು ಬಣ್ಣ ಇಷ್ಟ, ಒಳ್ಳೆ ಮನುಷ್ಯನಾಗಿರಬೇಕು ಎಂದು ಪಟ್ಟಿ ಬರೆದರು.
ಈ ಉತ್ತರ ಸಿಕ್ಕಿದ ಕೂಡಲೇ, ನಿಮ್ಮ ಪ್ರಕಾರ ಹುಡುಗ ಶ್ರೀಮಂತನಾಗಿರುವುದು ಬೇಡವೇ ಎನ್ನುವ ಮರು ಪ್ರಶ್ನೆಗೆ ಶ್ರೀಮಂತ ಏನೂ ಬೇಕಾಗಿಲ್ಲ. ಮಧ್ಯಮ ವರ್ಗದ ಹುಡುಗನಾಗಿದ್ದರೂ ಓಕೆ. ಆದರೆ ಜೀವನ ನಿರ್ವಹಣೆಗೆ ತೊಂದರೆ ಆಗದಷ್ಟು ಹಣ ಇದ್ದರೆ ಸಾಕು ಎಂದು ಉತ್ತರಿಸಿದರು. ಕೊನೆಯಲ್ಲಿ ತಮ್ಮ ಪಟ್ಟಿಗೆ ಶುಭಾ ಅವರು ಹುಡುಗ ರೈತನಾಗಿದ್ದರೆ ಆಗಿದ್ದರೆ ಇನ್ನು ಪ್ರಶಸ್ತ್ಯ ಹೆಚ್ಚು ಎಂದು ಹೇಳಿ ತಮ್ಮ ಕನಸಿನ ರಾಜನಲ್ಲಿರಬೇಕಾದ ಗುಣಗಳ ಬೇಡಿಕೆ ಪಟ್ಟಿಯನ್ನು ಕೊನೆಗೊಳಿಸಿದರು. ಇದನ್ನೂ ಓದಿ: ಬಿಗ್ ಬಾಸ್ ನ ಬಾರ್ಬಿ ಡಾಲ್ ಮದುವೆಯಾಗೋ ಹುಡುಗ ಹೀಗಿರಬೇಕಂತೆ!