ಮದುವೆಯಾದ ಒಂದೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡ ನಟಿ ಶ್ರುತಿ

Public TV
1 Min Read

ಚಿತ್ರರಂಗದಲ್ಲಿ ಒಂದಲ್ಲಾ ಒಂದು ಕಹಿ ಘಟನೆ ಎದುರಾಗುತ್ತಲೇ ಇದೆ. ಇದೀಗ ತಮಿಳಿನ ಕಿರುತೆರೆ ನಟಿ ಶ್ರುತಿ ಶಷ್ಮುಗ ಪ್ರಿಯಾ (Shruti Shanmuga Priya) ಅವರ ಪತಿ ಅರವಿಂದ್ ಶೇಖರ್ (Aravinda Shekar) ಅವರು ಹಾರ್ಟ್ ಅಟ್ಯಾಕ್‌ನಿಂದ (Heart Attack) ನಿಧನರಾಗಿದ್ದಾರೆ. ಕಳೆದ ವರ್ಷ ಈ ಜೋಡಿ ಮದುವೆಯಾಗಿದ್ದರು. 30ನೇ ವಯಸ್ಸಿಗೆ ಅರವಿಂದ್ ಮೃತಪಟ್ಟಿದಾರೆ. ಅವರ ಸಾವು ಪತ್ನಿ ಶ್ರುತಿ ಮತ್ತು ಕುಟುಂಬಕ್ಕೆ ಆಘಾತವುಂಟು ಮಾಡಿದೆ. ಇದನ್ನೂ ಓದಿ:‘ಕಾರ್ತಿಕೇಯ 2’ ನಿರ್ದೇಶಕನ ಜೊತೆ ಕೈ ಜೋಡಿಸಿದ ನಾಗಚೈತನ್ಯ

ವಾಣಿ ರಾಣಿ(Vani Rani) , ಕಲ್ಯಾಣಿ ಪರಿಸು, ಭಾರತಿ ಕಣ್ಣಮ್ಮ ಎಂದು ತಮಿಳು ಸೀರಿಯಲ್ ಮೂಲಕ ಮಗಗೆದ್ದ ನಟಿ ಶ್ರುತಿ ಶಷ್ಮುಗ ಪ್ರಿಯಾ ಅವರಿಗೆ ಪತಿ ಅರವಿಂದ್ ಸಾವು ಶಾಕ್ ಕೊಟ್ಟಿದೆ. ಶ್ರುತಿ ಹಾಗೂ ಅರವಿಂದ್ ಅವರು ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದರು. ಕಳೆದ ವರ್ಷ ಮೇ ತಿಂಗಳಲ್ಲಿ ಇಬ್ಬರೂ ಮದುವೆ ಆದರು. ಶ್ರುತಿ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ನಂತರ ಕಿರುತೆರೆಗೆ ಕಾಲಿಟ್ಟರು.

ಶ್ರುತಿ ಶಣ್ಮುಗ ಅವರ ಪತಿ ಅರವಿಂದ್ ಅವರು ಬಾಡಿ ಬಿಲ್ಡರ್ (Body Builder) ಆಗಿದ್ದರು. ದೇಹದ ತೂಕ ಇಳಿಸಿಕೊಳ್ಳಲು ಅವರು ಟ್ರೇನಿಂಗ್ ನೀಡುತ್ತಿದ್ದರು. 2022ರ ಮಿಸ್ಟರ್ ತಮಿಳುನಾಡು ಕೂಡ ಆಗಿದ್ದರು. ಫಿಟ್ನೆಸ್‌ಗೆ ಅವರು ಹೆಚ್ಚು ಒತ್ತು ನೀಡುತ್ತಿದ್ದರು. ಆಗಸ್ಟ್ 2ರ ಸಂಜೆ ಅವರಿಗೆ ಹೃದಯಾಘಾತ ಆಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್